ನವದೆಹಲಿ:ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆ 2ರಿಂದ 18 ವಯೋಮಿತಿಯ ಮಕ್ಕಳಿಗೆ ಸುರಕ್ಷಿತ ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಲ್ಯಾನ್ಸೆಟ್ ಇನ್​ಫೆಕ್ಷಸ್ ಡಿಸೀಸಸ್ ವರದಿ ಹೇಳಿದೆ. ವಯಸ್ಕರು ಮತ್ತು ಮಕ್ಕಳಿಗೆ ಸುರಕ್ಷಿತ ವ್ಯಾಕ್ಸಿನ್ ತಯಾರಿಸುವ ಗುರಿಯನ್ನು ನಾವು ಸಾಧಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್-19 ಸೋಂಕು ತಡೆಗೆ ಪ್ರಾಥಮಿಕ ಲಸಿಕೆ (ಅಂದರೆ ನಿಗದಿತ ಎರಡು ಡೋಸ್) ಮಾತ್ರವಲ್ಲದೆ ಬೂಸ್ಟರ್ ಡೋಸ್​ಗೂ ಕೊವ್ಯಾಕ್ಸಿನ್ ಸೂಕ್ತವಾಗಿದ್ದು ಸಾರ್ವತ್ರಿಕವಾಗಿ ಬಳಕೆಗೆ ಯೋಗ್ಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೃಷ್ಣ ಎಲ್ಲ ಶುಕ್ರವಾರ ಹೇಳಿದ್ದಾರೆ. ಕೊವ್ಯಾಕ್ಸಿನ್ (ಬಿಬಿವಿ152) ಲಸಿಕೆಯು ಮಕ್ಕಳಿಗೆ ಸುರಕ್ಷಿತ ಹಾಗೂ ಅಧಿಕ ರೋಗನಿರೋಧಕ ಶಕ್ತಿ ಸೃಷ್ಟಿಸುತ್ತದೆ ಎನ್ನುವುದು ಎರಡು ಹಾಗೂ ಮೂರನೇ ಹಂತದ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಕಂಪೆನಿ ಹೇಳಿದೆ. ಅಧ್ಯಯನದ ದತ್ತಾಂಶಗಳನ್ನು ಕೇಂದ್ರೀಯ ಔಷಧಿಗಳ ಮಾನಕ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್​ಸಿಒ) 2021ರ ಅಕ್ಟೋಬರ್​ನಲ್ಲಿ ಸಲ್ಲಿಸಲಾಗಿದ್ದು 6-18 ವಯೋಮಿತಿಯವರಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿತ್ತು.
6 ತಿಂಗಳ ಮಕ್ಕಳಿಗೂ ವ್ಯಾಕ್ಸಿನ್:ಆರು ತಿಂಗಳಿಂದ ಐದು ವರ್ಷದ ಮಕ್ಕಳಿಗೆ ಮಾಡರ್ನಾದ 2 ಡೋಸ್ ಲಸಿಕೆ ಹಾಗೂ ಆರು ತಿಂಗಳಿಂದ 4ವರ್ಷವರೆಗಿನ ಮಕ್ಕಳಿಗೆ ಫೈಜರ್​ನ 3 ಡೋಸ್ ಲಸಿಕೆ ನೀಡಲು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ (ಎಫ್​ಡಿಎ) ಶುಕ್ರವಾರ ಅನುಮೋದನೆ ನೀಡಿದೆ. ಬಹುತೇಕ ದೇಶಗಳಲ್ಲಿ ಈ ವಯೋಗುಂಪಿನ ಮಕ್ಕಳಿಗೆ ಲಸಿಕೆ ನೀಡುವ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ಕ್ರಮ ಮಹತ್ವದ್ದಾಗಿದೆ.
12 ಸಾವಿರ ಹೊಸ ಪ್ರಕರಣ:ಭಾರತದಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಕರೊನಾ ಸೋಂಕಿನ 12,000ಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. 24 ಗಂಟೆ ಅವಧಿಯಲ್ಲಿ 12,847 ಕೇಸ್​ಗಳು ವರದಿಯಾಗಿವೆ ಹಾಗೂ 14 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 63,063ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಲಾಂಗ್ ಕೋವಿಡ್ ಒಮಿಕ್ರಾನ್​ನಲ್ಲಿ ಕಮ್ಮಿ:ದೀರ್ಘ ಕಾಲದ (ಲಾಂಗ್) ಕೋವಿಡ್-19 ಸೋಂಕಿನ ಅಪಾಯ ಕರೊನಾ ವೈರಸ್​ನ ಡೆಲ್ಟಾ ಪ್ರಭೇದಕ್ಕಿಂತ ಒಮಿಕ್ರಾನ್ ತಳಿಯಲ್ಲಿ ಕಡಿಮೆಯಿರುತ್ತದೆ ಎಂದು ಬ್ರಿಟನ್​ನಲ್ಲಿ ನಡೆದ ಹೊಸ ಅಧ್ಯಯನ ತಿಳಿಸಿದೆ. ಲಂಡನ್​ನ ಕಿಂಗ್ಸ್ ಜಾರ್ಜ್ ಕಾಲೇಜ್​ನ ಸಂಶೋಧಕರು, ಝುಡ್​ಒಇ ಕೋವಿಡ್ ಸಿಂಪ್ಟಮ್ ಆಪ್ ಮೂಲಕ ಸಂಗ್ರಹಿಸಲಾದ ಡೇಟಾವನ್ನು ವಿಶ್ಲೇಷಿಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಡೆಲ್ಟಾ ಹಾವಳಿ ಸಮಯಕ್ಕೆ ಹೋಲಿಸಿದರೆ ಒಮಿಕ್ರಾನ್ ದಾಂಗುಡಿಯ ಅವಧಿಯಲ್ಲಿ ಲಾಂಗ್ ಕೋವಿಡ್ ಅಪಾಯ ಶೇ.20ರಿಂದ 50 ಕಡಿಮೆಯಿದೆ.
https://www.vijayavani.net/father-got-his-job-back-because-of-his-daughter/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − ten =
Remember me
