ಮುಂಬೈ:ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ 275ಕ್ಕೆ ಏರಿದೆ. ಇಷ್ಟುದಿನ ವೈರಸ್​ ಪಸರಿಸುವ ಪ್ರಮಾಣ 2ನೇ ಹಂತದಲ್ಲಿತ್ತು. ಈಗ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ, ಅದು ಮೂರನೇ ಹಂತಕ್ಕೆ ತಲುಪಲಿದೆಯಾ ಎಂಬ ಆತಂಕ ಕಾಡುತ್ತಿದೆ.
ಭಾರತದಲ್ಲಿ ಅತಿಹೆಚ್ಚು ಕರೊನಾ ರೋಗಿಗಳು ಇರುವುದು ಮಹಾರಾಷ್ಟ್ರದಲ್ಲಿ. ಶುಕ್ರವಾರ ಒಂದೇ ದಿನ 11 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಒಟ್ಟು 63ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.ಮುಂಬೈ, ಪುಣೆ, ನಾಗ್ಪುರ ಮತ್ತು ಪಿಂಪ್ರಿ ಚಿಂಚವಾಡಗಳು ಶುಕ್ರವಾರದಿಂದಲೇ ಲಾಕ್​ಡೌನ್​ ಆಗಿವೆ. ಈ ಮಧ್ಯೆ ಹೊಸದಾಗಿ 11 ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ.
ಶುಕ್ರವಾರ ಪತ್ತೆಯಾದ 11 ಕರೊನಾ ಪ್ರಕರಣಗಳಲ್ಲಿ 10 ಜನರು ಮುಂಬೈನವರಾಗಿದ್ದು, ಓರ್ವ ಪುಣೆಯವರು.ಕರೊನಾ ರೋಗಿಗಳನ್ನು ವಿವಿಧ ಆಸ್ಪತ್ರೆಗಳ ಐಸೋಲೇಶನ್​ ವಾರ್ಡ್​ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಎಲ್ಲ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಎಸಿ ಬಳಕೆಯನ್ನು ನಿಲ್ಲಿಸಿ. ಎಸಿ ಇದ್ದಲ್ಲಿ ಬಹುಬೇಗ ಕರೊನಾ ಹರಡುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಸದ್ಯಕ್ಕೆ ಕರೊನಾ ವೈರಸ್​ ಸ್ಥಳೀಯ ಪ್ರಸರಣದ ಹಂತದಲ್ಲಿಯೇ ಇದೆ. ಸಾಮುದಾಯಿಕವಾಗಿ ಹರಡಿಲ್ಲ ಎಂದು ವರದಿಯಾಗಿದೆ. ಆದರೆ ಹರಡುತ್ತಿರುವ ವೇಗ ಮಾತ್ರ ಆತಂಕಕಾರಿಯಾಗಿದೆ. (ಏಜೆನ್ಸೀಸ್​)
VIDEO: ತುಮಕೂರು ರೈಲ್ವೆ ನಿಲ್ದಾಣದಲ್ಲಿ ಬೇಕಾಬಿಟ್ಟಿ ಥರ್ಮಲ್​ ಸ್ಕ್ಯಾನಿಂಗ್​ ಮಾಡಿದ ಹಿರಿಯ ಆರೋಗ್ಯ ಸಹಾಯಕ ಅಮಾನತು…

ಕರೊನಾದಿಂದ ಸಾರ್ವಜನಿಕ ಸ್ಥಳದಲ್ಲಿ ಕೆಮ್ಮಲೂ ಭಯ; ಈ ರೈಲು ಪ್ರಯಾಣಿಕ ಮಧ್ಯದಲ್ಲೇ ಇಳಿಯಬೇಕಾಯ್ತು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
