ಹೈದರಾಬಾದ್​:ಕರೊನಾ ವೈರಸ್​ ಪ್ರಸರಣವನ್ನು ತಕ್ಕಮಟ್ಟಿಗೆ ನಿಯಂತ್ರಿಸಿದ್ದ ಹೈದರಾಬಾದ್​ನಲ್ಲಿ ಮತ್ತೆ ಗಣನೀಯವಾಗಿ ಏರಿಕೆ ಕಂಡಿದೆ. ಬುಧವಾರ ಒಂದೇ ದಿನ 800 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗಾಗಿ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆಯನ್ನು ಸರಿಯಾಗಿ ಮಾಡಲೇಬೇಕು.
ಆದರೆ ಇದೇ ಸಂದರ್ಭದಲ್ಲಿ ಸುಮಾರು 42 ಖಾಸಗಿ ಆಸ್ಪತ್ರೆಗಳು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ನರ್ಸ್​ಗಳ ಕೊರತೆಯಿದೆ. ಪ್ಯಾರಾಮೆಡಿಕಲ್​ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಹೇಳುತ್ತಿರುವ ಈ ಖಾಸಗಿ ಆಸ್ಪತ್ರೆಗಳು ಕೊವಿಡ್​-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿಲ್ಲ ಹಾಗೂ ಅವರನ್ನು ಅಡ್ಮಿಟ್​ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ, ಖಾಸಗಿ ಆಸ್ಪತ್ರೆ ವೈದ್ಯರಿಗೆ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ರೀತಿಯ ಇನ್ಶೂರೆನ್ಸ್​ ವ್ಯವಸ್ಥೆ ಘೋಷಣೆ ಮಾಡಿಲ್ಲ ಎಂದು ಬೇಸರವನ್ನೂ ಹೊರಹಾಕಿದ್ದಾರೆ.ಇದನ್ನೂ ಓದಿ:ಪಾಕಿಸ್ತಾನದಲ್ಲಿ ಬಿಗೊ ಬ್ಯಾನ್​; ಟಿಕ್​ಟಾಕ್​ಗೆ ಕೊನೇ ಎಚ್ಚರಿಕೆ ರವಾನೆ
ಇದುವರೆಗೂ ಹೈದರಾಬಾದ್​​ನಲ್ಲಿ ಒಟ್ಟು 56 ಖಾಸಗಿ ಆಸ್ಪತ್ರೆಗಳು ಕೊವಿಡ್​-19 ಸೋಂಕಿತರಿಗೆ ಬೆಡ್​ ವ್ಯವಸ್ಥೆ ಮಾಡಿ, ಸೂಕ್ತ ಚಿಕಿತ್ಸೆ ನೀಡುತ್ತಿದ್ದವು. ಅದರಲ್ಲೀಗ 42 ಆಸ್ಪತ್ರೆಗಳು ಹಿಂದೆ ಸರಿದಿವೆ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಸಿಬ್ಬಂದಿಯಿಲ್ಲ. ರಾಜ್ಯಸರ್ಕಾರ ನಮಗಾಗಿ ಇನ್ಶೂರೆನ್ಸ್​ ನೀಡಿಲ್ಲ ಎಂದು ತೆಲಂಗಾಣ ಆಸ್ಪತ್ರೆಗಳು ಮತ್ತು ನರ್ಸಿಂಗ್​ ಹೋಂ ಅಸೋಸಿಯೇಶನ್​ ಅಧ್ಯಕ್ಷ ಡಾ. ಅಶೋಕ್​ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
https://www.vijayavani.net/goa-airport-starts-immunity-boosting-tea-service/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 15 =
Remember me
