ನವದೆಹಲಿ:ಎರಡು ಡೋಸ್ ಲಸಿಕೆ ಪಡೆದರೂ ಕರೊನಾ ಬರುವುದಿಲ್ಲ ಎಂಬುದು ಖಚಿತವಿಲ್ಲ. ಆದರೆ ಎರಡೂ ಡೋಸ್ ಪಡೆದ ಬಳಿಕವೂ ಕರೊನಾ ಬಂದರೆ ಅಂಥ ಅಪಾಯವಿಲ್ಲ ಎಂಬುದಾಗಿ ಸರ್ಕಾರ ಇದಾಗಲೇ ಸ್ಪಷ್ಟಪಡಿಸಿದ್ದು, ಎಲ್ಲರಿಗೂ ಗೊತ್ತಿರುವಂಥದ್ದೇ. ಈ ಮಧ್ಯೆ ಎರಡು ಡೋಸ್ ಲಸಿಕೆ ಪಡೆದ ಮೇಲೂ ಕರೊನಾ ಬಂದವರೆಷ್ಟು ಎಂಬ ಮಾಹಿತಿ ಈಗ ಹೊರಬಿದ್ದಿದೆ.
ದೇಶದಲ್ಲಿ ಈ ವರೆಗೆ ಎರಡೂ ಡೋಸ್​ ಲಸಿಕೆ ಪಡೆದಿದ್ದರೂ 87 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಶೇ. 46ರಷ್ಟು ಪ್ರಕರಣ ಕೇರಳವೊಂದರಲ್ಲೇ ಕಂಡು ಬಂದಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯವೇ ತಿಳಿಸಿದೆ. ಕೇರಳದಲ್ಲಿ ಮೊದಲ ಡೋಸ್ ಪಡೆದ ಸುಮಾರು 80 ಸಾವಿರ ಮಂದಿಯಲ್ಲಿ ಹಾಗೂ ಎರಡೂ ಡೋಸ್ ಪಡೆದ ಸುಮಾರು 40 ಸಾವಿರ ಜನರಲ್ಲಿ ಕೋವಿಡ್-19 ದೃಢಪಟ್ಟಿದೆ.
ಇದನ್ನೂ ಓದಿ:ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?
ಇನ್ನು ನೂರಕ್ಕೆ ನೂರರಷ್ಟು ಲಸಿಕೀಕರಣ ಆಗಿರುವ ವಯನಾಡ್​ನಲ್ಲೂ ಕೋವಿಡ್​ ಸೋಂಕು ಕಾಣಿಸಿಕೊಂಡಿದೆ. ಕೇರಳದಲ್ಲಿ ಇಂದು 21,247 ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, 179 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ಕರ್ನಾಟಕ ಹಾಗೂ ತಮಿಳುನಾಡಿನ ಮೇಲೆ ಕೇಂದ್ರ ವಿಶೇಷ ನಿಗಾ ವಹಿಸಿದೆ. (ಏಜೆನ್ಸೀಸ್)
ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!

ಕಳೆದು ಹೋದ ಮೊಬೈಲ್​ಫೋನ್​ಗಾಗಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ; ಫೋನ್​ ಕಳ್ಕೊಂಡವನೊಬ್ಬ, ಪ್ರಾಣ ಕಳ್ಕೊಂಡಿದ್ದು ಮತ್ತೊಬ್ಬ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
