ಮುಝ್ಪರಾಬಾದ್​ (ಪಾಕಿಸ್ತಾನ):ಕರೊನಾ ಸೋಂಕಿನ ಭೀತಿ ಎಲ್ಲರಿಗಿಂತ ಹೆಚ್ಚಾಗಿ ಕಾಡುತ್ತಿರುವುದು ಆರೋಗ್ಯ ಸಿಬ್ಬಂದಿಯನ್ನು. ಸದಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಈ ಸಿಬ್ಬಂದಿಗೆ ಸರ್ಕಾರಗಳು ಎಷ್ಟೇ ರಕ್ಷಣಾ ಸಾಧನ ಕೊಟ್ಟರೂ ಅದು ಕಡಿಮೆಯೇ.
ಆದರೆ ದುರದೃಷ್ಟ ಎಂದರೆ ಕರೊನಾ ತವರು ಚೀನಾವೇ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಪಿಪಿಇ ಕಿಟ್​ (ವೈಯಕ್ತಿಕ ಸುರಕ್ಷಾ ಸಾಧನ) ಒದಗಿಸುತ್ತಿದೆ. ಮೊದಲೇ ಚೀನಾ ಮಾಲ್​, ಕೇಳಬೇಕೆ? ಬೇಡಿಕೆ ಹೆಚ್ಚಿದಂತೆ ನಕಲಿ ಮಾಲ್​ಗಳನ್ನು ಕಡಿಮೆ ದರದಲ್ಲಿ ನೀಡುವಲ್ಲಿ ಪ್ರಸಿದ್ಧಿ ಹೊಂದಿರುವ ಚೀನಾ, ಇದೀಗ ವೈದ್ಯರ ಜತೆ ಚೆಲ್ಲಾಟವಾಡುತ್ತಿದೆ. ಇನ್ನೊಂದೆಡೆ ಕೆಲವು ಸರ್ಕಾರಗಳು ವೈದ್ಯಕೀಯ ಸಿಬ್ಬಂದಿಗೆ ಸರಿಯಾದ ರಕ್ಷಣಾ ಸಾಧನ ನೀಡದೇ ಅವರ ಪ್ರಾಣವನ್ನು ಪಣಕ್ಕಿಡುವುದೂ ನಡೆದಿದೆ.
ಇದನ್ನೂ ಓದಿ:ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!
ಇಂಥದ್ದೇ ಒಂದು ಘಟನೆ ಪಾಕಿಸ್ತಾನದ ಮುಝ್ಪರಾಬಾದ್​ನಲ್ಲಿ ನಡೆದಿದೆ. ಇದಾಗಲೇ ಸುರಕ್ಷಾ ಸಾಧನಗಳನ್ನು ವೈದ್ಯಕೀಯ ಸಿಬ್ಬಂದಿಗೆ ನೀಡದೆ ಅವರ ಪ್ರಾಣಕ್ಕೆ ಪಾಕಿಸ್ತಾನ ಸರ್ಕಾರ ಕುತ್ತು ತರುವ ಬಗ್ಗೆ ಬೇಕಾದಷ್ಟು ವರದಿಗಳಾಗಿವೆ. ರಕ್ಷಣಾ ಕವಚ ನೀಡಿ ಎಂದ ವೈದ್ಯರನ್ನೇ ಬಂಧಿಸಿರುವ ಘಟನೆಗಳೂ ನಡೆದಿವೆ. ಇದೀಗ, ಅವರಿಗೆ ನೀಡಿರುವ ಪಿಪಿಇ ಕಿಟ್​ನಲ್ಲಿ ಪಾನ್​ನಿಂದ ಉಗುಳಿರುವ ಕಲೆಗಳು ಕಾಣಿಸಿದ್ದು, ವೈದ್ಯರನ್ನು ಇನ್ನಿಲ್ಲದ ಭೀತಿಗೆ ನೂಕಿದೆ!
