ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಉತ್ಸವ ನಾಡಹಬ್ಬದಂತೆ ಆಚರಿಸಲ್ಪಡುತ್ತದೆ. ಅಲ್ಲಿ ಗುರುವಾರದಿಂದ ದುರ್ಗಾ ಪೂಜೆ ಆರಂಭವಾಗುತ್ತಿದ್ದು, ದುರ್ಗಾ ಪೂಜೆಯ ಪೆಂಡಾಲ್​ ಕಾರ್ಯಕ್ರಮದಲ್ಲಿ ಗರಿಷ್ಠ 45 ಜನರಿಗಷ್ಟೇ ಪ್ರವೇಶಾವಕಾಶ ನೀಡಬಹುದು ಎಂದು ಕಲ್ಕತಾ ಹೈಕೋರ್ಟ್​ ಬುಧವಾರ ಆದೇಶಿಸಿದೆ.
ಪೆಂಡಾಲ್​ನ ಗಾತ್ರಕ್ಕನುಸಾರವಾಗಿ ಒಂದೇ ಸಮಯದಲ್ಲಿ ಒಳಪ್ರವೇಶಿಸುವವರ ಸಂಖ್ಯೆಯಲ್ಲಿ ವ್ಯತ್ಯವಾಗಲಿದೆ. ಸಾಮಾನ್ಯ ಪೆಂಡಾಲ್ ಆದರೆ 45 ಜನರು ಪ್ರವೇಶಿಸಬಹುದು. ಸಣ್ಣ ಪೆಂಡಾಲ್ ಆಗಿದ್ದರೆ 15 ಮಂದಿಗೆಷ್ಟೆ ಅವಕಾಶ. ಪ್ರತಿ ದಿನ ಪೆಂಡಾಲ್ ಒಳಗೆ ಪ್ರವೇಶಿಸುವ ಆಯೋಜಕರ ಹೆಸರನ್ನು ಪಟ್ಟಿ ಮಾಡಿ ಬೆಳಗ್ಗೆ 8 ಗಂಟೆಗೆ ಪೆಂಡಾಲ್ ಹೊರಗೆ ಹಾಕಬೇಕು ಎಂದು ನ್ಯಾಯಾಲಯ ತಿಳಿಸಿದೆ. ವಾದ್ಯಮೇಳಗಳಿಗೆ ‘ನೋ ಎಂಟ್ರಿ ಝೋನ್’ನಲ್ಲಿ ಇರಲು ಹೈಕೋರ್ಟ್ ಪೀಠ ಅವಕಾಶ ನೀಡಿದೆ.
ಇದನ್ನೂ ಓದಿ:ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್​
ಸಾರ್ವಜನಿಕರಿಗೆ ಪೆಂಡಾಲ್ ಒಳಗೆ ಪ್ರವೇಶಕ್ಕೆ ಅನುಮತಿ ಇಲ್ಲವೆಂದು ತಿಳಿಸಲಾಗಿದೆ. ದುರ್ಗಾ ಪೂಜೆಯ ಪೆಂಡಾಲ್​ಗಳನ್ನು ‘ನೋ ಎಂಟ್ರಿ ಝೋನ್’ ಎಂದು ಕರೆದಿದ್ದ ನ್ಯಾಯಾಲಯ ಕೇವಲ 25 ಆಯೋಜಕರ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಈ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಮುಖ 400 ಆಯೋಜಕರ ತಂಡವು ಅರ್ಜಿ ಸಲ್ಲಿಸಿತ್ತು. (ಏಜೆನ್ಸೀಸ್)
ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವುದಕ್ಕಾಗಿ ಕಾನೂನು ಬಾಹಿರ ಕಾರ್ಯಾಚರಣೆ ಆರೋಪ: ಗೂಗಲ್ ವಿರುದ್ಧ ದಾವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
