ಹೊಸದಿಲ್ಲಿ:ಡಿಸೆಂಬರ್ 8 ರಂದು ಕೇರಳದಲ್ಲಿ ಕೋವಿಡ್ 19 ಉಪ-ವೇರಿಯೆಂಟ್ JN.1 ಪ್ರಕರಣ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ (ಡಿ.16) ಮಾಹಿತಿ ನೀಡಿದ್ದು, 79 ವರ್ಷದ ಮಹಿಳೆಯ ಮಾದರಿಯು ನವೆಂಬರ್ 18 ರಂದು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀಡಿತು ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ನಾಲ್ಕೂವರೆ ವರ್ಷದಿಂದ ಡೇಟಿಂಗ್​: ಪ್ರೇಯಸಿ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದೇಕೆ ಪ್ರಿಯಕರ?
ಮಹಿಳೆ ಶೀತ ಸಂಬಂಧಿ ಖಾಯಿಲೆಗಳು (ಐಎಲ್‌ಐ) ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು, ಬಳಿಕ ಚಿಕಿತ್ಸೆ ಪಡೆದು ಕೋವಿಡ್​ ರೋಗದಿಂದ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರಸ್ತುತ ಭಾರತದಲ್ಲಿನ ಕೋವಿಡ್ 19 ಪ್ರಕರಣಗಳಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚು ಸೌಮ್ಯವಾಗಿರುತ್ತವೆ ಮತ್ತು ಈ ರೋಗಕ್ಕೆ ಸಂಬಂಧಿಸಿದಂತೆ ರೋಗಿಗಳು ಮನೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ಸರಣಿಗೆ ಶಮಿ ಅಲಭ್ಯ: ಏಕದಿನ ಸರಣಿಗೆ ಚಹರ್ ಔಟ್​, ಆಕಾಶ್ ಇನ್​​
ಈ ಹಿಂದೆ ಸಿಂಗಾಪುರದಲ್ಲಿ ಭಾರತೀಯ ಪ್ರಯಾಣಿಕರೊಬ್ಬರಲ್ಲಿ ಜೆಎನ್.1 ಉಪ ವೇರಿಯೆಂಟ್​ ಪತ್ತೆಯಾಗಿತ್ತು. ಈ ವ್ಯಕ್ತಿ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮೂಲದವರಾಗಿದ್ದು, ಅಕ್ಟೋಬರ್ 25 ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು. ಇದಾದ ಬಳಿಕ ತಿರುಚಿರಾಪಳ್ಳಿ ಜಿಲ್ಲೆ ಅಥವಾ ತಮಿಳುನಾಡಿನ ಇತರ ಸ್ಥಳಗಳಲ್ಲಿ ಸ್ಟ್ರೈನ್ ಪತ್ತೆಯಾದ ನಂತರ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ದರ್ಶನ್ ಬಿಗ್​ ಸೀಕ್ರೆಟ್ ರಿವೀಲ್ ಮಾಡಿದ ನಟಿ ಶ್ರುತಿ! ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 7 =
Remember me
