
ನವದೆಹಲಿ:ಕರೊನಾ ವೈರಸ್​ ಸೋಂಕು ಇರುವ ಶಂಕೆಯಲ್ಲಿ ದೇಶದಾದ್ಯಂತ ಸಾವಿರಾರು ಜನರಿಗೆ 14 ದಿನಗಳ ಹೋಂಕ್ವಾರಂಟೈನ್​ನಲ್ಲಿ ಇರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಹೋಂಕ್ವಾರಂಟೈನ್​ನಲ್ಲಿರುವವರು ಬಳಸಿ, ಬಿಸಾಡಿದ ಬಯೋಮೆಡಿಕಲ್​ ವೇಸ್ಟ್​ ಅನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಕರೊನಾ ವೈರಸ್​ ಸೋಂಕು ಸಾಂಕ್ರಾಮಿಕವಾಗಿ ಹರಡುವ ಭೀತಿ ಎದುರಾಗಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಪ್ರಕಾರ ಹೋಂಕ್ವಾರಂಟೈನ್​ನಲ್ಲಿರುವವರು ಬಳಸಿದ ಮಾಸ್ಕ್​ಗಳು, ಗ್ಲೌಸ್​ಗಳನ್ನು ಬಯೋಮೆಡಿಕಲ್​ ವೇಸ್ಟ್​ ಎಂದು ವರ್ಗೀಕರಿಸಿದೆ. ಈ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸಾಮಾನ್ಯ ಬಯೋಮೆಡಿಕಲ್​ ವೇಸ್ಟ್​ ಸಂಸ್ಕರಣೆ ಮತ್ತು ವಿಲೇವಾರಿ ಸೌಲಭ್ಯಗಳಲ್ಲಿ (ಸಿಬಿಡಬ್ಲ್ಯುಟಿಎಫ್​) ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ದುರದೃಷ್ಟವಶಾತ್​, ಬಯೋಮೆಡಿಕಲ್​ ವೇಸ್ಟ್​ ಅನ್ನು ಸಾಮಾನ್ಯ ತ್ಯಾಜ್ಯದ ರೀತಿಯಲ್ಲಿ ಸದ್ಯ ನಿರ್ವಹಿಸಲಾಗುತ್ತಿದೆ. ಇದರಿಂದ ಮುಂದೆ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸಿಪಿಸಿಬಿ ಎಚ್ಚರಿಸಿದೆ.
ಹೋಂಕ್ವಾರಂಟೈನ್​ನಲ್ಲಿರುವವರ ರಕ್ತ ಮತ್ತು ಗಂಟಲ ದ್ರವದ ಮಾದರಿಯ ಪರೀಕ್ಷೆಯ ಬಳಿಕ ಅವರಲ್ಲಿ ಕರೋನಾ ಸೋಂಕು ದೃಢಪಡುವುದರಿಂದ ಅಪಾಯ ಹೆಚ್ಚಾಗಲು ಕಾರಣ ಎಂದು ಅದು ಹೇಳಿದೆ.
ಸಂಗ್ರಹಣ ಮತ್ತು ವಿಲೇವಾರಿ ಹೇಗೆ?ಸಿಪಿಸಿಬಿಯ ಪ್ರಕಾರಣ ಹೋಂಕ್ವಾರಂಟೈನ್​ನಲ್ಲಿರುವವರಿಂದ ಉತ್ಪತ್ತಿಯಾಗುವ ಬಯೋಮೆಡಿಕಲ್​ ವೇಸ್ಟ್​ ಅನ್ನು ಹಳದಿ ಬಣ್ಣದ ಬ್ಯಾಗ್​ಗಳಲ್ಲಿ ಇರಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಇದಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರೊಟೆಕ್ಟಿವ್​ ಗೇರ್​ಗಳನ್ನು ಹಾಕಿಕೊಂಡಿರುವ ತರಬೇತಿ ಪಡೆದ ಸಿಬ್ಬಂದಿಯ ಮೂಲಕ ಈ ತ್ಯಾಜ್ಯವನ್ನು ಸಂಗ್ರಹಿಸಬೇಕು. ಹಾಗೆ ತ್ಯಾಜ್ಯ ಸಂಗ್ರಹಿಸಿದ ಮನೆಯ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಿದೆ. ಬಳಿಕ ಅದನ್ನು ಸಿಬಿಡಬ್ಲ್ಯುಟಿಎಫ್​ ಮೂಲಕ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.
ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರದಲ್ಲಿ ಬಯೋಮೆಡಿಕಲ್​ ವೇಸ್ಟ್​ ಸಂಗ್ರಹಣೆ ಮತ್ತು ವಿಲೇವಾರಿ ಹೊಣೆಗಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದೆ. ಎರಡು ವಲಯಕ್ಕೆ ಒಂದರಂತೆ ಒಟ್ಟು 8 ವಲಯಗಳಲ್ಲಿನ ಬಯೋಮೆಡಿಕಲ್​ ತ್ಯಾಜ್ಯ ಸಂಗ್ರಹಣೆ ಹೊಣೆಗಾರಿಕೆಯನ್ನು ನಾಲ್ಕು ಸಂಸ್ಥೆಗಳಿಗೆ ಕೊಡಲಾಗಿದೆ.
ಕರೊನಾ ವೈರಸ್‌ ಸಮಯದಲ್ಲಿ ಒತ್ತಡ ನಿರ್ವಹಣೆ ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
