ಬೆಂಗಳೂರು:ಬೆಂಗಳೂರಿನ ಮೂವರು ಸೇರಿ ದೇಶದಲ್ಲಿ ಒಟ್ಟು 6 ಜನರಲ್ಲಿ ರೂಪಾಂತರಿ ಕೋವಿಡ್ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಬ್ರಿಟನ್​ನಿಂದ ಹಿಂದಿರುಗಿದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದ್ದಾಗಿ ಎಎನ್​ಐ ವರದಿ ಮಾಡಿದೆ.
ಬ್ರಿಟನ್​ನಿಂದ ಹಿಂದಿರುಗಿದವರ ಪೈಕಿ ಮೂವರ ಕೋವಿಡ್ 19 ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಅವರ ಸ್ಯಾಂಪಲ್ಸ್ ಅನ್ನು ಬೆಂಬಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿತ್ತು. ಅಲ್ಲಿ ಬ್ರಿಟನ್​ನಲ್ಲಿ ಪತ್ತೆಯಾಗಿದ್ದ ರೂಪಾಂತರಿ ಕರೊನಾ ವೈರಸ್​ನ ಸೋಂಕು ಇರುವುದನ್ನು ಆಸ್ಪತ್ರೆ ದೃಢೀಕರಿಸಿದೆ. ಇನ್ನಿಬ್ಬರು ಮಾದರಿ ಹೈದರಾಬಾದ್​ನ ಸೆಲ್ಯುಲಾರ್​ ಆ್ಯಂಡ್ ಮಾಲಿಕ್ಯುಲಾರ್ ಬಯಾಲಜಿ ಸೆಂಟರ್​ಗೆ ಕಳಹಿಸಿದ್ದು, ಅಲ್ಲಿ ರೂಪಾಂತರಿ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದೇ ರೀತಿ ಇನ್ನೊಂದು ಕೇಸ್ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ:Web Exclusive | ಎಲ್ಲಿದ್ದರೂ ಬೇಗ ಬಂದು ಬಿಡಮ್ಮಾ; 50 ದಿನಗಳಾದರೂ ಪತ್ತೆಯಾಗದ ಶಿಕ್ಷಕಿ…
ನವೆಂಬರ್ 25 ಮತ್ತು ಡಿಸೆಂಬರ್ 23ರ ನಡುವೆ ಬ್ರಿಟನ್​ನಿಂದ ಒಟ್ಟು 33,000 ಪ್ರಯಾಣಿಕರು ಭಾರತದ ವಿವಿಧ ವಿಮಾನ ನಿಲ್ದಾಣದ ಮೂಲಕ ಬಂದಿದ್ದಾರೆ. ಅವರೆಲ್ಲರನ್ನೂ ಪತ್ತೆ ಹಚ್ಚಿ, ಆರ್​ಟಿ-ಪಿಸಿಆರ್ ಟೆಸ್ಟ್​ಗೆ ಒಳಪಡಿಸುವ ಕೆಲಸ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಮಾಡಿವೆ. ಅವರಲ್ಲಿ ಇದುವರಗೆ 114 ಜನರಿಗೆ ಕೋವಿಡ್​ 19 ಪಾಸಿಟಿವ್ ಟೆಸ್ಟ್ ದೃಢಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
‘ಮಾನಸಿಕವಾಗಿ ಕುಗ್ಗಿದ್ದರು ಧರ್ಮೇಗೌಡರು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seventeen =
Remember me
