ಹರಿದ್ವಾರ:ಮಹಾಮಾರಿ ಕರೊನಾ ವೈರಸ್​ ಮಣಿಸಲು ಔಷಧ ಕಂಡುಹಿಡಿಯುವ ಪ್ರಯತ್ನವು ವಿಶ್ವದ್ಯಾಂತ ನಡೆಯುತ್ತಿರುವ ನಡುವೆಯೇ ಯೋಗ ಗುರು ಬಾಬಾ ರಾಮದೇವ್​ ನೇತೃತ್ವದ ಪತಂಜಲಿ ಆಯುರ್ವೇದಿಕ್​ ಸಂಸ್ಥೆಯು ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇಂದು ಆಯುರ್ವೇದಿಕ್​ ಔಷಧ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
“ಕರೊನಿಲ್​” ಹೆಸರಿನ ಔಷಧವು ಕರೊನಾ ವೈರಸ್​ ಸೋಂಕಿಗೆ ಸರಿಯಾದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಉತ್ತರಖಂಡದ ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠವು ತಿಳಿಸಿದೆ. ಗಮನಾರ್ಹವೆಂದರೆ ಕೋವಿಡ್​ ವೈರಸ್​ ಗುಣಪಡಿಸುವ ಔಷಧವನ್ನು ಪತ್ತೆ ಮಾಡಿರುವುದಾಗಿ ಈ ತಿಂಗಳ ಆರಂಭದಲ್ಲೇ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರು ವಾದಿಸಿದ್ದರು.ಇದನ್ನೂ ಓದಿ:ಒಬ್ಬ ವ್ಯಕ್ತಿಗೆ ಕರೊನಾ ಇದೆಯೆಂದು ಆತನ ನೆರೆಹೊರೆಯವರಿಗೆ ತಿಳಿಸಿದ ಡಾಕ್ಟರ್ ಗತಿ ಏನಾಯ್ತು ನೋಡಿ….
ಕೋವಿಡ್​ -19 ರೋಗಿಗಳಿಗೆ ನೀಡಲಾಗುತ್ತಿರುವ ಕರೊನಿಲ್​ ಔಷಧವನ್ನು ಅಶ್ವಗಂಧ, ಗಿಲೊಯ್​ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಲಾಗಿದೆ. ಶೇ. 100 ರಷ್ಟು ಚೇತರಿಕೆ ದರವಿದೆ ಎಂದು ಬಾಬಾ ರಾಮದೇವ್​ ಅವರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್​ ಮಾಡಿರುವ ಆಚಾರ್ಯ ಬಾಲಕೃಷ್ಣ ಅವರು, ಕರೊನಾ ವೈರಸ್​ ಗುಣಪಡಿಸುವ ಸಾಕ್ಷಿ ಆಧಾರಿತ ಮೊದಲ “ಕರೊನಿಲ್​” ಔಷಧವನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪತಂಜಲಿ ಯೋಗಪೀಠ ಬಿಡುಗಡೆ ಮಾಡಲಿದೆ ಎಂದು ಹೇಳಲು ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ. ಕರೊನಿಲ್​ ಔಷಧವು ರೋಗಿಗಳನ್ನು 5 ರಿಂದ 14 ದಿನಗಳವರೆಗೆ ಗುಣಪಡಿಸಲಿದೆ ಎಂದು ಭರವಸೆ ನೀಡಿದ್ದಾರೆ.
https://twitter.com/Ach_Balkrishna/status/1275059403750703116?s=20
ಕರೊನಾ ವೈರಸ್​ ಸ್ಪೋಟಗೊಂಡ ಬೆನ್ನಲ್ಲೇ ನಾವು ವಿಜ್ಞಾನಿಗಳ ಒಂದು ತಂಡವನ್ನು ನೇಮಕ ಮಾಡಿಕೊಂಡೆವು. ಮೊದಲಿಗೆ ವೈರಸ್ ವಿರುದ್ಧ ಹೋರಾಡಬಹುದಾದ ಮತ್ತು ದೇಹದಲ್ಲಿ ಅದರ ಹರಡುವಿಕೆಯನ್ನು ನಿಲ್ಲಿಸಬಹುದಾದ ಉತ್ತೇಜಕಗಳನ್ನು ಹಾಗೂ ಸಂಯುಕ್ತಗಳನ್ನು ಗುರುತಿಸಲಾಯಿತು. ಬಳಿಕ ಕ್ಲೀನಿಕಲ್​ ಅಧ್ಯಯನ ನಡೆಸಲಾಯಿತು. 100 ಕರೊನಾ ರೋಗಿಗಳಲ್ಲಿ ಔಷಧದಿಂದ ಶೇ. 100 ರಷ್ಟು ಧನಾತ್ಮಕ ಫಲಿತಾಂಶ ಪಡೆಯಲಾಯಿತು ಎಂದು ಬಾಲಕೃಷ್ಣ ಅವರು ತಿಳಿಸಿದ್ದಾರೆ.
ನಮ್ಮ ಔಷಧವನ್ನು ಪಡೆದ ಬಳಿಕ 5 ರಿಂದ 14 ದಿನಗಳಲ್ಲಿ ರೋಗಿಗಳಿಗೆ ಕರೊನಾ ನೆಗಿಟಿವ್​ ಬಂದಿದೆ. ಆದ್ದರಿಂದ, ಆಯುರ್ವೇದದ ಮೂಲಕ ಕೋವಿಡ್​-19ಗೆ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳಬಹುದಾಗಿದೆ. ಸದ್ಯ ನಾವು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ಮಾತ್ರ ಮಾಡುತ್ತಿದ್ದೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಾಕ್ಷಿ ಮತ್ತು ಡಾಟಾಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.ಇದನ್ನೂ ಓದಿ:VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್​ಕೇಸ್​ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್​!
ಇದೇ ವೇಳೆ ಯೋಗಾಭ್ಯಾಸ ಮಾಡುವುದರೊಂದಿಗೆ ಇಮ್ಯೂನಿಟಿ ಉತ್ತೇಜಿಸುವಂತಹ ಆಹಾರಗಳನ್ನು ಸೇವಿಸಲು ಬಾಲಕೃಷ್ಣ ಅವರು ಜನರಿಗೆ ಸಲಹೆ ನೀಡಿದರು.(ಏಜೆನ್ಸೀಸ್​)
ಕರ್ಫ್ಯೂ ನಡುವೆ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
