ನವದೆಹಲಿ:ಲಾಕ್​ಡೌನ್​ ಪ್ರಕೃತಿಗೆ ವರವಾಗಿ ಪರಿಣಮಿಸಿದೆ. ನದಿಗಳ ನೀರು ಕುಡಿಯುವಷ್ಟು ಶುದ್ಧವಾಗಿದೆ. ಅದರಲ್ಲೂ ಗಂಗಾ ನದಿ ನೀರು ಕರೊನಾ ವೈರಸ್​ ಹಿಮ್ಮೆಟ್ಟಿಸುವ ಶಕ್ತಿ ಪಡೆದಿದೆ ಎಂಬೆಲ್ಲ ವಿಶ್ಲೇಷಣೆಗಳು ನಡೆದಿವೆ.
ಮಾತ್ರವಲ್ಲ, ವಾತಾವರಣದಲ್ಲಿನ ಮಾಲಿನ್ಯ ಪ್ರಮಾಣವೂ ಕೂಡ ತೀವ್ರವಾಗಿ ಕುಸಿದಿದೆ. ವಾಯು ಗುಣಮಟ್ಟ ಎರಡು ದಶಕಗಳ ಹಿಂದಿನಷ್ಟು ಉತ್ತಮವಾಗಿದೆ ಎಂದು ತಜ್ಞರೇ ಹೇಳಿದ್ದರು. ಈ ಎಲ್ಲ ಕಾರಣಗಳಿಂದ ಲಾಕ್​ಡೌನ್​ ಪ್ರಕೃತಿಗೆ ವರದಾನವೆಂದೇ ಹೇಳಲಾಗಿತ್ತು. ಆದರೆ, ಅರಣ್ಯದ ವಿಚಾರದಲ್ಲಿ ಇದನ್ನು ಹೇಳುವಂತಿಲ್ಲ….!
ಇಂದಿಗೂ ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರು ಆಹಾರ ಬೇಯಿಸಲು ಉರುವಲಿಗಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ. ಲಾಕ್​ಡೌನ್​ ಅವಧಿ ಅರಣ್ಯದ ಮೇಲಿನ ಅವಲಂಬನೆಯನ್ನು ಇನ್ನಷ್ಟು ಹೆಚ್ಚಿಸಿದೆ ಹಾಗೂ ಕಾಡಿನ ಮೇಲೆ ದುಷ್ಪರಿಣಾಮವನ್ನೇ ಬೀರಿದೆ.
ಇದನ್ನೂ ಓದಿ;ಟ್ರೋಲ್​, ಡೀಸೆಲ್​ ಮಾರಾಟ ಮೊದಲಿನಂತಾಗಲು ಇನ್ನಾರು ತಿಂಗಳು ಬೇಕು…!
ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್​ ಎಕನಾಮಿಕ್​ ಫೋರಂ) ಹಾಗೂ ಸುದ್ದಿಸಂಸ್ಥೆ ರಾಯ್ಟರ್ಸ್​ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ವಿಚಾರವೆಂದರೆ ಲಾಕ್​ಡೌನ್​ ಅವಧಿ ಅರಣ್ಯಕ್ಕೆ ಗಂಡಾಂತರವಾಗಿ ಪರಿಣಮಿಸಿದೆ ಎಂಬುದು.
ಬಡವರು ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ ಅಥವಾ ತಾತ್ಕಾಲಿಕವಾಗಿ ಉದ್ಯೋಗದಿಂದ ದೂರಾಗಿದ್ದಾರೆ. ಹೀಗಾಗಿ ಉರುವಲು ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಕಾಡನ್ನು ಕಡಿಯುತ್ತಿದ್ದಾರೆ. ಏಕೆಂದರೆ ಜನರು ಉರುವಲು, ಆಹಾರ, ಸೂರು ಮೊದಲಾದವುಗಳಿಗಾಗಿ ಅರಣ್ಯವನ್ನು ಅವಲಂಬಿಸಿದ್ದಾರೆ. ಕೆಲಸ ಕಳೆದುಕೊಂಡ ಕೋಟ್ಯಂತರ ಜನರು ಗ್ರಾಮಗಳಿಗೆ ಮರಳುತ್ತಿದ್ದು, ಅರಣ್ಯದ ಮೇಲಿನ ಅವಲಂಬನೆ ಹೆಚ್ಚಾಗುವಂತಾಗಿದೆ.
ಅಂದಾಜಿನಂತೆ 100 ಕೋಟಿ ಜನರು ಅರಣ್ಯದಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಅವಲಂಬಿಸಿದ್ದಾರೆ. 240 ಕೋಟಿ ಜನರು ಕಾಡಿನ ಉರುವಲನ್ನು ಬಳಸುತ್ತಾರೆ. ಕಡುಬಡತನದಲ್ಲಿರುವ 10ರಲ್ಲಿ 9 ಜನರು ಜೀವನಾಧಾರಕ್ಕೆ ಕಾಡನ್ನೇ ಅವಲಂಬಿಸಿದ್ದಾರೆ.
ಇದನ್ನೂ ಓದಿ;ಆಘಾತಕಾರಿ… 100 ಸ್ಮಾರ್ಟ್​ ಸಿಟಿ ಯೋಜನೆಗಳಲ್ಲಿ ಆರೋಗ್ಯ ಕ್ಷೇತ್ರ ಲೆಕ್ಕಕ್ಕೇ ಇಲ್ಲ
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ನಿರ್ದೇಶಕ ಮೆಟ್​ ವೀಕಿ ಹೇಳುವ ಪ್ರಕಾರ ಜಗತ್ತಿನ ಮುಕ್ಕಾಲು ಪಾಲು ಜನರು ಅಡುಗೆಗೆ ಕಾಡಿನ ಉರುವಲನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಆಹಾರ ಮತ್ತು ಉರುವಲು ಪಡೆಯಲು ಜನರು ಮರಗಳನ್ನು ಕಡಿಯುತ್ತಾರೆ. ಕೋವಿಡ್​ ಕಾಲದಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಕರಿತಾದ ವರದಿಯು ಕೋವಿಡ್​ನಿಂದಾದ ಸಂಕಷ್ಟವನ್ನು ಉಲ್ಲೇಖಿಸಿದೆ.
ವಿಶ್ವವು 1990ರಿಂದ 420 ದಶಲಕ್ಷ ಹೆಕ್ಟೇರ್​ ಅರಣ್ಯವನ್ನು ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾದ ಮೂರರಷ್ಟು ಭೂಪ್ರದೇಶದ ಕಾಡು ನಾಶವಾಗಿದೆ. ಜತೆಗೆ, ಕೋವಿಡ್​ ಕಾಲಮಾನ ಅರಣ್ಯಕ್ಕೆ ಕಂಟಕವಾಗಿಯೇ ಪರಿಣಮಿಸಿದೆ ಎಂಬುದು ಸತ್ಯ.
ಸಂಬಳ ನೀಡಲು ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಆನ್​ಲೈನ್​ ಅಭಿಯಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
