ನವದೆಹಲಿ: ಕೋವಿಡ್ 19 ಕೇಸ್​ಗಳ ಪ್ರಮಾಣ ದಿನೇದಿನದೆ ಹೆಚ್ಚಿತ್ತಿರುವ ಕಾರಣ ಭಾರತ ಜಾಗತಿಕ ಮಟ್ಟದಲ್ಲೂ ಟಾಪ್ 10 ಪಟ್ಟಿಯಲ್ಲಿ ಮೇಲೇರುತ್ತಿದೆ. ನಿನ್ನೆ 8 ಸ್ಥಾನದಲ್ಲಿದ್ದ ಭಾರತ ಇಂದು ಏಳನೇ ಸ್ಥಾನಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕರೊನಾ ವೈರಸ್ ಟ್ರ್ಯಾಕರ್​ನ ಪ್ರಕಾರ ಭಾರತದಲ್ಲಿ 1,82,143 ಕೋವಿಡ್ ಪ್ರಕರಣ ದೃಢಪಟ್ಟಿದೆ. ಭಾನುವಾರ ರಾತ್ರಿ 10.30ರ ಡೇಟಾ ಪ್ರಕಾರ ಜಾಗತಿಕವಾಗಿ ಒಟ್ಟು 59,34,936 ಕೋವಿಡ್ ಪ್ರಕರಣ ಪತ್ತೆಯಾಗಿದೆ.
ಇದನ್ನೂ ಓದಿ:ವೈದ್ಯೆ, ವ್ಯಾಪಾರಿ, ಗರ್ಭಿಣಿಗೆ ಕರೊನಾ | 21 ಸೋಂಕಿತರು ಸೇರ್ಪಡೆ
ಭಾರತದಲ್ಲಿ ಇದುವರೆಗಿನ ಗರಿಷ್ಠ ಏಕದಿನ ಏರಿಕೆ ಸಂಭವಿಸಿದ್ದು ಭಾನುವಾರ 8,380 ಹೊಸ ಕೇಸ್​ಗಳು 24 ಗಂಟೆ ಅವಧಿಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,164 ಆಗಿದೆ. 89,995 ಸಕ್ರಿಯ ಕೇಸ್​ಗಳಿದ್ದು, 86,983 ಕೇಸ್​ಗಳಲ್ಲಿ ರೋಗಿಗಳು ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಒಬ್ಬ ರೋಗಿ ಮಾತ್ರ ಹೊರದೇಶದ ವಲಸಿಗ. ಇದರೊಂದಿಗೆ ರಿಕವರಿ ರೇಟ್​ ಶೇಕಡ 47.76 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾ ಹೇಳುತ್ತಿದೆ.
ಇದನ್ನೂ ಓದಿ:ಕ್ವಾರಂಟೈನ್ ಅವಧಿಯಲ್ಲಿ ಬಂದೆರಗಿತ್ತು ಆಪತ್ತು: ಆ ಶಾಕ್​ನಿಂದ ಅವರಿನ್ನೂ ಚೇತರಿಸಿಲ್ಲ..
ವಿಶ್ವ ಆರೋಗ್ಯ ಸಂಸ್ಥೆಯ ಕರೊನಾ ಟ್ರ್ಯಾಕರ್ ಪ್ರಕಾರ ಭಾರತ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಅಮೆರಿಕ, ಬ್ರೆಜಿಲ್, ರಷ್ಯಾ, ಬ್ರಿಟನ್​, ಸ್ಪೇನ್​, ಇಟಲಿಗಳು ಆರಂಭದ ಸ್ಥಾನಗಳಲ್ಲಿವೆ. ಅಮೆರಿಕ ಗರಿಷ್ಠ ಸಂಕಷ್ಟಕ್ಕೆ ಒಳಗಾಗಿದ್ದು 17,16,078 ಕೇಸ್​ಗಳು ಪತ್ತೆಯಾಗಿದೆ. ಜರ್ಮನಿಯಲ್ಲಿ 1,81,482 ಕೇಸ್​ಗಳು, ಟರ್ಕಿಯಲ್ಲಿ 1,63,103 ಕೇಸ್​ಗಳು, ಇರಾನ್​ನಲ್ಲಿ 1,48,950 ಕೇಸ್​ಗಳು ಪತ್ತೆಯಾಗಿವೆ. (ಏಜೆನ್ಸೀಸ್)
ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
