ನವದೆಹಲಿ:ರೈಲ್ವೆ ಸೇವೆ ಪುನರಾರಂಭಗೊಂಡಿದ್ದು, ಈಗ ತಮ್ಮ ಊರುಗಳಿಗೆ ಹೋಗಿ, ವಿಶ್ವವಿದ್ಯಾಲಯ ಪುನರಾರಂಭಗೊಂಡ ನಂತರ ಮರಳಿ ಬರಬೇಕೆಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಖಡಕ್ಕಾಗಿ ಹೇಳಿದೆ.ಜೆಎನ್‌ಯು ವಸತಿ ಕ್ಯಾಂಪಸ್ ಆಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಮಾರ್ಚ್​​​ನಲ್ಲಿ ಹಾಸ್ಟೆಲ್ ಬಿಡಲು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹೇಳಿದ ನಂತರ ಕ್ಯಾಂಪಸ್​​ ತೊರೆದು ದೆಹಲಿಯಲ್ಲೇ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಂಡಿದ್ದರು. ಅಂತಹ ಅನೇಕ ವಿದ್ಯಾರ್ಥಿಗಳು ಮುಂದಿನ ಬಹು ದಿನಗಳವರೆಗೆ ಈ ತಾತ್ಕಾಲಿಕ ವಸತಿ ವ್ಯವಸ್ಥೆ ತಮಗೆ ಅಸಾಧ್ಯವೆಂದು ಮತ್ತೆ ಹಾಸ್ಟೆಲ್​​ಗೆ ಹಿಂದಿರುಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಬಂತು ನೋಡಿ ಮದುವೆ ವಸ್ತ್ರಾಭರಣಗಳಿಗೆ ತಕ್ಕ ಡಿಸೈನರ್​ ಮಾಸ್ಕ್​… !!!
ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಮೊದಲೇ ಹಾಸ್ಟೆಲ್​​ಗಳಲ್ಲಿ ಉಳಿಯಲು ವಿನಂತಿಸಿಕೊಂಡಿದ್ದರು. ಆದರೆ, ಭಾರತೀಯ ರೈಲ್ವೆ ವಿಶೇಷ ರೈಲು ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ. ಜೂನ್ 1 ರಿಂದ 200ಕ್ಕೂ ಹೆಚ್ಚು ರೈಲು ವ್ಯವಸ್ಥೆಯಾಗಲಿದೆ. ಅಂತಾರಾಜ್ಯ ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ರಾಜ್ಯ ಸರ್ಕಾರಗಳು ಪ್ರಾರಂಭಿಸಿವೆ. ಇದಲ್ಲದೆ, ಕೆಲವು ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ವಿದ್ಯಾರ್ಥಿಗಳ ವಾಪಸಾತಿಗೆ ಸಾರಿಗೆ ವ್ಯವಸ್ಥೆಗಳನ್ನು ಮಾಡುತ್ತಿವೆ. ಹೀಗಾಗಿ ಕ್ಯಾಂಪಸ್​ ಖಾಲಿ ಮಾಡಿ ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಬೇಕೆಂದು ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಸೋಮವಾರ ಪ್ರಕಟಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.ಇದಲ್ಲದೆ, ಕಾಲಕಾಲಕ್ಕೆ ಹೊರಡಿಸಲಾದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ದೆಹಲಿ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಸದ್ಯ ಲಾಕ್​ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಜೂನ್ 25 ರಂದು ಅಥವಾ ಅದರ ನಂತರ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳಬಹುದು ಎಂದು ವಿವಿ ಹೇಳಿದೆ.
ಇದನ್ನೂ ಓದಿ:ಹಿಟ್ಲರ್​​ಗೆ​ ಸೇರಿದ್ದೆನ್ನಲಾದ ಮೊಸಳೆ ವಿಧಿವಶ
ದೆಹಲಿಯಲ್ಲಿ ಕೋವಿಡ್- 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚುತ್ತಿದ್ದು,ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಹಾಸ್ಟೆಲ್‌ಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸದ್ಯ ತಮ್ಮ ಊರಿಗೆ ತೆರಳಿ ಸುರಕ್ಷಿತವಾಗಿರುವುದು ಒಳ್ಳೆಯದು ಎಂದು ಸಲಹೆ ನೀಡಲಾಗಿದೆ.
ಕಾಳಿಂಗ ಸರ್ಪಕ್ಕೆ ನಾಡಿನಲ್ಲಿ ನಡೆಯಿತು ತಣ್ಣೀರ ಮಜ್ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 3 =
Remember me
