ನವದೆಹಲಿ:ಕರೊನಾ ಸೋಂಕಿನಿಂದ ಮೂಳೆಗೆ ತೀವ್ರ ಹಾನಿ ಆಗಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ. ಸೋಂಕು ಇರುವ ಸಮಯ ಮತ್ತು ಚೇತರಿಕೆಯಾದ ಮೇಲೂ ಇದು ಕಾಡಬಹುದು ಎಂದು ತಿಳಿಸಿದೆ. ಶ್ವಾಸಕೋಶದಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಬೇರೆ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ಅಸ್ಥಿಗೆ ಸಂಬಂಧಿಸಿದ ಚಯಾಪಚಯದ ಮೇಲೂ ಸೋಂಕಿನ ಪರಿಣಾಮ ಕಂಡು ಬಂದಿರುವುದು ಪ್ರಾಣಿಗಳ ಮೇಲಿನ ಪ್ರಯೋಗದಿಂದ ತಿಳಿದುಬಂದಿದೆ. ಚಯಾಪಚಯದಲ್ಲಿನ ದೋಷ ದಿಂದ ಮೂಳೆ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹಾಂಕಾಂಗ್​ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.
ಕೋವಿಡ್​ ಸೋಂಕು ಚುಚ್ಚಲಾದ ಪ್ರಾಣಿಗಳ ಮೂಳೆಯ ಸ್ಯಾಂಪಲ್​ ಪಡೆದು ಮೂರು ಆಯಾಮದ ಸಿಟಿ ಸ್ಕಾ$ನ್​ ಮೂಲಕ ವಿಶ್ಲೇಷಿಸಲಾಯಿತು. ಟ್ರಾಬೆಕ್ಯುಲರ್​ ಮೂಳೆಯ ಮೇಲೆ ಶೇ. 20ರಿಂದ 50ರವರೆಗೆ ಸೋಂಕು ಪರಿಣಾಮ ಬೀರಿರುವುದು ಗೊತ್ತಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನ ವರದಿಯು ನೇಚರ್​ ಕಮ್ಯುನಿಕೇಷನ್ಸ್​ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಸಕ್ರಿಯ ಪ್ರಕರಣಗಳು ಏರಿಕೆಭಾರತದಲ್ಲಿ ಶುಕ್ರವಾರ 2,710 ಹೊಸ ಕೋವಿಡ್​ ಸೋಂಕುಗಳು ದೃಢಪಟ್ಟಿದ್ದು, 4,31,47,530ಕ್ಕೆ ಒಟ್ಟು ಸಂಖ್ಯೆ ಏರಿದೆ. 14 ಮಂದಿ ಸಾವಿನೊಂದಿಗೆ ಪಟ್ಟು ಮೃತರ ಸಂಖ್ಯೆ 5,24,539ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,814 ಇದ್ದು, ಗುರುವಾರಕ್ಕಿಂತ 400 ಪ್ರಕರಣ ಹೆಚ್ಚಾಗಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.58 ಇದ್ದು, ಚೇತರಿಕೆ ಪ್ರಮಾಣ ಶೇ. 98.75 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
