ನವದೆಹಲಿ:ಕರೊನಾ ಈ ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಜನರದ್ದು, ವೈದ್ಯಕೀಯ ವಲಯದ ಸಿಬ್ಬಂದಿಯದು ಒಂದು ರೀತಿಯ ಸಮಸ್ಯೆಯಾದರೆ ಪೊಲೀಸ್​ ಇಲಾಖೆಗೆ ಮತ್ತೊಂದು ರೀತಿಯ ಸಮಸ್ಯೆ. ಸೋಂಕಿತರ ನಿರ್ವಹಣೆಯಿಂದ ಹಿಡಿದು ಲಾಕ್​ಡೌನ್​ನಲ್ಲಿ ಜನರ ನಿರ್ವಹಣೆಯವರೆಗೂ ಕೆಲಸವೇ ಕೆಲಸ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿರುವ ಪೊಲೀಸರಲ್ಲಿ ಒಬ್ಬರು ದೆಹಲಿಯ ಎಎಸ್​ಐ ರಾಕೇಶ್​.
ರಾಕೇಶ್​ (56) ಏಪ್ರಿಲ್​ 13ರಿಂದ ಕೋವಿಡ್​ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತಾಗಾರವೊಂದರ ಬಳಿ ಅವರನ್ನು ಕೆಲಸಕ್ಕೆ ನಿಯೋಜಿಸಲಾಗಿದ್ದು, ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಅವರು ನೆರವಾಗುತ್ತಿದ್ದಾರೆ. ಏಪ್ರಿಲ್​ 13ರಿಂದ ಇಲ್ಲಿಯವರೆಗೆ ಸುಮಾರು 1,100ಕ್ಕೂ ಹೆಚ್ಚು ಸೋಂಕಿತರ ಅಂತ್ಯಸಂಸ್ಕಾರವನ್ನು ಅವರು ನಡೆಸಿಕೊಟ್ಟಿದ್ದಾರೆ. 50ಕ್ಕೂ ಹೆಚ್ಚು ಸೋಂಕಿತರಿಗೆ ಸ್ವತಃ ತಾವೇ ಕೊಳ್ಳಿಯಿಟ್ಟಿದ್ದಾರೆ.
ಈ ಪೊಲೀಸ್ ಅಧಿಕಾರಿಗೆ ಸಲಾಂ ಹೇಳಲೇಬೇಕು…ಕರೊನಾ ಸಂಕಷ್ಟದಲ್ಲಿ ಜನರ ಸಹಾಯಕ್ಕೆ ನಿಂತಿರುವ ದೆಹಲಿಯ ಎಎಸ್​ಐ ರಾಕೇಶ್​ ಏಪ್ರಿಲ್​ 13ರಿಂದ ಈವರೆಗೆ 1,100ಕ್ಕೂ ಅಧಿಕ ಸೋಂಕಿತರ ಅಂತ್ಯಸಂಸ್ಕಾರ ಮಾಡಿಸಿದ್ದಾರೆ. 50ಕ್ಕೂ ಹೆಚ್ಚು ಚಿತೆಗಳಿಗೆ ತಾವೇ ಕೊಳ್ಳಿ ಇಟ್ಟಿದ್ದಾರೆ.pic.twitter.com/zNv74zJ6dX
ಇದೇ ಸಮಯದಲ್ಲಿ ಅವರ ಮಗಳ ಮದುವೆಯನ್ನೂ ನಿಶ್ಚಯಿಸಲಾಗಿತ್ತು. ಆದರೆ ಕೆಲಸದ ಒತ್ತಡ ಮತ್ತು ಜನರ ಸಂಕಷ್ಟವನ್ನು ಅರಿತಿದ್ದ ರಾಕೇಶ್​ ಮದುವೆಯನ್ನು ಮುಂದೂಡಿದ್ದಾರೆ. ಈ ಸಂಕಷ್ಟ ತೀರಿದ ಮೇಲೆ ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ.ರಾಕೇಶ್​, ಆ್ಯಂಬುಲೆನ್ಸ್​ನಿಂದ ಸೋಂಕಿತರ ಶವ ತಂದು ಅಂತ್ಯ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸ್​ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ದೆಹಲಿ ಪೊಲೀಸ್​ ಕಮಿಷನರ್​ ಎಸ್​ಎನ್​ ಶ್ರೀವಾಸ್ತವ್​ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಕೇಶ್​ರನ್ನು ಪ್ರಶಂಶಿಸಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
