ಕರೊನಾ ಸೋಂಕಿಗೆಈವರೆಗೆ ಯಾವುದೇ ನಿರ್ದಿಷ್ಟ ಔಷಧ ಇಲ್ಲ. ಆದರೆ, ಮಲೇರಿಯಾಗೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಸದ್ಯದ ಮಟ್ಟಿಗೆ ರಾಮಬಾಣದಂತೆ ಕೆಲಸ ಮಾಡುತ್ತಿದೆ ಎಂದು ವಿಶ್ವದ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಔಷಧ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಭಾರತದ ರಸಾಯನ ಶಾಸ್ತ್ರದ ಜನಕ ಎಂದೇ ಕರೆಯಲ್ಪಡುವ ಆಚಾರ್ಯ ಪ್ರಫುಲ್​ಚಂದ್ರ ರಾಯ್. 1934ರಲ್ಲಿ ರಾಯ್ ಆರಂಭಿಸಿದ ಪಶ್ಚಿಮ ಬಂಗಾಳ ಕೆಮಿಕಲ್ಸ್ ಆಂಡ್ ಫಾರ್ವಸ್ಯುಟಿಕಲ್ಸ್ ಲಿಮಿಟೆಡ್ ಅತಿ ಹೆಚ್ಚು ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ಉತ್ಪಾದನೆ ಮಾಡುವ ಕಂಪನಿಯಾಗಿತ್ತು.
ಆಚಾರ್ಯ ಪ್ರಫುಲ್​ಚಂದ್ರ ರಾಯ್ ಭಾರತೀಯ ಔಷಧ ಉದ್ಯಮದ ಪಿತಾಮಹ ಎಂದೂ ಪರಿಗಣಿಸಲಾಗಿದೆ. ರಾಯ್ 1861ರ ಆ.2 ರಂದು ಬಂಗಾಳದ ಖುಲ್ನಾ ಜಿಲ್ಲೆಯ ರುರುಲಿ ಕಟಿಪಾರದಲ್ಲಿ (ಇಂದಿನ ಬಾಂಗ್ಲಾದೇಶ) ಜನಿಸಿದರು. ರಸಾಯನಶಾಸ್ತ್ರದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಅವರು, ಎಡಿನ್​ಬರೊ ವಿವಿಯಲ್ಲಿ ವ್ಯಾಸಂಗ ಮಾಡಿದವರು. 1888ರಲ್ಲಿ ಭಾರತಕ್ಕೆ ಮರಳಿ ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರೊಂದಿಗೆ ತಮ್ಮ ಪ್ರಯೋಗಾಲಯದಲ್ಲಿ ಒಂದು ವರ್ಷ ಕೆಲಸ ನಿರ್ವಹಿಸಿದರು. 1894 ರಲ್ಲಿ ಪ್ರಫುಲ್​ಚಂದ್ರ ಪಾದರಸವನ್ನು ಮೊದಲ ಆವಿಷ್ಕಾರ ಮಾಡಿ ಮರ್ಕ್ಯುರಸ್ ನೈಟ್ರೇಟ್​ನ್ನು ತಯಾರಿಸಿದರು, ಇದರ ಸಹಾಯದಿಂದ 80 ಹೊಸ ಸಂಯುಕ್ತಗಳನ್ನು ತಯಾರಿಸಲಾಯಿತು.
ತಪ್ಪು ತಿದ್ದಿಕೊಂಡ ಡಬ್ಲು್ಯಎಚ್​ಒ
ಭಾರತದಲ್ಲಿ ಕರೊನಾ ಸೋಂಕು ಸಮುದಾಯ ಪ್ರಸರಣ ಹಂತದಲ್ಲಿದೆ ಎಂದು ವರದಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ತನ್ನ ತಪು್ಪ ತಿದ್ದಿಕೊಂಡಿದ್ದಾಗಿ ಹೇಳಿದೆ. ವಿಶ್ವದ ಕರೊನಾ ಪೀಡಿತ ರಾಷ್ಟ್ರಗಳ ಪಟ್ಟಿ ತಯಾರಿಸಿದ್ದ ಡಬ್ಲು್ಯಎಚ್​ಒ ಸಮುದಾಯ ಪ್ರಸರಣ ವಿಭಾಗದಲ್ಲಿ ಭಾರತದ ಹೆಸರನ್ನು ಉಲ್ಲೇಖಿಸಿತ್ತು. ಈ ದೋಷವನ್ನು ಸರಿಪಡಿಸಲಾಗಿದ್ದು, ಭಾರತದಲ್ಲಿ ಕರೊನಾ ಇನ್ನು ಸಮುದಾಯ ಪ್ರಸರಣ ಹಂತದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದೆ.
VIDEO| ರೂಲ್ಸ್‌ ಅಂದ್ರೆ ರೂಲ್ಸ್‌ ಅಷ್ಟೇ… ಊಟ ಕೊಡಹೋದ ಪೊಲೀಸರಿಗೆ ವ್ಯಕ್ತಿಯ ಕರೊನಾ ಪಾಠ ವಿಡಿಯೋ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
