ನವದೆಹಲಿ:ಗಣೇಶ ಚತುರ್ಥಿ ಸಂದರ್ಭದಲ್ಲಿ ಆಯಾ ಕಾಲದ ಟ್ರೆಂಡ್​ಗೆ ತಕ್ಕಂತೆ ಗಣೇಶನ ವಿಗ್ರಹಗಳು ರೂಪುಗೊಳ್ಳುವಂತೆ ಇದೀಗ ದಸರಾ ಸಂದರ್ಭದಲ್ಲೂ ನಡೆಯಲಾರಂಭಿಸಿದೆ. ನವರಾತ್ರಿ ಪ್ರಯುಕ್ತ ಭಕ್ತರು ಮಹಿಷಾಸುರನ ಬದಲು ಕರೊನಾಸುರನನ್ನೇ ಸಂಹರಿಸುವ ದೇವಿಯನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಆ ಮೂಲಕ ಕರೊನಾ ಸೋಂಕನ್ನು ಬೇಗ ತೊಲಗಿಸುವ ಉದ್ದೇಶ ಹೊಂದಿದ್ದಾರೆ.
ದೆಹಲಿಯ ಸಫ್ದರ್​ಜಂಗ್​ನ ಮಾತ್ರಿ ಮಂದಿರದ ಹಳೇ ಪೂಜಾ ಸಮಿತಿಯು ಈ ಸಲ ಮಹಿಷಾಸುರನ ಬದಲು ಕರೊನಾಸುರನನ್ನು ಸ್ಥಾಪಿಸಲು ನಿರ್ಧರಿಸಿದೆ. ಪ್ರತಿವರ್ಷ ನಾವು ಮಹಿಷಾಸುರನನ್ನು ಮರ್ದಿಸುವ ದುರ್ಗೆಯನ್ನು ಪ್ರತಿಷ್ಠಾಪಿಸುತ್ತಿದ್ದೆವು. ಆದರೆ ಈ ಸಲ ಮಹಿಷಾಸುರನ ಬದಲು ಕರೊನಾಸುರನನ್ನು ಮರ್ದಿಸುವ ದುರ್ಗೆಯನ್ನು ಪ್ರತಿಷ್ಠಾಪಿಸಲಿದ್ದೇವೆ ಎಂಬುದಾಗಿ ಆಯೋಜಕರಲ್ಲಿ ಒಬ್ಬರಾಗಿರುವ ಸುಮಿತ್​ ಗುಹಾ ತಿಳಿಸಿದ್ದಾರೆ. ಕೋಲ್ಕತದಲ್ಲಿ ಕೂಡ ಮಹಿಷಾಸುರನ ಬದಲು ಕರೊನಾಸುರನನ್ನು ಮರ್ದಿಸುವ ದುರ್ಗೆಯನ್ನು ಕಲಾವಿದರೊಬ್ಬರು ರೂಪಿಸಿದ್ದಾರೆ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
