ಲಖನೌ: ವಿದ್ಯಾರ್ಥಿಗಳ  ಅಧ್ಯಯನಕ್ಕೆ ಅನುಕೂಲವಾಗುವಂತೆ ಮಂಬರುವ ಸೆಮಿಸ್ಟರ್​ನಲ್ಲಿ ಬಯೋಕೆಮಿಸ್ಟ್ರಿ ಸ್ನಾತಕೋತ್ತರ ಕೋರ್ಸ್​ ಪಠ್ಯಕ್ರಮದಲ್ಲಿ ಕೋವಿಡ್​19 ಕೊರೊನಾವೈರಸ್​ ಕುರಿತ ವಿಷಯ ಸೇರಿಸಲು ಲಖನೌ ವಿಶ್ವವಿದ್ಯಾಲಯ ನಿರ್ಧರಿಸಿದೆ.
“ಎಂಎಸ್ಸಿ ಬಯೋಕೆಮಿಸ್ಟ್ರಿ ಮೊದಲ ಸೆಮಿಸ್ಟರ್​ನಲ್ಲಿ ಕೋವಿಡ್​ 19 ಕುರಿತು ಒಂದು ಘಟಕವನ್ನು ಪರಿಚಯಿಸಲು ನಾವು ನಿರ್ಧರಿಸಿದ್ದೇವೆ. ಈ ಘಟಕ ಕೋವಿಡ್​ 19 ಹರಡುವಿಕೆ ಮತ್ತು ಸೋಂಕನ್ನು ನಿರ್ವಹಿಸುವ ಮಾರ್ಗಗಳಂತಹ ಅಂಶಗಳನ್ನು ಒಳಗೊಳ್ಳುತ್ತದೆ” ಎಂದು ವಿವಿಯ ಉಪಕುಲಪತಿ ಅಲೋಕ್​ ರೈ ತಿಳಿಸಿದ್ದಾರೆ.
ಬಯೋಕೆಮಿಸ್ಟ್ರಿ ವಿಭಾಗದ ಶಿಕ್ಷಕರೊಂದಿಗೆ ಒಪ್ಪಂದ ಮಾಡಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅದರ ಪ್ರಕಾರ ಶಿಕ್ಷಕರು ಪಠ್ಯಕ್ರಮ ತಯಾರಿಸುತ್ತಿದ್ದಾರೆ. ಪ್ರಸ್ತಾವನೆ ಸೇರಿದಂತೆ ಅಂತಿಮ ಪಠ್ಯಕ್ರಮವನ್ನು ವಿವಿಯ ಮುಂದಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಮಂಡಿಸಲಾಗುವುದು.
ಬಯೋ ಕೆಮಿಸ್ಟ್ರಿಯಷ್ಟೇ ಅಲ್ಲದೆ, ಕೋವಿಡ್​19 ವಿಷಯವನ್ನು ಸಾರ್ವಜನಿಕ ಆರೋಗ್ಯ ಕೋರ್ಸ್​ನಲ್ಲಿ ಸೇರಿಸಲಾಗುವುದು. ಕೋವಿಡ್​ 19 ನಿಂದಾಗಿ ಜಗತ್ತು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದೆ. ವಿದ್ಯಾಥಿರ್ಗಳು ವೈರಸ್​ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವಿ ವಕ್ತಾರ ದುರ್ಗೇಶ ಶ್ರೀವಾಸ್ತವ್​ ತಿಳಿಸಿದ್ದಾರೆ. ವಿವಿ ಈ ಮೊದಲು ಸಂತೋಷ ಮತ್ತು ಯೋಗಕ್ಷೇಮದ ಕುರಿತು ಕೋರ್ಸ್​ಗಳನ್ನು ಪರಿಚಯಿಸಿತ್ತು.
ಲಾಕ್​ಡೌನ್​ ಜಾರಿಯಾದ ಕಾರಣ ವಿವಿಯ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಶಿಕ್ಷಕರು ಆನ್​ಲೈನ್​ ತರಗತಿ ನಡೆಸುತ್ತಿದ್ದಾರೆ. ಹಲವು ಶಿಕ್ಷಕರು ಅಧ್ಯಯನ ಸಾಮಗ್ರಿಯನ್ನು ವಿದ್ಯಾಥಿರ್ಗಳಿಗೆ ಅನುಕೂಲವಾಗುವಂತೆ ಆನ್​ಲೈನ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ವಿವಿ ಆನ್​ಲೈನ್​ ವೃತ್ತಿ ಸಮಾಲೋಚನೆ ನಡೆಸುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ಸಹಾಯ ಮಾಡುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
