ಕೊವಿಡ್​-19 ರೋಗಿಗಳಿಗೆ ಬೆಡ್​ ಸಿಗದೆ ಪರದಾಡುತ್ತಿರುವುದು, ಹಲವು ಆಸ್ಪತ್ರೆಗಳಲ್ಲಿ ಸರಿಯಾದ ಆಹಾರ ವ್ಯವಸ್ಥೆ ಮಾಡದೆ ಇರುವುದು ಅಲ್ಲಲ್ಲಿ ವರದಿಯಾಗುತ್ತಿದೆ.
ಈ ಮಧ್ಯೆ ಇನ್ನೊಂದು ಎಡವಟ್ಟಿನ ವಿಡಿಯೋ ವೈರಲ್​ ಆಗಿದೆ. ಆಂಧ್ರಪ್ರದೇಶದಲ್ಲಿ ನಡೆದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಮೂವರು ಕೊವಿಡ್​-19 ಸೋಂಕಿತರನ್ನು ಪುರಸಭೆಯ ಕಸ ಸಾಗಿಸುವ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಈ ಘಟನೆ ನಡೆದಿದ್ದು ವಿಜಿಯಾನಗರಂ ಜಿಲ್ಲೆಯ ನೆಲ್ಲಿಮಾರ್ಲಾ ಪುರಸಭೆಯ ವ್ಯಾಪ್ತಿಯಲ್ಲಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಹಾಗೇ ಸಾಮಾನ್ಯ ಜನರಿಂದ ಅಷ್ಟೇ ಅಲ್ಲದೆ, ತೆಲುಗು ದೇಶಂ ಪಾರ್ಟಿ ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
ಪ್ರತಿಪಕ್ಷ ಟಿಡಿಪಿ ನಾಯಕ ಎನ್​.ಚಂದ್ರಬಾಬು ನಾಯ್ಡು ಅವರು ಭಾನುವಾರ ರಾತ್ರಿ ವಿಡಿಯೋವನ್ನು ಟ್ವೀಟ್​ ಮಾಡಿದ್ದಾರೆ. ಇದೊಂದು ದಿಗಿಲುಗೊಳಿಸುವ ದೃಶ್ಯ. ಇಲ್ಲಿ ನೋಡಿ ಬಿಸಿ ಕಾಲನಿಯ ಮೂವರು ಕೊವಿಡ್​-19 ರೋಗಿಗಳನ್ನು ಕಸದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಈ ಅಸಹಾಯಕ ರೋಗಿಗಳನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ. ಇವರು ಕರೊನಾದೊಂದಿಗೆ ಇನ್ನೂ ಯಾವುದಾದರೂ ಅಪಾಯಕಾರಿ ರೋಗಕ್ಕೆ ತುತ್ತಾಗಬಹುದು. ಅದ್ಯಾಕೆ ಇವರನ್ನು ಮನುಷ್ಯರಂತೆ ನೋಡಲಾಗುತ್ತಿಲ್ಲ ಎಂದು ಕ್ಯಾಪ್ಷನ್​ ಬರೆದಿದ್ದಾರೆ.
ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಕಸ ಸಾಗಿಸುವ ಮಿನಿ ಟ್ರಕ್​ ಮೇಲೆ ಹತ್ತಿ ಹೋಗುವುದನ್ನು ನೋಡಬಹುದು. ಅ ಗಾಡಿಯ ಮೇಲೆ ಸ್ವಚ್ಛ ಭಾರತ್​…ಸ್ವಚ್ಛ ನೆಲ್ಲಿಮರ್ಲಾ ಎಂದು ಬರೆದುಕೊಂಡಿದ್ದನ್ನು ನೋಡಬಹುದು. ಹಾಗೇ ಪಿಪಿಇ ಕಿಟ್​ ಹಾಕಿಕೊಂಡವನ್ನೊಬ್ಬ ಆ ಮಿನಿ ಟ್ರಕ್​​ನ್ನು ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದಾನೆ.
ಈ ಬಗ್ಗೆ ನೆಲ್ಲಿಮರ್ಲಾ ಮುನ್ಸಿಪಲ್ಟಿ ಕಮಿಷನರ್​ ಜೆ.ಆರ್​.ಅಪ್ಪಾಲಾ ನಾಯ್ಡು ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ಈ ಹಿಂದೆ ಯಾವತ್ತೂ ಪುರಸಭೆಯ ಕಸದ ಗಾಡಿಯನ್ನು ಕೊವಿಡ್​-19 ರೋಗಿಗಳನ್ನು ಕರೆದುಕೊಂಡು ಹೋಗಲು ಬಳಸಿರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.  ಆದರೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿವೆ. (ಏಜೆನ್ಸೀಸ್​)
Appalling! Three#Covid_19patients in BC Colony, Jarjapupeta in Vizianagaram Dist were seen taken to the hospital in a ‘Garbage vehicle’. Don’t know about#Coronavirus, but the helpless patients might contract other dangerous diseases. Why are they not being treated like humans?pic.twitter.com/FJ1sAfswGc
— N Chandrababu Naidu (@ncbn)August 2, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
