ನವದೆಹಲಿ:ಬ್ರಿಟನ್​ನ ಪ್ರತಿಷ್ಠಿತ ಔಷಧ ಉತ್ಪಾದನಾ ಸಂಸ್ಥೆ ಅಸ್ಟ್ರಾಜೆನೆಕಾ AZD1222 ಎಂಬ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಪ್ರಾಯೋಗಿಕ ಉತ್ಪಾದನೆ ಆರಂಭಿಸಿದೆ. ಆಕ್ಸಫರ್ಡ್​ ವಿಶ್ವವಿದ್ಯಾಲಯದ ಸಹಕಾರದಲ್ಲಿ ತಯಾರಾಗುತ್ತಿರುವ ಈ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದ ಉತ್ಪಾದನೆಗಾಗಿ ಭಾರತದ ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಕೂಡ ಅಸ್ಟ್ರಾಜೆನೆಕಾ ಜತೆ ಕೈಜೋಡಿಸಿದೆ.
ಇದುವರೆಗಿನ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆ ಎಲ್ಲವೂ ಅಂದುಕೊಂಡಂತೆ ಸಾಗುತ್ತಿದೆ. ಇದರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗುವ ವೇಳೆಗೆ ನಾವು ಸಂಪೂರ್ಣವಾಗಿ ಸಿದ್ಧವಾಗಿರುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಇದರ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಸ್ಟ್ರಾಜೆನೆಕಾದ ಮುಖ್ಯ ಕಾರ್ಯಕಾರಿ ಅಧಿಕಾರಿ ಪ್ಯಾಸ್ಕಲ್​ ಸೋರಿಯಾಟ್​ ಹೇಳಿದ್ದಾರೆ.
ಪ್ರಸ್ತುತ ಈ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆಗಳು ಮುಗಿದು ಬೇಸಿಗೆಯ ಅಂತ್ಯಕ್ಕೆ ಇಲ್ಲವೇ ಆಗಸ್ಟ್​ ವೇಳೆಗೆ ಫಲಿತಾಂಶಗಳು ಹೊರಬೀಳಲಿವೆ. ಸೆಪ್ಟೆಂಬರ್​ ವೇಳೆಗೆ ಕೋವಿಡ್​-19 ಪಿಡುಗಿನ ಪರಿಣಾಮಕಾರಿ ತಡೆಗೆ ಯೋಗ್ಯವಾದ ಚುಚ್ಚುಮದ್ದು ಸಿದ್ಧಪಡಿಸಿದ್ದೇವೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಮದ್ಯದ ಮೇಲಿನ ಶೇ.70 ಕರೊನಾ ಶುಲ್ಕ ರದ್ದು, ಕಡಿಮೆಯಾಯಿತು ಮದ್ಯದ ಬೆಲೆ
ನಿಖರವಾದ ಫಲಿತಾಂಶ ಬರುತ್ತಲೇ ಈ ಚುಚ್ಚುಮದ್ದನ್ನು ಜಾಗತಿಕವಾಗಿ ತಯಾರಿಸಲು ಅನುವಾಗುವಂತೆ ಅಸ್ಟ್ರಾಜೆನೆಕಾ ಈಗಾಗಲೆ ವಿವಿಧ ರಾಷ್ಟ್ರಗಳ ಹಲವು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಸಾಂಕ್ರಾಮಿಕ ರೋಗ ತಡೆಗೆ ಸನ್ನದ್ಧವಾದ ಒಕ್ಕೂಟ (Coalition for Epidemic Preparedness Innovations-CEPI), ಘವಿ ಮತ್ತು ಭಾರತದ ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಜತೆಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಭಾರತದ ಸಂಸ್ಥೆಯಿಂದಾಗಿ ಚುಚ್ಚುಮದ್ದನ್ನು ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೆ ತ್ವರಿತವಾಗಿ ಚುಚ್ಚುಮದ್ದನ್ನು ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕೇಂಬ್ರಿಡ್ಜ್​ ಮೂಲದ ಈ ಸಂಸ್ಥೆ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಅಮೆರಿಕಕ್ಕಾಗಿ 400 ದಶಲಕ್ಷ ಚುಚ್ಚುಮದ್ದು ಹಾಗೂ ಬ್ರಿಟನ್​ಗಾಗಿ 100 ದಶಲಕ್ಷ ಚುಚ್ಚುಮದ್ದು ಉತ್ಪಾದಿಸಲೂ ಒಪ್ಪಂದ ಮಾಡಿಕೊಂಡಿದೆ.
ಕೆಲವು ನೂರು ಸ್ವಯಂಸೇವಕರೊಂದಿಗೆ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಪರೀಕ್ಷೆಯನ್ನು ಏಪ್ರಿಲ್​ನಲ್ಲಿ ಆರಂಭಿಸಿದ್ದ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಇದೀಗ ಪರೀಕ್ಷೆಗಳನ್ನು 10 ಸಾವಿರ ಸ್ವಯಂಸೇವಕರಿಗೆ ವಿಸ್ತರಿಸಿದೆ. ಜೂನ್​ ಮಧ್ಯಭಾಗದಲ್ಲಿ ಬ್ರೆಜಿಲ್​ನಲ್ಲಿ ಕೂಡ ಸ್ವಯಂಸೇವಕರ ಮೇಲೆ ಈ ಚುಚ್ಚುಮದ್ದಿನ ಪ್ರಯೋಗ ಆರಂಭವಾಗಲಿದೆ.
‘ಚಿರಂಜೀವಿ’ ಎಂದು ಹೆಸರಿಟ್ಟುಕೊಂಡು ಅಕಾಲಿಕವಾಗಿ ಅಗಲಿದರು’; ಬಿಕ್ಕಿಬಿಕ್ಕಿ ಅತ್ತರು ನಟಿ ತಾರಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 10 =
Remember me
