ನವದೆಹಲಿ:ಕೊವಿಡ್​-19ಗೆ ಹೈದರಾಬಾದ್​ನ ಭಾರತ್​ ಬಯೋಟೆಕ್​ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ ಲಸಿಕೆಯ ಕ್ಲಿನಿಕಲ್ ಪ್ರಯೋಗ ದೇಶದ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ.
ಹಾಗೇ ರೋಹ್ಟಕ್​​ನ ಪಿಜಿಐನಲ್ಲೂ ಕೂಡ ಕೊವಾಕ್ಸಿನ್​ ಕ್ಲಿನಿಕ್​ ಟೆಸ್ಟ್ ಶುರುಮಾಡಲಾಗಿತ್ತು. ಇದೀಗ ಬಂದ ವರದಿಯ ಪ್ರಕಾರ, ರೋಹ್ಟಕ್​ನ ಪೋಸ್ಟ್ ಗ್ರಾಜ್ಯುಯೇಟ್​ ಆಫ್ ಮೆಡಿಕಲ್​ ಸೈನ್ಸ್​​ ಇನ್ಸ್ಟಿಟ್ಯೂಟ್​​ನಲ್ಲಿ ಕೊವಾಕ್ಸಿನ್​ ಲಸಿಕೆಯ ಪ್ರಥಮ ಹಂತದ ಮೊದಲ ಭಾಗದ ಕ್ಲಿನಿಕಲ್​ ಪ್ರಯೋಗ ಮುಕ್ತಾಯಗೊಂಡಿದೆ ಎನ್ನಲಾಗಿದೆ.ಇದನ್ನೂ ಓದಿ:‘ಲಾಠಿ ಅಜ್ಜಿ’ಯ ಧೈರ್ಯಕ್ಕೆ ಮನಸೋತ ಸಚಿವರಿಂದ ಒಂದು ಲಕ್ಷ ಬಹುಮಾನ
ಲಸಿಕೆ ಪ್ರಯೋಗ ತಂಡದ ಪ್ರಿನ್ಸಿಪಲ್​ ಇನ್ವೆಸ್ಟಿಗೇಟರ್​ ಆಗಿರುವ ಡಾ. ಸವಿತಾ ವರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲನೇ ಹಂತದ ಎರಡನೇ ಭಾಗದ ಪ್ರಯೋಗ ಈಗಾಗಲೇ ಪ್ರಾರಂಭಗೊಂಡಿದ್ದು, ಆರು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಸ್ಥೆಯಲ್ಲಿ ಜು.17ರಿಂದ ಮಾನವರ ಮೇಲಿನ ಪ್ರಯೋಗ ಶುರುವಾಗಿದೆ. ಮೊದಲು ಮೂರು ಜನರಿಗೆ ನೀಡಲಾಗಿತ್ತು.ಇನ್ನು ದೆಹಲಿಯ ಏಮ್ಸ್​ನಲ್ಲೂ ಕೂಡ ಪ್ರಯೋಗ ಪ್ರಾರಂಭವಾಗಿದೆ. 30 ವರ್ಷದ ವ್ಯಕ್ತಿಗೆ ಕೊವಾಕ್ಸಿನ್​ ಮೊದಲ ಡೋಸ್​ ನೀಡಲಾಗಿದೆ. ಎರಡನೇ ಡೋಸ್​ನ್ನು ಎರಡು ವಾರ ಬಿಟ್ಟು ನೀಡಲಾಗುವುದು ಎಂದು ಶುಕ್ರವಾರ ಏಮ್ಸ್​ ತಿಳಿಸಿದೆ. (ಏಜೆನ್ಸೀಸ್​)
ಅಪ್ಪ ಶಾಲೆಗಾಗಿ ಇಟ್ಟಿದ್ದ 1 ಕೋಟಿ ರೂ. ಎಗರಿಸಲು ತಾನೇ ಕಿಡ್ನ್ಯಾಪ್​ ಆದ ಮಗಳು; ಒಂದು ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 6 =
Remember me
