ನವದೆಹಲಿ:ಕೋವಿಡ್-19 ನಿಂದಾಗಿ ಆಗಿರುವ ಶೈಕ್ಷಣಿಕ ವರ್ಷದ ನಷ್ಟಭರ್ತಿಗೆ ಕ್ರಮಗಳನ್ನು ತೆಗೆದುಕೊಂಡಿರುವ ಸೆಂಟ್ರಲ್ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಶನ್​ (ಸಿಬಿಎಸ್​ಇ) ಸುಧಾರಿತ ಪಠ್ಯಕ್ರಮಗಳನ್ನೂ ಸಿದ್ಧಪಡಿಸುತ್ತಿದೆ.ಹೊಸ ಪಠ್ಯಕ್ರಮದ ಗಾತ್ರ ಒಂದು ತಿಂಗಳ ಪಠ್ಯಕ್ರಮದಷ್ಟು ಕಡಿತವಾಗಿರಲಿದೆ ಎಂದು ಸಿಬಿಎಸ್​ಇ ಅಧ್ಯಕ್ಷ ಮನೋಜ್​ ಅಹುಜಾ ತಿಳಿಸಿದ್ದಾರೆ.
ಇದನ್ನೂ ಓದಿ:ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ
ಶಿಕ್ಷಣ ವ್ಯವಸ್ಥೆಯಲ್ಲಿ ದಿಢೀರ್ ಬದಲಾವಣೆ ತರುವುದು ಸಾಧ್ಯವಿಲ್ಲ.ಹಾಗೇನಾದೂ ಮಾಡಿದರೆ ಗೊಂದಲ ಮತ್ತು ಅನಿಶ್ಚಿತತೆ ಕಾಡಲಿದೆ. ಪಠ್ಯಕ್ರಮದ ಸುದಾರಣೆಯನ್ನು ಕಲಿಕಾ ಫಲಿತಾಂಶವನ್ನು ನೋಡಿಕೊಂಡು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ.ನಾವು ಪಠ್ಯಕ್ರಮ ಸುಧಾರಣೆ ಮಾಡುತ್ತಿದ್ದೇವೆ. ಪ್ರಮುಖ ವಿಚಾರಗಳನ್ನು ಹಾಗೆಯೇ ಉಳಿಸಿಕೊಂಡು ಪಠ್ಯಕ್ರಮ ಪರಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!
ಅವರು ಅಶೋಕಾ ಯೂನಿವರ್ಸಿಟಿ ಆಯೋಜಿಸಿದ್ದ ‘ಫ್ಯೂಚರ್ ಆಫ್ ಸ್ಕೂಲ್ಸ್​: ಓವರ್​ಕಮಿಂಗ್​ ಕೋವಿಡ್​​-19 ಚಾಲೆಂಜ್​ ಆ್ಯಂಡ್ ಬಿಯಾಂಡ್​’ಎಂಬ ವಿಷಯ ಕುರಿತ ವರ್ಚುವಲ್ ಸಮಾವೇಶದಲ್ಲಿ ಭಾಗಿಯಾಗಿದ್ದರು.ಒಂದೊಮ್ಮೆ ಕೆಲವೊಂದು ವಿಚಾರಗಳು ಪುನರಾವರ್ತನೆಗೊಂಡರೆ ಅಥವಾ ಒಂದೇ ಪರಿಕಲ್ಪನೆ ಮೇಲೆ ಹೆಚ್ಚುವರಿ ಕೆಲಸ ಆಯಿತೆಂದರೆ ಅವುಗಳನ್ನೆಲ್ಲ ಪರಿಶೀಲಿಸಿ ಸರಿಪಡಿಸಬೇಕು. ಇದೆಲ್ಲವನ್ನೂ ಒಂದು ತಿಂಗಳ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಜೂನ್ 12ರಂದು ನಡೆಯಲಿದೆ ಜಿಎಸ್​ಟಿ ಕೌನ್ಸಿಲ್ ಸಭೆ: ಚರ್ಚೆಯಾಗಲಿವೆ ಮಹತ್ವದ ವಿಚಾರಗಳು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್​ ‘ನಿಶಂಕ್​’ ಏಪ್ರಿಲ್​ ತಿಂಗಳಲ್ಲಿ ಸಿಬಿಎಸ್​ಇ ಪಠ್ಯಕ್ರಮ ಕಡಿತಗೊಳಿಸಿ ಸುಧಾರಿತ ಪಠ್ಯಕ್ರಮ ಪ್ರಕಟಿಸಲಿದೆ ಎಂದು ಹೇಳಿದ್ದರು.ಇದಕ್ಕೆ ಪೂರಕವಾಗಿ ಎಚ್​ಆರ್​ಡಿ ಸಚಿವಾಲಯವೂ ಪರ್ಯಾಯ ವೇಳಾಪಟ್ಟಿಯೊಂದಿಗೆ ಲಾಕ್​ಡೌನ್​ ಅವಧಿಯ ಯೋಜನೆಯೊಂದಿಗೆ ಮುಂದೆ ಬಂದಿತ್ತು.ದೇಶದ ಬಹುತೇಕ ಶಾಲಾ ಕಾಲೇಜುಗಳು, ವಿವಿಗಳು ಮಾರ್ಚ್ 16ರಿಂದ ಮುಚ್ಚಿವೆ. (ಏಜೆನ್ಸೀಸ್)
ಟಾರ್ಗೆಟ್ ಚೀನಾ ಕಾರ್ಟೂನ್ ಅಪ್ಲೋಡ್ ಮಾಡಿದ ಅಮೂಲ್​ ಟ್ವಿಟರ್ ಖಾತೆ ಕೆಲವು ಗಂಟೆಗಳ ಹೊತ್ತು ಬಂದ್​!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
