ನವದೆಹಲಿ:ಇಡೀ ದೇಶ ಕರೊನಾ ಸಂಕಷ್ಟದಿಂದ ಪಾರಾಗಲು ಲಭ್ಯವಿರುವ ಮಾರ್ಗ, ವಿಧಾನಗಳನ್ನು ಅನುಸರಿಸುತ್ತಿದೆ. ಆದರೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಇದು ಇನ್ನಷ್ಟು ಕಳವಳ ಮೂಡಿಸಿದೆ. ಇದರ ನಡುವೆಯೇ ಹಲವು ಶುಭ ಸೂಚನೆಗಳು ದೊರಕುತ್ತಿವೆ.
ಸೋಂಕಿತರ ಸಂಖ್ಯೆ ಏರುತ್ತಿರುವ ನಡುವಯೇ ಹಲವು ರಾಜ್ಯಗಳಲ್ಲಿ ಇದು ಇಳಿಮುಖವಾಗುತ್ತಿದೆ ಎಂದು ಏಮ್ಸ್​ನ ನಿರ್ದೇಶಕ ಹಾಗೂ ಕೋವಿಡ್​19 ರಾಷ್ಟ್ರೀಯ ಕಾರ್ಯಪಡೆ ಸದಸ್ಯರೂ ಆಗಿರುವ ಡಾ.ರಣದೀಪ್​ ಗುಲೇರಿಯಾ ಹೇಳಿದ್ದಾರೆ.
ಇದನ್ನೂ ಓದಿ;ವಿಶ್ವಸಂಸ್ಥೆಯಿಂದಲೂ ಮೆಚ್ಚುಗೆ ಪಡೆದ ಕೇರಳದಲ್ಲೇನಾಗ್ತಿದೆ? ಬೆಚ್ಚಿ ಬಿದ್ದಿದ್ದೇಕೆ ದೇವರ ನಾಡು?
ದೆಹಲಿಯಲ್ಲಿ ಕೋವಿಡ್​ ಇಳಿಮುಖವಾಗಿದೆ. ದೇಶದ ಇತರ ಸ್ಥಳಗಳಲ್ಲೂ ಇಂಥದ್ದೇ ವಿದ್ಯಮಾನ ಕಂಡು ಬರುತ್ತಿದೆ. ಮುಂಬೈ, ಅಹಮದಾಬಾದ್​, ದಕ್ಷಿಣದ ಕೆಲ ಭಾಗಗಳಲ್ಲಿಯೂ ಕೋವಿಡ್​ ನಿಯಂತ್ರಣಕ್ಕೆ ಬರುತ್ತಿದೆ (Curve Flattening ) ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕೋವಿಡ್​ ಪ್ರಕರಣಗಳೀಗ ಉತ್ತುಂಗ ತಲುಪಿದ್ದಾಗಿದೆ. ಈಗ ಕೆಳಮುಖ ಬೆಳವಣಿಗೆ ಕಂಡುಬರುತ್ತಿದೆ. ಆದರೆ, ಇದರ ನಡುವೆಯೂ ಕೆಲವು ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವುದು ವರದಿಯಾಗಿದೆ. ಒಮ್ಮೆ ಇಳಿಮುಖವಾದಾಗ ಜನರು ನಾವು ಮೈಮರೆಯುತ್ತಿದ್ದಾರೆ. ಮಾಸ್ಕ್​ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇದ್ದರೆ, ಇದು ಮತ್ತೊಂದು ಸುತ್ತಿನ ಏರಿಕೆಗೆ ಕಾರಣವಾಗುತ್ತಿದೆ ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ;ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?
ದೆಹಲಿಯಲ್ಲಿ ಸೋಂಕಿಗೆ ಒಳಗಾಗಿದ್ದೇ ಹಲವು ಜನರಿಗೆ ಗೊತ್ತಿರಲಿಲ್ಲ. ಯಾವುದೇ ಚಿಕಿತ್ಸೆ ಪಡೆಯದೇ ಅವರು ಗುಣವಾಗಿದ್ದಾರೆ. ಇದು ಶುಭಸುದ್ದಿಯಾದರೆ, ಸೋಂಕಿಗೆ ಒಳಗಾಗಿದ್ದು ಗೊತ್ತಾಗದೆ ಅವರು ಇತರರಿಗೆ ಹಬ್ಬಿಸಿದ್ದಾರೆ. ಹೀಗಾಗಿ ಸೋಂಕಿನ ಬಗ್ಗೆ ಜಾಗೃತರಾಗಿರಬೇಕು ಎಂದು ಅವರು ಹೇಳುತ್ತಾರೆ.
ಇನ್ನೊಂದು ವಿಚಾರವೆಂದರೆ, ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ರೊಗ ನಿರೋಧಕ ಶಕ್ತಿ ಆತನನ್ನು ಮೂರು ತಿಂಗಳವರೆಗೆ ವೈರಸ್​ನಿಂದ ಕಾಪಾಡಬಲ್ಲುದು. ನಂತರ ಅದು ನಶಿಸುತ್ತದೆ ಎಂಬುದು ರಕ್ತ ಪರೀಕ್ಷೆಯಿಂದ ಗೊತ್ತಾಗಿದೆ. ಇದಲ್ಲದೆ, ಭಾರತೀಯರಲ್ಲಿರೋಗ ನಿರೋಧಕ ಶಕ್ತಿ ಸಾಮಾನ್ಯವಾಗಿಯೇ ಹೆಚ್ಚಾಗಿದೆ. ಇದಕ್ಕೆ ಬಿಸಿಜಿ ಚುಚ್ಚುಮದ್ದು ಕೂಡ ಕಾರಣವಾಗಿರಬಹುದು ಎಂದು ಅವರು ವಿಶ್ಲೇಷಿಸುತ್ತಾರೆ.
ಸೆಪ್ಟಂಬರ್​ 5ರಂದು ಶಾಲಾ- ಕಾಲೇಜುಗಳ ಮರು ಆರಂಭ; ಎಲ್ಲಿ? ಯಾರು ಹೇಳಿದ್ದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 12 =
Remember me
