ನವದೆಹಲಿ:ಕರೊನಾ ವೈರಾಣು ಸೋಂಕು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಬಲಿಪಡೆಯುತ್ತಲೇ ಇದೆ. ಇದರಿಂದಾಗಿ ಶವಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆ ಉಂಟಾಗಿ ಕುಟುಂಬಸ್ಥರು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಥಳೀಯ ಸರ್ಕಾರಗಳು ಶೀತಲೀಕೃತ ಟ್ರಕ್​ಗಳನ್ನು ವ್ಯವಸ್ಥೆ ಮಾಡುತ್ತಿದ್ದು, ಅದರಲ್ಲಿ ಶವಗಳನ್ನು ಸಂರಕ್ಷಿಸಿಡಲಾಗುತ್ತಿದೆ.
ಇದು ಅಮೆರಿಕದಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕೂ ಮುನ್ನ ಕೋವಿಡ್​-19 ಪಿಡುಗು ತಾರಕದಲ್ಲಿದ್ದಾಗ ನ್ಯೂಯಾರ್ಕ್​ನಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿತ್ತು. ಆಗಲೂ ಕೂಡ ಇದೇ ರೀತಿ ಶೀತಲೀಕೃತ ಟ್ರಕ್​ಗಳಲ್ಲಿ ಶವಗಳನ್ನು ಸಂರಕ್ಷಿಸಿ ಇಡಲಾಗುತ್ತಿತ್ತು. ಇದೀಗ ಈ ಪ್ರವೃತ್ತಿ ಅಮೆರಿಕದ ಟೆಕ್ಸಾಸ್​ ಮತ್ತು ಆರಿಜೋನಾಗಳಿಗೆ ವಿಸ್ತರಿಸಿದೆ.
ಇದನ್ನೂ ಓದಿ:ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಿದ್ರೂ ಬಂತು ಪಾಸಿಟಿವ್ ರಿಪೋರ್ಟ್!
ಟೆಕ್ಸಾಸ್​ನಲ್ಲಿ ಇದುವರೆಗೂ 3,700 ಜನರು ಮೃತಪಟ್ಟಿದ್ದಾರೆ. ಅಲ್ಲಿ ಈಗಲೂ ಪ್ರತಿದಿನ ಅಂದಾಜು 129 ಜನರ ಕರೊನಾಕ್ಕೆ ಬಲಿಯಾಗುತ್ತಿದ್ದಾರೆ. ಇವರೆಲ್ಲರ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಸ್ಯಾನ್​ ಆಂಟೋನಿಯೋ ಮತ್ತು ಕಾರ್ಪಸ್​ ಕ್ರಿಸ್ಟಿ ಎಂಬ ಊರುಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ ಆ ಊರುಗಳಲ್ಲಿ ಸ್ಥಳೀಯ ಆಡಳಿತಗಳು ಶವಗಳನ್ನು ಸಂರಕ್ಷಿಸಿಡಲು ಶೀತಲೀಕೃತ ಟ್ರಕ್​ಗಳು ಮತ್ತು ಟ್ರೇಲರ್​ಗಳನ್ನು ವ್ಯವಸ್ಥೆ ಮಾಡುತ್ತಿವೆ.
ಇಷ್ಟೊಂದು ಶವಗಳ ಸಂಸ್ಕಾರಕ್ಕೆ ಸ್ಥಳಾವಕಾಶವೇ ಇಲ್ಲವಾಗಿದೆ. ಇದು ಅಚ್ಚರಿಯೆನಿಸಿದರೂ ಸತ್ಯ. ಹಾಗಾಗಿ ನಾವು ಆಯಕಟ್ಟಿನ ಸ್ಥಳಗಳಲ್ಲಿ ಶೀತಲೀಕೃತ ಟ್ರಕ್​ ಮತ್ತು ಟ್ರೇಲರ್​ಗಳನ್ನು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸ್ಯಾನ್​ ಆಂಟಾನಿಯೋದ ಮೇಯರ್​ ರಾನ್​ ನಿರೆಂಬರ್ಗ್​ ತಿಳಿಸಿದ್ದಾರೆ.
ಆರಿಜೋನಾ ರಾಜ್ಯದಲ್ಲಿ ಕೂಡ ಇದುವರೆಗೆ 2,500ಕ್ಕೂ ಹೆಚ್ಚು ಜನರ ಕೋವಿಡ್​ಗೆ ಬಲಿಯಾಗಿದ್ದಾರೆ. ಶವಗಳನ್ನು ಇರಿಸಲು ಆಸ್ಪತ್ರೆಯ ಶವಗಾರಗಳಲ್ಲಿ ಸ್ಥಳದ ಕೊರತೆ ಉಂಟಾಗಿದೆ. ಹಾಗಾಗಿ ಮಾರಿಕೋಪಾ ಕೌಂಟಿ ಮತ್ತು ಫೀನಿಕ್ಸ್​ ನಗರಗಳಲ್ಲಿ ತಲಾ 294 ಶವಗಳನ್ನು ಇರಿಸಲು ಸಮರ್ಥವಾದ 14 ಶೀತಲೀಕೃತ ಟ್ರಕ್​ಗಳನ್ನು ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್​ಗೆ ಅಪ್ಪ-ಮಗ ಬಲಿ, ಇಡೀ ಕುಟುಂಬಕ್ಕೆ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fifteen =
Remember me