ಇಲ್ಲಿಯ ಶೇಖ್​ ಖಲೀಫಾ ಬಿನ್‌ ಝೈದ್‌ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಗಿರುವ ವೈಯಕ್ತಿಕ ಸುರಕ್ಷಾ ಸಾಧನಗಳಲ್ಲಿ ಉಗುಳಿದ ಕೆಂಪು ಕಲೆಗಳನ್ನು ವೈದ್ಯರು ನೋಡಿದ್ದರು. ಮಾಸ್ಕ್​ಗಳಲ್ಲಿ ಕೂಡ ಕಲೆ ಕಂಡಿತ್ತು. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದು ಪಾನಿನ ಕಲೆ ಎಂದು ತಿಳಿದಿದೆ. ರಾವಲ್ಪಿಂಡಿ ಸೇನಾ ಆಸ್ಪತೆಯಿಂದ ಬಂದಿರುವ ಸುಮಾರು 3 ಲಕ್ಷ ಪಿಪಿಇ ಕಿಟ್‌ಗಳ ಪೈಕಿ ಹಲವು ಕಿಟ್​ಗಳಲ್ಲಿ ಈ ಕಲೆಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಆಸ್ಪತ್ರೆಯ ಅಧಿಕಾರಿ ಟ್ವೀಟ್‌ ಮಾಡಿದ್ದಾರೆ.
ಇದನ್ನೂ ಓದಿ:ಸ್ಮಾರ್ಟ್​ಫೋನ್​ನಲ್ಲಿ ಕರೊನಾ ಕುರಿತ ಸಂದೇಶ ಕ್ಲಿಕ್​ ಮಾಡುವ ಮುನ್ನ ಎಚ್ಚರ… ಎಚ್ಚರ… ಸಿಬಿಐ ವಾರ್ನಿಂಗ್​!
“ಆಸ್ಪತ್ರೆಯ ಶಿಷ್ಟಾಚಾರದಂತೆ ಸೋಂಕು ಹರಡುವುದನ್ನು ತಪ್ಪಿಸಲು ನಾವು ಎಲ್ಲ ಕಿಟ್‌ಗಳನ್ನು ನಾಶಪಡಿಸಿದ್ದೇವೆ. ಈ ಹಿಂದೆ ಚೀನಾ ನಿರ್ಮಿತ ಪರೀಕ್ಷಾ ಯಂತ್ರಗಳು ನಕಲಿಯಾಗಿತ್ತು. ಇದೀಗ ಬಳಸಲ್ಪಟ್ಟ ಪಿಪಿಇ ಕಿಟ್‌ಗಳನ್ನು ಕಳುಹಿಸುತ್ತಿರುವುದು ನಾಚಿಕೆಗೇಡು’ ಎಂದು ಅಧಿಕಾರಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ಹಿಂದೆ ಒಳ ಉಡುಪಿನ ಬಟ್ಟೆಯಿಂದ ತಯಾರಿಸಿದ ಮಾಸ್ಕ್​ಗಳನ್ನು ಚೀನಾ ಪಾಕಿಸ್ತಾನಕ್ಕೆ ಪೂರೈಸಿರುವ ಆರೋಪವೂ ಇದೆ. ಇದರ ಜತೆಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ವೈದ್ಯರು ತತ್ತರಿಸಿ ಹೋಗಿದ್ದಾರೆ.
ಇಂದಿನ ಅಂಕಿಅಂಶದ ಪ್ರಕಾರ ಪಾಕಿಸ್ತಾನದಲ್ಲಿ 48,091 ಮಂದಿಗೆ ಕರೊನಾ ಸೋಂಕು ತಗುಲಿದ್ದು, 1,017 ಮಂದಿ ಮೃತಪಟ್ಟಿದ್ದಾರೆ. 14,155 ಮಂದಿ ಚೇತರಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 + six =
Remember me
