ನವದೆಹಲಿ:ಜಗತ್ತಿನಾದ್ಯಂತ ಕಾಡುತ್ತಿರುವ ಕೋವಿಡ್​-19 ಪಿಡುಗನ್ನು ಎದುರಿಸಲು ಜಗತ್ತೇ ಒಂದಾಗಿ ಶ್ರಮಿಸುತ್ತಿದ್ದು, ಬಹುತೇಕ ಯುದ್ಧೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ. ಇನ್ನೂ ತೊಲಗಿಸಲಾಗದ ಕರೊನಾಗೆ ಭಾರತವೂ ಸೇರಿ ಹಲವು ದೇಶಗಳಲ್ಲಿ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಯುತ್ತಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ಹಿನ್ನೆಲೆಯಲ್ಲಿ ಎರಡನೇ ವಿಶ್ವ ಮಹಾಯುದ್ಧವನ್ನು ನೆನಪಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಭಾರತ-ಇಟಲಿ ವರ್ಚುವಲ್ ಸಮ್ಮೇಳನದಲ್ಲಿ ಇಟಲಿಯ ಪ್ರಧಾನಿ ಗಿಸೆಪ್ಪೆ ಕಾಂಟೆ ಜತೆ ಮಾತನಾಡಿದ ಅವರು, ಕೋವಿಡ್​-19 ಇತಿಹಾಸದಲ್ಲಿ ವರ್ಲ್ಡ್​ ವಾರ್-2ರ ಥರ ನೆನಪಾಗಿ ಉಳಿಯಲಿದೆ ಎಂದರು.
ಕರೊನೋತ್ತರ ಜಗತ್ತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಕರೊನಾ ಬಳಿಕದ ಅವಕಾಶ ಹಾಗೂ ಸವಾಲುಗಳಿಗೆ ನಾವು ಸಿದ್ಧರಾಗಿ ತೆರೆದುಕೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟರು. ಹಾಗೆಯೇ ಕೋವಿಡ್​ನಿಂದಾಗಿ ಇಟಲಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಭಾರತದ ಪರವಾಗಿ ಮೋದಿ ಸಾಂತ್ವನ ಸಲ್ಲಿಸಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
