ನವದೆಹಲಿ:ರಾಷ್ಟ್ರದಲ್ಲಿ ಕರೊನಾ ವೈರಸ್​ ರೋಗಿಗಳ ಚೇತರಿಕೆ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ರಾಷ್ಟ್ರದಲ್ಲಿ 15 ದಿನಗಳ ಹಿಂದೆ ಚೇತರಿಕೆ ಪ್ರಮಾಣ ಶೇ.13 ಇತ್ತು. ಈಗ ಅದು ಶೇ. 25.19ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾವಿನ ಪ್ರಮಾಣ ಶೇ.3.5 ಮಾತ್ರ: ಸೋಂಕಿತರ ಸಾವಿನ ಪ್ರಮಾಣ ಶೇ.3.2 ಮಾತ್ರ ಇದೆ. ಪುರಷರಲ್ಲಿ ಸಾವಿನ ಪ್ರಮಾಣ ಅಧಿಕವಾಗಿದ್ದರೆ ಮಹಿಳೆಯರಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ.
ಕಳೆದ 24 ಗಂಟೆಗಳಲ್ಲಿ 630 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಲ್ಲಿವರೆಗೂ ಒಟ್ಟು 8,324 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರೊನಾ ವೈರಸ್​ ಸೋಂಕಿಗೆ ಬಲಿಯಾದವರಲ್ಲಿ ಶೇ.19 ಮಂದಿ ಮಧುಮೇಹ, ಅಧಿಕ ರಕ್ತದೊತ್ತಸ ಸೇರಿದಂತೆ ಇತರೆ ಕಾಯಿಲೆಗಳಿಗೆ ತುತ್ತಾಗಿದ್ದರು ಎಂದು ತಿಳಿದು ಬಂದಿದೆ.
ರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 1,718 ಹೊಸ ಕರೊನಾ ವೈರಸ್​ ಸೋಂಕು ಪ್ರಕರಣಗಳು ದೃಢಪಟ್ಟಿವೆ. 33,050 ಮಂದಿಗೆ ಸೋಂಕು ಹರಡಿದ್ದು, ಇದರಲ್ಲಿ 23,651 ಪ್ರಕರಣಗಳು ಸಕ್ರಿವಾಗಿವೆ. ಇಲ್ಲಿವರೆಗೆ 1074 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)
ಕೋವಿಡ್​ ವಿರುದ್ಧ ಹೋರಾಟದ ನಡುವೆ ಆರ್ಥಿಕ ಚೇತನ ಹೆಚ್ಚಿಸಿಕೊಳ್ಳಲು ತಮಿಳುನಾಡು ಯತ್ನ, ಚೀನಾದಿಂದ ಹೊರಹೋಗುತ್ತಿರುವ ಕಂಪನಿಗಳ ಮೇಲೆ ಕಣ್ಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 9 =
Remember me
