ನವದೆಹಲಿ: ಕರೊನಾ COVID19 ವೈರಸ್ ಸೋಂಕು ಹರಡುವಿಕೆ ಮುಂಬೈ, ಪುಣೆ, ಇಂದೋರ್​, ಜೈಪುರ, ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಎಚ್ಚರಿಸಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿರುವ ಸುತ್ತೋಲೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಕರೊನಾ ವಾರಿಯರ್ಸ್​ ಮೇಲೆ, ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಗಳು, ಸೋಷಿಯಲ್ ಡಿಸ್ಟೆನ್ಸಿಂಗ್ ಉಲ್ಲಂಘನೆ, ನಗರಗಳಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘನೆ ಮುಂತಾದವುಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಇಂತಹ ಉಲ್ಲಂಘನೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಸೂಚಿಸಿದೆ.
ದೇಶದಲ್ಲಿ ಕರೊನಾ ಸೋಂಕು ಪೀಡಿತರಾಗಿ ಸಾವನ್ನಪ್ಪಿದವರ ಸಂಖ್ಯೆ 543ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ ಒಟ್ಟು 17,265ಕ್ಕೆ ತಲುಪಿದೆ. ಮಧ್ಯಪ್ರದೇಶದ ಇಂದೋರ್​, ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ, ರಾಜಸ್ಥಾನದ ಜೈಪುರ, ಪಶ್ಚಿಮ ಬಂಗಾಳದ ಜಲ್​ಪಾಯಿಗುರಿ, ಕಲಿಂಪೋಂಗ್​, ಡಾರ್ಜಿಲಿಂಗ್​, ನಾರ್ತ್​ 24 ಪರಗಣಾಸ್, ಈಸ್ಟ್​ ಮೇದಿನಿಪುರ್​, ಹೌರಾ, ಕೋಲ್ಕತಗಳಲ್ಲಿ ಸೋಂಕು ವಿಶೇಷವಾಗಿ ಗಂಭೀರ ಸ್ಥಿತಿಯಲ್ಲಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳಗಳಿಗೆ ಸಂಬಂಧಿಸಿ ಆರು ಇಂಟರ್​ಮಿನಿಸ್ಟೀರಿಯಲ್ ಸೆಂಟ್ರಲ್ ಟೀಮ್​ಗಳನ್ನು ಕೇಂದ್ರ ಸರ್ಕಾರ ರಚಿಸಿದೆ. ಈ ತಂಡಗಳು ಕೋವಿಡ್​ 19 ಸೋಂಕು ಸಂಬಂಧಿತ ವಿಚಾರಗಳಲ್ಲಿ ಈ ರಾಜ್ಯಗಳಿಗೆ ಅನ್ವಯಿಸುವ ನಿರ್ಣಯವನ್ನು ತ್ವರಿತವಾಗಿ ತೆಗೆದುಕೊಳ್ಳಲಿದೆ. ಅಲ್ಲದೆ, ಸೂಕ್ತ ನಿರ್ದೇಶನಗಳನ್ನು ನೀಡುವಲ್ಲಿ ಕೇಂದ್ರ ಸರ್ಕಾರಕ್ಕೆ ನೆರವಾಗಲಿವೆ. (ಏಜೆನ್ಸೀಸ್)
ಎಚ್​ಐವಿ ರೋಗಿಯ ಶವ ಸಾಗಿಸೋಕೆ ವಾಹನಗಳೇ ಸಿಗಲಿಲ್ಲ- ಕೊನೆಗೆ ಸೈಕಲ್​ ಮೇಲೆ ಹೊತ್ತೊಯ್ಯ ಬೇಕಾಯಿತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
