ನವದೆಹಲಿ: ಸಾಂಕ್ರಾಮಿಕ ಕರೊನಾ ವೈರಸ್​ನಿಂದಾಗಿ ದೊಡ್ಡ ಸವಾಲು ಎದುರಾಗಿದೆ. ಹಾಗೇ ಅವಕಾಶಗಳೂ ಸೃಷ್ಟಿಯಾಗಿವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.
ಕರೊನಾ ವಿರುದ್ಧ ಹೋರಾಟಕ್ಕೆ ಲಾಕ್​ಡೌನ್​ ಸಾಕಾಗುವುದಿಲ್ಲ. ಕ್ಷಿಪ್ರಗತಿಯಲ್ಲಿ ಟೆಸ್ಟಿಂಗ್​ ಆಗಬೇಕು. ಕರೊನಾ ಟೆಸ್ಟಿಂಗ್​ ವೇಗ ಹೆಚ್ಚಿಸದಿದ್ದರೆ ಏನೂ ಉಪಯೋಗವಿಲ್ಲ ಎಂದು ಮೊನ್ನೆಯಷ್ಟೇ ರಾಹುಲ್​ ಗಾಂಧಿ ವಿಡಿಯೋ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಅವರು, ಕೊವಿಡ್​-19ರಿಂದ ಉಂಟಾದ ಬಿಕ್ಕಟ್ಟು, ಸಮಸ್ಯೆಗಳ ಪರಿಹಾರ ಮಾಡಬೇಕೆಂದರೆ ನಮ್ಮ ಎಲ್ಲ ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ಡೇಟಾ ತಜ್ಞರನ್ನು ಒಟ್ಟುಗೂಡಿಸಬೇಕು. ಈ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಹೊಸ ಬದಲಾವಣೆಗೆ ಮುಂದಾಗಬೇಕು. ಸಂಕಷ್ಟವಿದ್ದರೂ ಅದರಲ್ಲೊಂದು ಹೊಸತನವನ್ನು ಸೃಷ್ಟಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದೊಳ್ಳೆ ಅವಕಾಶ ನಮ್ಮೆದುರು ಇದೆ ಎಂದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
