ಬೆಂಗಳೂರು:ಯಾವುದೇ ಒಂದು ರೋಗನಿರೋಧಕ ಚುಚ್ಚುಮದ್ದನ್ನು ಸಿದ್ಧಪಡಿಸಲು ಕನಿಷ್ಠ ನಾಲ್ಕು ವರ್ಷಗಳಾದರೂ ಬೇಕಾಗುತ್ತದೆ. ಹಾಗಾಗಿ ಕೋವಿಡ್​-19 ನಿರೋಧಕ ಚುಚ್ಚುಮದ್ದನ್ನು ಒಂದು ವರ್ಷದಲ್ಲಿ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದು ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಜುಂದಾರ್​ ಷಾ ಹೇಳಿದ್ದಾರೆ.
ಶನಿವಾರ ವೆಬಿನಾರ್​ನಲ್ಲಿ ಮಾತನಾಡಿದ ಬಯೋಕಾನ್​ನ ಎಕ್ಸಿಕ್ಯೂಟಿವ್​ ಚೇರ್​ಪರ್ಸನ್​ ಕಿರಣ್​ ಮಜುಂದಾರ್​ ಷಾ, ಕೋವಿಡ್​-19 ನಿರೋಧಕ ಚುಚ್ಚುಮದ್ದನ್ನು ತಯಾರಾಗಿ ಎಲ್ಲರಿಗೂ ಸಿಗುವಂತೆ ಆಗಲು ಸಾಕಷ್ಟು ಸಮಯ ಹಿಡಿಯಲಿದೆ. ಇನ್ನಷ್ಟು ವರ್ಷ ಅದರೊಂದಿಗೆ ಜೀವಿಸುವುದು ಅನಿವಾರ್ಯ. ಹಾಗೂ ಚುಚ್ಚುಮದ್ದು ಸಂಶೋಧನೆಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಯಾವುದೇ ರೋಗನಿರೋಧಕ ಚುಚ್ಚುಮದ್ದು ಸಿದ್ಧಪಡಿಸುವುದು ತುಂಬಾ ಸಂಕೀರ್ಣವಾದ ಕೆಲಸವಾಗಿದೆ. ಇದನ್ನು ಸಿದ್ಧಪಡಿಸಿ, ಪರೀಕ್ಷಿಸಿ, ಟ್ರಯಲ್​ಗಳನ್ನು ನಡೆಸಿ, ಬಿಡುಗಡೆ ಮಾಡಲು ಕನಿಷ್ಠವೆಂದರೂ ನಾಲ್ಕು ವರ್ಷಗಳು ಬೇಕಾಗುತ್ತವೆ. ಹೀಗಿರುವಾಗ ಒಂದು ವರ್ಷದಲ್ಲಿ ಕೋವಿಡ್​-19 ನಿರೋಧಕ ಚುಚ್ಚುಮದ್ದು ಸಿದ್ಧಪಡಿಸುವುದು ಅಸಾಧ್ಯದ ಮಾತು ಎಂದು ಹೇಳಿದರು.
ಇನ್ನು ಮುಂದೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ದೇಶಾದ್ಯಂತ ಕರ್ಫ್ಯೂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 9 =
Remember me
