ನವದೆಹಲಿ/ಜಿನೀವಾ:ಹಲವು ತಿಂಗಳುಗಳ ಕಾಯುವಿಕೆಯ ನಂತರ ಭಾರತದ ಮೇಡ್​ ಇನ್​ ಇಂಡಿಯಾ ಕರೊನಾ ಲಸಿಕೆಯಾದ ಕೋವಾಕ್ಸಿನ್​​ಗೆ ಅಂತೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ)ಯ ಅಂಗೀಕಾರ ಸಿಕ್ಕಿದೆ. ದೀಪಾವಳಿಯ ಈ ಶುಭ ಸಂದರ್ಭಕ್ಕೆ ಹೈದರಾಬಾದ್​​ನ ಕಂಪೆನಿಯಾದ ಭಾರತ್​ ಬಯೋಟೆಕ್​ನ ಉತ್ಪನ್ನವಾದ ಕೋವಾಕ್ಸಿನ್​​ ಲಸಿಕೆಗೆ ಎಮರ್ಜೆನ್ಸಿ ಯೂಸ್​​ ಲಿಸ್ಟಿಂಗ್​​(ಈಯುಎಲ್​) ನೀಡಲಾಗಿದೆ.
🆕 WHO has granted emergency use listing (EUL) to#COVAXIN® (developed by Bharat Biotech), adding to a growing portfolio of vaccines validated by WHO for the prevention of#COVID19.pic.twitter.com/dp2A1knGtT
— World Health Organization (WHO) (@WHO)November 3, 2021

ಡಬ್ಲ್ಯೂಎಚ್​​ಒನ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಈ ನಿಟ್ಟಿನಲ್ಲಿ ಶಿಫಾರಸ್ಸು ಮಾಡಿದ್ದು, ಜಾಗತಿಕ ಮಾನ್ಯತೆ ಪಡೆದ ಕೆಲವೇ ಲಸಿಕೆಗಳ ಪಟ್ಟಿಗೆ ಇದೀಗ ಕೋವಾಕ್ಸಿನ್​ ಕೂಡ ಸೇರಿದೆ. ಇದು ಕೋವಾಕ್ಸಿನ್​ ಪಡೆದ ಭಾರತೀಯರಿಗೆ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪ್ರಯಾಣ ಮಾಡಲು ಪೂರಕ ಪರಿಸ್ಥಿತಿಯನ್ನುಂಟು ಮಾಡಲಿದೆ. ಜೊತೆಗೆ, ಕೋವಾಕ್ಸಿನ್​​ನ ಉತ್ಪಾದನೆ, ಬಳಕೆ ಮತ್ತು ಅಂತರರಾಷ್ಟ್ರೀಯ ರಫ್ತಿಗೆ ಹೊಸ ಉತ್ತೇಜನ ಲಭಿಸಲಿದೆ.
ಇದನ್ನೂ ಓದಿ:ಹೈಕೋರ್ಟ್​ ನ್ಯಾಯಾಧೀಶರಾಗಿ ಶಿರಸಿಯ ನ್ಯಾಯವಾದಿ ಎ.ಆರ್​.ಹೆಗಡೆ ನೇಮಕ
ಐಸಿಎಂಆರ್​​ ಮತ್ತು ಪುಣೆಯ ನಾಷನಲ್ ಇನ್ಸ್​​ಟಿಟ್ಯೂಟ್ ಆಫ್ ವೈರಾಲಜಿಯ ವೈಜ್ಞಾನಿಕ ಸಹಯೋಗದೊಂದಿಗೆ ಭಾರತದಲ್ಲೇ ದೇಶೀಯವಾಗಿ ನಿರ್ಮಿಸಲಾಗಿರುವ ಏಕೈಕ ಲಸಿಕೆ ಕೋವಾಕ್ಸಿನ್​. ಕರೊನಾದ ವಿರುದ್ಧ ಶೇಕಡ 77.8 ರಷ್ಟು ಪರಿಣಾಮಕಾರಿತ್ವ ಮತ್ತು ಹೊಸ ಡೆಲ್ಟಾ ವೇರಿಯೆಂಟ್​ನ ವಿರುದ್ಧ ಶೇಕಡ 65.2 ರಷ್ಟು ಸಂರಕ್ಷಣೆ ಒದಗಿಸುತ್ತದೆ ಎನ್ನಲಾದ ಕೋವಾಕ್ಸಿನ್​ಅನ್ನು ಭಾರತದಲ್ಲಿ ಮಕ್ಕಳಿಗೂ ಬಳಸಲು ಅನುಮೋದನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
यह समर्थ नेतृत्व की निशानी है,यह मोदी जी के संकल्प की कहानी है,यह देशवासियों के विश्वास की ज़ुबानी है,यह आत्मनिर्भर भारत की दिवाली है।
Thanking@WHOfor granting emergency use listing ( EUL) to Made-in-India#Covaxin
— Dr Mansukh Mandaviya (@mansukhmandviya)November 3, 2021

ಡಬ್ಲ್ಯೂಎಚ್​ಒ ಡೈರೆಕ್ಟರ್ ಜನರಲ್ ಟೆಡ್ರೋಸ್​ ಅಧನೋಮ್ ಘೆಬ್ರೆಯೆಸಸ್ ಅವರು ಮತ್ತೊಂದು ಲಸಿಕೆ, ಕೋವಾಕ್ಸಿನ್​ಗೆ ಈಯುಎಲ್​ ನೀಡಲಾಗಿರುವುದು ಸಂತಸದ ಸಂಗತಿ ಎಂದು ಟ್ವೀಟ್​ ಮಾಡಿದ್ದಾರೆ. ಕರೊನಾ ವಿರುದ್ಧ ಹೆಚ್ಚು ಉತ್ಪನ್ನಗಳಿದ್ದಷ್ಟೂ ಒಳ್ಳೆಯದು ಎಂದಿದ್ದಾರೆ. ಭಾರತ್​ ಬಯೋಟೆಕ್​ನ ಎಂಡಿ ಡಾ.ಕೃಷ್ಣ ಎಲ್ಲಾ ಇದನ್ನು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನಸೂಖ್​ ಮಾಂಡವೀಯ ಅವರು ಇದು ಸಮರ್ಥ ನಾಯಕತ್ವ ಮತ್ತು ಆತ್ಮನಿರ್ಭರ್​ ಭಾರತ್​ ಪರಿಕಲ್ಪನೆಯ ವಿಜಯವಾಗಿದೆ ಎಂದಿದ್ದಾರೆ. ಡಬ್ಲ್ಯೂಎಚ್​ಒಗೆ ಧನ್ಯವಾದ ಹೇಳಿದ್ದಾರೆ.(ಏಜೆನ್ಸೀಸ್)
ದೊಡ್ಡ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ..? ಹೀಗೆ ಮಾಡಿ ಎಂದು ಬಿಸಿಸಿಐಗೆ ಸಲಹೆ ಕೊಟ್ಟ ಕಪಿಲ್​ದೇವ್​

ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
