ನವದೆಹಲಿ:ಭಾರತದಲ್ಲಿ ಒಂದು ಲಕ್ಷ ಜನರಿಗೆ ಒಬ್ಬರು ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ 6.04 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಬ್ರಿಟನ್​ನಲ್ಲಿ ಲಕ್ಷಕ್ಕೆ 63.13 ಜನರು ಸಾವನ್ನಪ್ಪುತ್ತಿದ್ದಾರೆ. ಸ್ಪೇನ್​ನಲ್ಲಿ 60.60, ಇಟಲಿಯಲ್ಲಿ 57.19, ಅಮೆರಿಕದಲ್ಲಿ 36.30, ಜರ್ಮನಿಯಲ್ಲಿ 27.32, ಬ್ರೆಜಿಲ್​ನಲ್ಲಿ 23.68 ಮತ್ತು ರಷ್ಯಾದಲ್ಲಿ ಲಕ್ಷಕ್ಕೆ 5.62 ಜನರು ಸೋಂಕಿನಿಂದಾಗಿ ಮೃತರಾಗುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಲಕ್ಷಕ್ಕೆ ಕೇವಲ ಒಬ್ಬರು ಮೃತರಾಗುತ್ತಿದ್ದಾರೆ. ಇದುವರೆಗೆ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
3 ದಿನಗಳ ನಂತರ ಇಳಿಮುಖ:ದೇಶದಲ್ಲಿ ಸೋಮವಾರ 13,500ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸತತ ಎರಡು ದಿನಗಳ ಕಾಲ 15 ಸಾವಿರ ದಾಟಿದ್ದ ಸೋಂಕು ಮಂಗಳವಾರ ಕೊಂಚ ಇಳಿಮುಖ ವಾಗಿತ್ತು. ಹಾಗಿದ್ದರೂ ಏಕದಿನ ಏರಿಕೆಯಲ್ಲಿ ಭಾರತ 3ನೇ ಸ್ಥಾನದಲ್ಲೇ ಕಾಣಿಸಿಕೊಂಡಿದೆ. ಏಕದಿನ ಏರಿಕೆ ಪಟ್ಟಿಯಲ್ಲಿ 31 ಸಾವಿರ ಹೊಸ ಪ್ರಕರಣಗಳೊಂದಿಗೆ ಅಮೆರಿಕ 1ನೇ ಸ್ಥಾನ ಮತ್ತು 24 ಸಾವಿರ ಪ್ರಕರಣಗಳೊಂದಿಗೆ ಬ್ರೆಜಿಲ್ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?
ಲಾಕ್​ಡೌನ್ ಸಮಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಯಲ್ಲಿ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಶೇ. 51 ಇಳಿಕೆ ಕಂಡುಬಂದಿದೆ ಎಂದು ತಜ್ಞರ ತಂಡ ತಿಳಿಸಿದೆ.
ಆತ್ಮ ನಿರ್ಭರ ಭಾರತ ಆರ್ಥಿಕ ಪ್ಯಾಕೇಜ್ ಘೊಷಣೆಯಾದಗಿನಿಂದ ಜೂನ್ 20ರವರೆಗೆ 79 ಸಾವಿರ ಕೋಟಿ ರೂಪಾಯಿಯನ್ನು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್​ಎಂಇ) ಸಾಲದ ರೂಪದಲ್ಲಿ ನೀಡಲಾಗಿದೆ.
