ಮುಂಬೈ:ಸಾಕಷ್ಟು ರಾಜಕೀಯ ಜಟಾಪಟಿಯ ಬಳಿಕ ಮಹಾರಾಷ್ಟ್ರದ ಸಿಎಂ ಗಾದಿಯನ್ನು ಒಲಿಸಿಕೊಂಡಿರುವ ಉದ್ಧವ್​ ಠಾಕ್ರೆ ಅವರ ಮನೆ ಬಾಗಿಲಿಗೇ ಕೋವಿಡ್​ 19 ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮಾತೋಶ್ರೀ ಸುತ್ತಮುತ್ತಲಿನ ಪ್ರದೇಶದಲ್ಲಿ ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​ ಮತ್ತು ಮುಂಬೈ ಪೊಲೀಸರು ಜನಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದ್ದಾರೆ.
ಮಾತೋಶ್ರೀ ಎದುರಿಗೆ ಇದ್ದ ಚಹಾ ಅಂಗಡಿಯಲ್ಲಿ ಸಿಎಂ ಮನೆಯ ಸಿಬ್ಬಂದಿ ಅಲ್ಲದೆ ಅವರ ಬೆಂಗಾವಲು ಪಡೆ ಸಿಬ್ಬಂದಿ ಎಲ್ಲರೂ ಚಹಾ ಕುಡಿಯುತ್ತಿದ್ದರು. ಇದೀಗ ಆ ಅಂಗಡಿಯ ಮಾಲೀಕನಿಗೇ ಕರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಚಹಾ ಅಂಗಡಿಯ ಮಾಲಿಕ ಕಳೆದ ನಾಲ್ಕು ದಿನಗಳಿಂದ ಕೆಮ್ಮು, ಶೀತ ಮತ್ತು ಜ್ವರದಿಂದ ಬಳಲುತ್ತಿದ್ದು, ಕರೊನಾ ಸೋಂಕಿನ ಕುರುಹು ತೋರಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಜೋಗೇಶ್ವರಿಯಲ್ಲಿರುವ ಹೃದಯ ಸಾಮ್ರಾಟ್​ ಬಾಳಾ ಸಾಹೇಬ್​ ಠಾಕ್ರೆ ಟ್ರೌಮಾ ಕೇರ್​ ಮುನ್ಸಿಪಲ್​ ಹಾಸ್ಪಿಟಲ್​ಗೆ ದಾಖಲಿಸಲಾಗಿತ್ತು. ಆತನ ಗಂಟಲ ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆತನಿಗೆ ನೋವೆಲ್​ ಕರೊನಾ ವೈರಸ್​ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ದರಿಂದ ಈ ಪ್ರದೇಶದಲ್ಲಿ ಜನ ಮತ್ತು ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರೊನಾ ಲಾಕ್​ಡೌನ್​ 14ರ ನಂತರವೂ ಮುಂದುವರಿವ ಸಾಧ್ಯತೆ, ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಜಾವ್ಡೇಕರ್​ ಸುಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
