ಲಂಡನ್​:ಸದ್ಯ ಕರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ದೇಶಗಳ ಪೈಕಿ ಯುನೈಟೆಡ್​ ಕಿಂಗಡಂ ಮುಂಚೂಣಿಯಲ್ಲಿದೆ. ಇಲ್ಲಿನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ತಂಡ ಕೋತಿಗ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಜತೆಗೆ ಸೆಪ್ಟೆಂಬರ್​ನಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಸಂಶೋಧನಾ ತಂಡವೇ ಘೋಷಿಸಿದೆ. ಆದರೆ, ಪ್ರಧಾನಿ ಬೊರಿಸ್ ಜಾನ್​ಸನ್​ ಹೇಳುತ್ತಿರೋದೇ ಬೇರೆ..
ಲಾಕ್​ಡೌನ್​ ನಿಯಮಗಳ ಸಡಿಲಿಕೆ ಕುರಿತು ಗೊಂದಲಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬೊರಿಸ್​ ಜಾನ್​ಸನ್​ ಭಾರಿ ಟೀಕೆಗೆಗೆ ಒಳಗಾಗಿದ್ದಾರೆ. ಈ ನಡುವೆ, ಕರೊನಾ ವೈರಸ್​ ತಡೆಗೆ ಸಂಶೋಧಿಸಲಾಗುತ್ತಿರುವ ಲಸಿಕೆ ಫಲಪ್ರದವಾಗದೇ ಇರಬಹುದು ಎಂದು ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ;ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​?
ಆಕ್ಸ್​ಫರ್ಡ್​ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿದ್ದರೂ, ಲಸಿಕೆ ಸಜ್ಜಾಗಲು ಭಾರಿ ಸಮಯಾವಕಾಶ ಬೇಕಾಗುತ್ತದೆ. ಪ್ರಸ್ತುತ ಲಸಿಕೆ ತಯಾರಿಕೆಯ ಜಾಗತಿಕ ಪೈಪೋಟಿಯಲ್ಲಿ ನಾವು ಭಾರಿ ಮುಂದಿದ್ದೇವೆ. ಈ ನಿಟ್ಟಿನಲ್ಲಿ ಅತ್ಯಂತ ಭರವಸೆದಾಯಕ ಸಂಶೋಧನೆಗಳು ನಮ್ಮಲ್ಲಿಯೇ ನಡೆಯುತ್ತಿವೆ. ಲಸಿಕೆಯನ್ನು ಬೃಹತ್​ ಪ್ರಮಾಣದಲ್ಲಿ ಉತ್ಪಾದಿಸಲು 854 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿಯೂ ನಿಗದಿತ ಕಾಲಾವಧಿಗಿಂತ ನಾವು 12 ತಿಂಗಳು ಮುಂದಿದ್ದೇವೆ ಎಂದು ಬೊರಿಸ್​ ಹೇಳಿದ್ದಾರೆ.
ಇದನ್ನೂ ಓದಿ;ಇಸ್ಲಾಮಿಕ್​ ಪ್ರಚಾರಕ ಝಾಕೀರ್​ ನಾಯ್ಕ್​ಗೆ ಬ್ರಿಟನ್​ನಲ್ಲೂ ಎದುರಾಯ್ತು ಕುತ್ತು
ಯುನೈಟೆಡ್​ ಕಿಂಗ್​ಡಂನ ಎಲ್ಲ ಜನರಿಗೂ ಕೇವಲ ಆರು ತಿಂಗಳಲ್ಲಿ ಇಲ್ಲಿ ಲಸಿಕೆಯನ್ನು ತಯಾರಿಸಲಾಗುತ್ತದೆ. 2021ರಲ್ಲಿ ಕಾರ್ಯಾರಂಭಿಸಲು ಅನುಕೂಲವಾಗುವಂತೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಈ ಔಷಧ ತಯಾರಿಕಾ ಘಟಕ ಆಕ್ಸ್​ಫರ್ಡ್​ಶೈರ್​ನಲ್ಲಿ ನಿರ್ಮಾಣವಾಗಲಿದೆ. ಅಲ್ಲದೇ, ಯುನೈಟೆಡ್​ನ ಕಿಂಗಂಡಂನ ಮೊದಲ ಲಾಭರಹಿತ ಸಂಸ್ಥೆಯಾಗಿರಲಿದೆ. ಈ ಘಟಕದಲ್ಲಿ ಇತರ ವೈರಸ್​ಜನ್ಯ ಕಾಯಿಲೆಗಳಿಗೂ ಔಷಧ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲ ಆದರೂ, ಲಸಿಕೆ ಫಲಪ್ರದವಾಗುವ ಬಗ್ಗೆ ಬೊರಿಸ್​ ಜಾನ್​​ಸನ್​ ಅನುಮಾನ ವ್ಯಕ್ತಪಡಿಸಿದ್ದೇಕೆ ಎಂಬುದು ನಿಗೂಢವಾಗಿದೆ.
ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
