ಮುಂಬೈ:ಅಪ್ರಾಪ್ತ ವಯಸ್ಕಳ ಕೈ ಹಿಡಿದು ಪ್ರಪೋಸ್​ ಮಾಡಿದ ಯುವಕನಿಗೆ ಕೋರ್ಟ್​ ಪೋಕ್ಸೋ ಕಾಯ್ದೆಯಡಿ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಯುವಕನ ವರ್ತನೆ ಬಾಲಕಿಯ ಘನತೆಗೆ ಕುತ್ತು ತಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸೆಪ್ಟೆಂಬರ್​ 2019ರಂದು ಬಾಲಕಿ ಟೀ ಪುಡಿ ತರಲೆಂದು ಮನೆ ಬಳಿ ಇರುವ ಅಂಗಡಿಗೆ ಹೋಗಿದ್ದಾಳೆ. ಅಂಗಡಿಯಿಂದ ಬಾಲಕಿಯನ್ನು ಹಿಂಬಾಲಿಸಲು ಶುರು ಮಾಡಿದ ಆರೋಪಿಯು ಆಕೆಯ ಮನೆ ಬಾಗಿಲ ತನಕ ಬಂದು ಕೈ ಹಿಡಿದು ಐ ಲವ್​ ಯೂ ಎಂದು ಹೇಳಿ ಬಳಿಕ ಈ ವಿಚಾರ ಮನೆಯಲ್ಲಿ ಹೇಳಬೇಡ ಎಂದು ಗದರಿಸಿ ಓಡಿ ಹೋಗಿದ್ದಾನೆ.
ಆರೋಪಿಯ ವರ್ತನೆಯಿಂದ ಹೆದರಿದ ಬಾಲಕಿಯು ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಸಾಕಿನಾಕಾ ಪೊಲೀಸ್​ ಠಾಣೆಯಲ್ಲಿ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಡಿಸೆಂಬರ್​ 20, 2019ರಂದು ಪೋಕ್ಸೋ ಕಾಯ್ದೆಯಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಆರೋಪಿಯನ್ನು ಕಳೆದ ವರ್ಷ ಸೆಪ್ಟೆಂಬರ್​ 05ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:ಲಂಕಾ ವಿರುದ್ಧ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್​ ಇಂಡಿಯಾ ಆಟಗಾರರು; ಕಾರಣ ಹೀಗಿದೆ
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಯುವಕ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದರ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಆರೋಪಿಯ ಪರ ವಕೀಲರು ಇದಕ್ಕೆ ಆಕ್ಷೇಪಿಸಿದ್ದು, ಯುವಕ ಹಾಗೂ ಬಾಲಕಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಎಲ್ಲಿ ಮನೆಯಲ್ಲಿ ತಿಳಿದರೆ ತನಗೆ ಮುಳುವಾಗುತ್ತದೆ ಎಂದು ಬಾಲಕಿ ಈ ರೀತಿ ಸುಳ್ಳು ಹೇಳಿದ್ದಾಳೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.
ಆರೋಪಿ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅಶ್ವಿನಿ ಲೋಖಂಡೆ ಇಬ್ಬರು ಪ್ರೀತಿಯಲ್ಲಿದ್ದರೆ, ಈ ವಿಚಾರ ಅಳುತ್ತಾ ತಾಯಿಯಲ್ಲಿ ಹೇಳುವ ಪ್ರಸಂಗ ಬಾಲಕಿಗೆ ಬರುತ್ತಿರಲಿಲ್ಲ. ಪೋಷಕರಿಗೆ ಈ ವಿಚಾರವನ್ನು ಮುಚ್ಚಿಡುತ್ತಿದ್ದಳು. ಸುದೀರ್ಘ ವಿಚಾರಣೆಯಲ್ಲಿ ಯುವಕ ತಪ್ಪಿತಸ್ಥ ಎಂದು ತಿಳಿದು ಬಂದಿದ್ದು, ಆತನಿಗೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ತೀರ್ಪು ನೀಡಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಜಡ್ಜ್​ ಹಾಗೂ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nine =
Remember me
