ಪಟನಾ: ಭಾರತದ ಮೊದಲ ಕೊವಿಡ್​-19 ಲಸಿಕೆ ‘ಕೊವಾಕ್ಸಿನ್​​’ ನ ಮಾನವರ ಮೇಲಿನ ಪ್ರಯೋಗ ಕಾರ್ಯ ಬಿಹಾರದ ಪಟನಾ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್ (ಏಮ್ಸ್-ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ​) ​ನಲ್ಲಿ ಪ್ರಾರಂಭವಾಗಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಭಾಗಿತ್ವದಲ್ಲಿ ಹೈದರಾಬಾದ್​ನ ಭಾರತ್​ ಬಯೋಟೆಕ್​ ಕಂಪನಿಯು ಈ ಕೊವಾಕ್ಸಿನ್​ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಪುಣೆಯ ಏಮ್ಸ್ ಈ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲು ಆರಂಭಿಸಿದೆ. ಮೊದಲ ಹಂತದಲ್ಲಿ 10 ಮಂದಿ ಸ್ವಯಂಸೇವಕರನ್ನು ಆಸ್ಪತ್ರೆ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ 10 ಜನರಿಗೆ ಸದ್ಯ ಮೊದಲ ಪ್ರಮಾಣದ ಲಸಿಕೆಯನ್ನು ನೀಡಲಾಗುತ್ತಿದೆ. ಹಾಗೇ ಇನ್ನೂ 14 ದಿನಗಳ ಬಳಿಕ ಅವರಿಗೆ ಎರಡನೇ ಡೋಸ್​​ ಲಸಿಕೆ ಕೊಡಲಾಗುತ್ತದೆ.ಇದನ್ನೂ ಓದಿ:ಅನಾಥವಾಗಿರುವ ಕಾರಿನ ಹತ್ತಿರ ಹೋಗೋ ಧೈರ್ಯ ಯಾರಿಗೂ ಇಲ್ಲ, ಕಾರಣ ನಂಬರ್​ ಪ್ಲೇಟ್​…!
ನಿಗದಿಪಡಿಸಿದ ಅವಧಿ ಪೂರ್ಣಗೊಂಡ ನಂತರ, ಲಸಿಕೆ ಪಡೆದ ಸ್ವಯಂ ಸೇವಕರನ್ನು ತಪಾಸಣೆಗೆ ಒಳಪಡಿಸಲಾಗುವುದು. ಅದು ಹೇಗೆ? ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಪರೀಕ್ಷಿಸಲಾಗುವುದು ಎಂದು ಏಮ್ಸ್​ ತಿಳಿಸಿದೆ.
ಕೊವಾಕ್ಸಿನ್ ಕ್ಲಿನಿಕಲ್​ ಟ್ರಯಲ್​ಗಾಗಿ ಐಸಿಎಂಆರ್​ ಆಯ್ಕೆ ಮಾಡಿದ 12 ಸ್ಥಳಗಳಲ್ಲಿ ಪುಣೆಯ ಏಮ್ಸ್​​ ಕೂಡ ಒಂದು. ಲಸಿಕೆಯ ಪ್ರಯೋಗಕ್ಕೆ 22-50ವರ್ಷದವರೆಗಿನ ಆರೋಗ್ಯವಂತರನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಈ ಹಿಂದೆ ಪಟನಾ ಏಮ್ಸ್​ನ ಸೂಪರಿಟೆಂಡಂಟ್​ ಡಾ. ಸಿ.ಎಂ.ಸಿಂಗ್​ ಹೇಳಿದ್ದರು. (ಏಜೆನ್ಸೀಸ್​)
ಸಾಕು ಇದನ್ನು ಇಲ್ಲಿಗೆ ನಿಲ್ಲಿಸಿ, ನನ್ನ ಕುಟುಂಬ ಚಿಂತೆಗೀಡಾಗಿದೆ ಎಂದು ಡ್ರೋನ್​ ಪ್ರತಾಪ್​ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
