ನವದೆಹಲಿ:ಒಮಿಕ್ರಾನ್ ರೂಪಾಂತರಿಯ ಬಿಎ.2 ಉಪ-ತಳಿಯ ಉಪಟಳದಿಂದಾಗಿ ಸೋಂಕು ಏರಿಕೆಯಾಗುತ್ತಿದ್ದು, ಏಷ್ಯಾ ಖಂಡದಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಬುಧವಾರ 10 ಕೋಟಿ ದಾಟಿದೆ. ನಾಲ್ಕನೇ ಅಲೆಯಲ್ಲಿ ಏಷ್ಯಾದಲ್ಲಿ ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾ ಹೆಚ್ಚು ಬಾಧಿತ ದೇಶಗಳಾಗುವ ಸಾಧ್ಯತೆ ಇದೆ. ಬಿಎ.2 ಉಪ-ಪ್ರಭೇದದ ಪರಿಣಾಮವಾಗಿ ದಕ್ಷಿಣ ಕೊರಿಯಾ, ಚೀನಾ ಮತ್ತು ವಿಯೆಟ್ನಾಂನಲ್ಲಿ ಇತ್ತೀಚಿನ ವಾರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು ಶಾಂಘೈ ಸಹಿತ ಚೀನಾದ ಹಲವು ನಗರಗಳು ಲಾಕ್​ಡೌನ್ ಆಗಿವೆ. ಏಷ್ಯಾ ವಲಯದಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ 10 ಲಕ್ಷಕ್ಕೂ ಅಧಿಕ ಹೊಸ ಕೇಸ್​ಗಳು ದೃಢಪಡುತ್ತಿವೆ. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನರನ್ನು ಹೊಂದಿರುವ ಏಷ್ಯಾದಲ್ಲಿ ಶೇಕಡ 21 ಕೋವಿಡ್ ಸೋಂಕಿತರಿದ್ದಾರೆ.
ಕೊವೊವ್ಯಾಕ್ಸ್ ಪರಿಶೀಲನೆ:ಕೊವೊವ್ಯಾಕ್ಸ್ ಲಸಿಕೆಯನ್ನು ಮಕ್ಕಳು ಮತ್ತು ವಯಸ್ಕರಿಗೆ ನೀಡುವ ಕುರಿತು ಭಾರತ ಸೆರಂ ಸಂಸ್ಥೆ ಸಲ್ಲಿಸಿರುವ ದತ್ತಾಂಶವನ್ನು ರಾಷ್ಟ್ರೀಯ ಲಸಿಕೆ ಕುರಿತ ತಾಂತ್ರಿಕ ಸಲಹಾ ಗುಂಪು (ಎನ್​ಟಿಎಜಿಐ) ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ವಯಸ್ಕರು ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವೊವ್ಯಾಕ್ಸ್ ವ್ಯಾಕ್ಸಿನ್​ನ ತುರ್ತು ಬಳಕೆಗೆ ಡಿಸಿಜಿಐ ಕಳೆದ ವರ್ಷ ಡಿ. 28ರಂದು ತುರ್ತು ಅನುಮೋದನೆ ನೀಡಿತ್ತು.
ಭಾರತದಲ್ಲಿ 1,233 ಹೊಸ ಕೇಸ್:ಭಾರತದಲ್ಲಿ ಬುಧವಾರ ಬೆಳಿಗ್ಗೆ ವರೆಗಿನ ಒಂದು ದಿನದ ಅವಧಿಯಲ್ಲಿ 1,233 ಹೊಸ ಪ್ರಕರಣಗಳು ದೃಢಪಟ್ಟಿವೆ ಹಾಗೂ ಸಕ್ರಿಯ ಪ್ರಕರಣಗಳು 14,704ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿತರ ಚೇತರಿಕೆ ದರ ಶೇಕಡ 98.75 ಆಗಿದೆ. 31 ಜನರು ಮೃತಪಟ್ಟಿದ್ದು ಸಾವಿನ ಒಟ್ಟು ಸಂಖ್ಯೆ 5,21,101ಕ್ಕೆ ತಲುಪಿದೆ.
ಜಾಗತಿಕ ಸಾವು ಹೆಚ್ಚಳ:ಕಳೆದ ವಾರ ಜಾಗತಿಕವಾಗಿ ಕರೊನಾ ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇಕಡ 40ರಷ್ಟು ಏರಿಕೆಯಾಗಿದೆ ಎಂದು ಡಬ್ಲ್ಯುಎಚ್​ಒ ಹೇಳಿದೆ. ಅಮೆರಿಕದಲ್ಲಿ ಮರಣದ ಹೆಚ್ಚಳ ಹಾಗೂ ಭಾರತದಲ್ಲಿ ಹಿಂದಿನ ಸಾವುಗಳ ಮರು ಹೊಂದಾಣಿಕೆ ಮಾಡಿರುವುದು ಇದಕ್ಕೆ ಕಾರಣ ಎಂದಿದೆ.
ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
