ನವದೆಹಲಿ:ಕರೊನಾ ಶಂಕಿತ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿತ್ತೇ ಎಂಬ ಬಗ್ಗೆ ಪ್ರಯೋಗಾಲಯದ ಪರೀಕ್ಷಾ ವರದಿಗೆ ಕಾಯದೇ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈ ಕುರಿತಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ಶವ ಸಂಸ್ಕಾರವನ್ನು ಮಾತ್ರ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆಸಲು ಸಂಬಂಧಿಕರಿಗೆ ಸೂಚಿಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಹೆಚ್ಎಸ್) ಡಾ.ರಾಜೀವ್ ಗರ್ಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಾನವೀಯತೆಯನ್ನೇ ಮರೆಸುತ್ತಿದೆ ಕರೊನಾ; ತಂದೆಯ ಶವವಿಡಲು ಐಸ್​ಕ್ರೀಮ್​ ಫ್ರೀಜರ್​ ಖರೀದಿಸಿದರು
ಯಾವುದೇ ಕಾರಣಕ್ಕಾದರೂ ಮೃತಪಟ್ಟರೆ ಎಲ್ಲರಿಗೂ ಕರೊನಾ ಸೋಂಕಿನ ಪರೀಕ್ಷೆ ಮಾಡಿಸುವುದು ಸದ್ಯದ ಮಟ್ಟಿಗೆ ಕಡ್ಡಾಯವಾಗಿದೆ. ಮೃತಪಟ್ಟವರಿಗೆ ಸೋಂಕು ತಗುಲಿದ್ದೇ ಹೌದಾದರೆ ಅವರ ಸಂಪರ್ಕಕ್ಕೆ ಬಂದಿರುವವರೆಲ್ಲರಿಗೂ ಪರೀಕ್ಷೆ ಮಾಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ. ಆದರೆ ಮೃತಪಟ್ಟ ನಂತರ ಅವರಿಗೆ ಸೋಂಕು ತಗುಲಿದೆಯೋ ಇಲ್ಲವೋ ಎಂಬ ಬಗ್ಗೆ ಆಸ್ಪತ್ರೆಗಳು ಪರೀಕ್ಷಾ ವರದಿಯನ್ನು ದೃಢೀಕರಿಸಿದ ನಂತರವಷ್ಟೇ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಶವಸಂಸ್ಕಾರಕ್ಕೆ ಅನುಮತಿ ನೀಡಲಾಗುತ್ತಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ‘ಡೆಡ್ ಬಾಡಿ ಮ್ಯಾನೇಜ್‌ಮೆಂಟ್‌ನ ಮಾರ್ಗದರ್ಶಿ ಸೂತ್ರಗಳ’ ಪ್ರಕಾರ ಈ ದೇಹಗಳ ಶವಸಂಸ್ಕಾರಕ್ಕೆ ಕೆಲವೊಂದು ಮಾರ್ಗಸೂಚಿ ರೂಪಿಸಲಾಗಿದ್ದು, ಅದರಂತೆಯೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.(ಏಜೆನ್ಸೀಸ್‌)
ಕರೊನಾ ಸಮಯದಲ್ಲಿ ಅಸಹನೆ, ಕೌಟುಂಬಿಕ ದೌರ್ಜನ್ಯ… ಮಾಡಬೇಕಿರುವುದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
