ನವದೆಹಲಿ: ಭಾರತದಲ್ಲಿ ಬುಧವಾರ 680 ಜನರು ಕರೊನಾ ಸೋಂಕಿಗೆ ಬಲಿಯಾಗಿದ್ದು, ಇದು ಎರಡು ತಿಂಗಳಲ್ಲಿ ಸಂಭವಿಸಿದ ಕನಿಷ್ಠ ಸಾವಿನ ಸಂಖ್ಯೆ ಆಗಿದೆ. ಈ ಹಿಂದೆ ಜುಲೈ 28ರಂದು 654 ಜನರು ಸೋಂಕಿಗೆ ಬಲಿಯಾಗಿದ್ದರು. ಅದಾದ ನಂತರ ಇದೇ ಮೊದಲನೇ ಬಾರಿಗೆ ಸಾವಿನ ಸಂಖ್ಯೆ 700ರ ಒಳಗೆ ವರದಿಯಾಗಿದೆ. ಒಟ್ಟಾರೆ ಮೃತರ ಸಂಖ್ಯೆ 1.11 ಲಕ್ಷದಷ್ಟಾಗಿದೆ. ಸೋಂಕು ದ್ವಿಗುಣ ಸಮಯವು ಆಗಸ್ಟ್​ನಲ್ಲಿ 25.5 ದಿನ ವರದಿಯಾಗಿತ್ತು. ಅದೀಗ 70.4 ದಿನಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಬುಧವಾರ ಒಂದೇ ದಿನ 67,700 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, 81,500 ಜನರು ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆ 73 ಲಕ್ಷ ದಾಟಿದೆ. ಗುಣಮುಖರ ಸಂಖ್ಯೆ 63.83 ಲಕ್ಷ ಮೀರಿದೆ.
ಐದೇ ನಿಮಿಷದಲ್ಲಿ ಕರೊನಾ ವರದಿ :ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ವಿಜ್ಞಾನಿಗಳು ಹೊಸ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಕಂಡುಹಿಡಿದಿದ್ದಾರೆ. ಈ ಕಿಟ್ ಐದು ನಿಮಿಷಗಳೊಳಗೆ ಕರೊನಾ ವರದಿಯನ್ನು ನೀಡುತ್ತದೆ. 2021ರ ಆರಂಭದೊಳಗೆ ಅನುಮತಿ ಪಡೆದು ಹೆಚ್ಚಿನ ಪ್ರಮಾಣದಲ್ಲಿ ಕಿಟ್ ಉತ್ಪಾದನೆ ಆರಂಭಿಸುವುದಾಗಿ ವಿಶ್ವವಿದ್ಯಾಲಯ ತಿಳಿಸಿದೆ.
ಯುವಜನತೆಗೆ 2022ರವರೆಗೆ ಔಷಧವಿಲ್ಲ:ಕರೊನಾ ಔಷಧ ಸಿದ್ಧವಾದರೂ 2022ರೊಳಗೆ ಯುವಜನತೆಗೆ ಲಭ್ಯವಾಗುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ತಿಳಿಸಿದೆ. ಔಷಧವನ್ನು ಆದ್ಯತೆ ಮೇರೆಗೆ ವಿತರಿಸಲಾಗá-ವುದು. ಮೊದಲಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ನಂತರ ಮುಖ್ಯ ಭೂಮಿಕೆ ಕೆಲಸಗಾರರು, ವೃದ್ಧರಿಗೆ ವಿತರಿಸಲಾಗುವುದು. ಆರೋಗ್ಯವಂತ ಯುವಕರಿಗೆ ಕೊನೆಯ ಆದ್ಯತೆ ನೀಡಲಾಗುವುದು ಎಂದು ಡಬ್ಲ್ಯೂಎಚ್​ಒನ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
ಪರೀಕ್ಷೆ ಇನ್ನಷ್ಟು ಹೆಚ್ಚಿಸಿ:ದೇಶದಲ್ಲಿ ಕರೊನಾ ಪರೀಕ್ಷೆ ಮತ್ತು ಸಿರೊ ಸಮೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಗುರುವಾರ ಅವರು ಕರೊನಾ ಪರಿಶೀಲನಾ ಸಭೆ ನಡೆಸಿದರು. ದೇಶದ ಪ್ರತಿಯೊಬ್ಬ ಪ್ರಜೆಗೆ ಕಡಿಮೆ ಬೆಲೆಯಲ್ಲಿ ಪರೀಕ್ಷೆಯಾಗುವಂತಾಗಬೇಕು. ಸೋಂಕಿನ ವಿರುದ್ಧ ಉನ್ನತ ಮಟ್ಟದ ಹೋರಾಟವನ್ನು ಮುಂದುವರಿಸಬೇಕು ಎಂದರು. ಸಾಕ್ಷ್ಯ ಆಧಾರಿತ ಸಂಶೋಧನೆ ನಡೆಸುತ್ತಿರುವ ಆಯುಷ್ ಇಲಾಖೆ ಮತ್ತು ಔಷಧಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಗಳನ್ನು ಅವರು ಪ್ರಶಂಶಿಸಿದ್ದಾರೆ. ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ನೀತಿ ಆಯೋಗದ ಸದಸ್ಯರು, ಹಿರಿಯ ವಿಜ್ಞಾನಿಗಳು ಭಾಗವಹಿಸಿದ್ದರು.
ಬ್ರಿಟನ್​ನಲ್ಲಿ ಕಠಿಣ ನಿಯಮ:ಬ್ರಿಟನ್​ನ ಕೆಲ ನಗರಗಳಲ್ಲಿ ಕರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮ ವಿಧಿಸುವುದಾಗಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಮ್ಯಾಟ್ ಹ್ಯಾನ್​ಕಾಕ್ ತಿಳಿಸಿದ್ದಾರೆ. ಲಂಡನ್, ಎಸೆಕ್ಸ್, ಯಾರ್ಕ್ ಸೇರಿ ಹಲವೆಡೆ ಟೈರ್ 2 ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಮೂಲಕ ಈ ಪ್ರದೇಶಗಳನ್ನು ಮಧ್ಯಮ ಅಪಾಯ ಸ್ಥಳಗಳ ಬದಲಾಗಿ ಹೆಚ್ಚು ಅಪಾಯ ಸ್ಥಳಗಳಾಗಿ ಗುರುತಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಬರುವುದಕ್ಕೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + ten =
Remember me
