ನವದೆಹಲಿ:ಆಗಸ್ಟ್​ 15ರ ಗುರಿ ಹೊಂದಿರುವ ದೇಶಿಯ ಕರೊನಾ ಲಸಿಕೆ ಕೊವಾಕ್ಸಿನ್​ಅನ್ನು ​ ಮೊದಲ ಹಂತದಲ್ಲಿ 375 ಜನರಿಗೆ ನೀಡಲಾಗುತ್ತಿದೆ.ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್​ಅನ್ನು ಮಾನವರ ಮೇಲೆ ಪ್ರಯೋಗ (ಕ್ಲಿನಿಕಲ್​ ಟ್ರಯಲ್​) ಮಾಡಲಾಗುತ್ತಿದೆ.
ಅತ್ಯಂತ ಭರವಸೆದಾಯಕ ಎನಿಸಿರುವ ಈ ಲಸಿಕೆಯ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​ ) ಸಾಥ್​ ನೀಡಿದೆ. ಲಸಿಕೆಗೆ ಒಳಗಾಗುವ ವ್ಯಕ್ತಿಗಳ ನೋಂದಣಿಗೆ ಜುಲೈ 13ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ;ಮಾಂಸ ತಿನ್ನಬೇಡಿ; ಬಂದಿದೆ ಮತ್ತೊಂದು ಮಹಾಮಾರಿ; ಚಿಕಿತ್ಸೆ ಲಭಿಸದಿದ್ದಲ್ಲಿ 24 ತಾಸಿನಲ್ಲಿ ಸಾವು; ಚೀನಾ ಎಚ್ಚರಿಕೆ
ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿಯ ಸಂಶೋಧಕರು ಮಾಹಿತಿ ನೀಡಿದ್ದಾರೆ.
ಆಗಸ್ಟ್​ 15ಕ್ಕೆ ಈ ಲಸಿಕೆ ಹಣೆಬರಹವನ್ನು ತಿಳಿದುಕೊಳ್ಳಲು ಆತುರ ತೋರಿಸಲಾಗುತ್ತಿದೆಯಾದರೂ, ಮೊದಲ ಹಂತದ ಪ್ರಯೋಗವೇ ಮೂರು ತಿಂಗಳವರೆಗೆ ನಡೆಯಲಿದೆ ಎಂದು ಈ ಕಾರ್ಯದಲ್ಲಿ ತೊಡಗಿಕೊಂಡಿರುವ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್​ 15ರ ವೇಳೆಗೆ ರೊಗಿಗಳ ಬಳೆಗೆ ದೊರೆಯುವುದು ಅಸಾಧ್ಯ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ;ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ
ಇನ್ನೊಂದೆಡೆ, ಲಸಿಕೆಯ ಕ್ಲಿನಿಕಲ್​ ಟ್ರಯಲ್​ನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಮಾಡೆರ್ನಾ ಕಂಪನಿ ಅಂತಿಮ ಹಂತದಲ್ಲಿ 30,000 ಜನರ ಮೇಲೆ ಔಷಧ ಪ್ರಯೋಗಿಸಲಿದೆ. ಈ ಕಾರ್ಯವನ್ನು ಕೊಂಚ ವಿಳಂಬಗೊಳಿಸಿದೆ ಎಂದು ಹೇಳಲಾಗಿದೆ. ಆಕ್ಸ್​ಫರ್ಡ್​ ವಿವಿಯ ಲಸಿಕೆ ಪ್ರಯೋಗ ಮೂರನೇ ಹಂತದಲ್ಲಿ ಮುಂದುವರಿದಿದೆ.
ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 15 =
Remember me