ಪುರಿ ಜಗನ್ನಾಥ ದೇವಾಲಯದ ಸಿಬ್ಬಂದಿಯೊಬ್ಬರಿಗೆ ಕರೊನಾ ಪಾಸಿಟಿವ್ ತೋರಿಸಿದೆ. ರಥೋತ್ಸವ ನಡೆಸಲು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆ ದೇವಸ್ಥಾನದ ಎಲ್ಲ ಸಿಬ್ಬಂದಿ ಮತ್ತು ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಪಿಎಂ ಕೇರ್ಸ್​ನಿಂದ 50 ಸಾವಿರ ವೆಂಟಿಲೇಟರ್:ಪ್ರಧಾನ ಮಂತ್ರಿ ಪರಿಹಾರ ನಿಧಿ (ಪಿಎಂ ಕೇರ್ಸ್)ಯಿಂದ 2 ಸಾವಿರ ಕೋಟಿ ರೂಪಾಯಿಯನ್ನು 50 ಸಾವಿರ ಮೇಡ್ ಇನ್ ಇಂಡಿಯಾ ವೆಂಟಿಲೇಟರ್​ಗಳ ಖರೀದಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ದೇಶದ ವಲಸೆ ಕಾರ್ವಿುಕರಿಗಾಗಿ ಹೆಚ್ಚುವರಿ 1 ಒಂದು ಸಾವಿರ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿರುವುದಾಗಿ ಕೇಂದ್ರ ತಿಳಿಸಿದೆ. 50 ಸಾವಿರ ವೆಂಟಿಲೇಟರ್ ಪೈಕಿ 30 ಸಾವಿರ ವೆಂಟಿಲೇಟರ್​ಗಳನ್ನು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ತಯಾರಿಸಿದೆ. ಉಳಿದಂತೆ ಎಜಿವಿಎ ಹೆಲ್ತ್ ಕೇರ್ (10 ಸಾವಿರ), ಎಎಂಟಿಜೆಡ್ ಬೇಸಿಕ್ (5,650), ಎಎಂಟಿಜೆಡ್ ಹೈ ಎಂಡ್ (4 ಸಾವಿರ) ಮತ್ತು ಅಲೈಡ್ ಮೆಡಿಕಲ್ (350) ಸಂಸ್ಥೆಗಳು ವೆಂಟಿಲೇಟರ್ ತಯಾರಿಸಿವೆ. ಈಗಾಗಲೇ 2,923 ವೆಂಟಿಲೇಟರ್​ಗಳು ಸಿದ್ಧವಿದ್ದು ಅದರಲ್ಲಿ 1,340 ವೆಂಟಿಲೇಟರ್​ಗಳನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಲಾಗಿದೆ. ಮಹಾರಾಷ್ಟ್ರಕ್ಕೆ 275, ದೆಹಲಿ 275, ಗುಜರಾತ್​ಗೆ 175, ಬಿಹಾರಕ್ಕೆ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್​ಗಳನ್ನು ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಈ ಸಾರಿ ಹಜ್ ಯಾತ್ರೆ ಇಲ್ಲ:ಸೌದಿ ಅರೇಬಿಯಾದಲ್ಲಿ ಅಂತಾರಾಷ್ಟ್ರೀಯ ಭಕ್ತರ ಆಗಮನಕ್ಕೆ ನಿಷೇಧವಿರುವ ಕಾರಣ ಈ ವರ್ಷ ಹಜ್ ಯಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಇದುವರೆಗೆ 2.13 ಲಕ್ಷ ಜನರು ಹಜ್​ಗೆ ತೆರಳಲು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರ ಅರ್ಜಿಯನ್ನು ವಜಾ ಮಾಡಲಾಗಿದ್ದು, ನೋಂದಣಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ವಾಪಾಸು ಮಾಡಲಾಗುವುದು. 2,300 ಮಹಿಳೆಯರು ಮೆಹ್ರಮ್ (ಪುರುಷ ಸಂಬಂಧಿ) ರಹಿತವಾಗಿ ತೆರಳಲು ನೋಂದಣಿ ಮಾಡಿಕೊಂಡಿದ್ದಾರೆ. ಅವರನ್ನು 2021ರಲ್ಲಿ ಕಳುಹಿಸಿಕೊಡಲಾಗುವುದು ಎಂದು ನಖ್ವಿ ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಕರೊನಾಕ್ಕೆ ಇನ್ನೋರ್ವ ಬಲಿ:ಕೇರಳದಲ್ಲಿ ಕರೊನಾಕ್ಕೆ ಇನ್ನೊಂದು ಜೀವ ಬಲಿಯಾಗಿದೆ. ಕೊಲ್ಲಂ ಮಯ್ಯನಾಡ್ ನಿವಾಸಿ ವಸಂತ ಕುಮಾರ್(68) ಮಂಗಳವಾರ ಮೃತಪಟ್ಟಿದ್ದಾರೆ. ಜೂನ್ 8ರಂದು ದೆಹಲಿಯಿಂದ ಆಗಮಿಸಿದ್ದ ವಸಂತಕುಮಾರ್ ಮನೆಯಲ್ಲಿ ಕ್ವಾರಂಟೈನ್​ನಲ್ಲಿದ್ದರು. ಪಾರಿಪಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೇರಳದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಈ ಮೂಲಕ 22ಕ್ಕೆ ಏರಿದೆ.
ನಾನಿನ್ನು ಬದುಕಿದ್ದು ಪ್ರಯೋಜನವೇನು? ಅನ್ನೋ ಪ್ರಶ್ನೆ ಕಾಡ್ತಿದೆಯಾ? – ಇದನ್ನೊಮ್ಮೆ ಓದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 14 =
Remember me
