ವಾಷಿಂಗ್ಟನ್:ಕೋವಿಡ್-19 ವ್ಯಾಧಿ ಇನ್ನು ಕೆಲವೇ ವರ್ಷಗಳಲ್ಲಿ ಬಾಲ್ಯದಲ್ಲಿ ಕಾಡುವ ಒಂದು ಸಾಮಾನ್ಯ ರೋಗವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ಕರೊನಾ ಲಸಿಕೆ ಪಡೆಯದ ಅಥವಾ ವೈರಸ್​ಗೆ ಒಳಗಾಗದ ಬಹುತೇಕ ಎಳೆ ವಯಸ್ಸಿನ ಮಕ್ಕಳಲ್ಲಿ ಇದು ಇತರ ಸಾಮಾನ್ಯ ನೆಗಡಿಯಂತೆ ಪರಿಣಾಮ ಬೀರುವ ಸಂಭವವಿದೆ ಎಂದು ‘ಸೈನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿದೆ. ಅಮೆರಿಕ ಮತ್ತು ನಾರ್ವೆಯ ತಜ್ಞರ ತಂಡವೊಂದು ಈ ಅಧ್ಯಯನ ನಡೆಸಿದೆ.
ಸಾಮಾನ್ಯವಾಗಿ ಮಕ್ಕಳಲ್ಲಿ ಕೋವಿಡ್​ನ ತೀವ್ರತೆ ಕಡಿಮೆಯಿರುತ್ತದೆ. ಸಾರ್ಸ್ ಸಿಒವಿ2 ವೈರಸ್ ಸೋಂಕಿನ ತೀವ್ರತೆ ವಯಸ್ಸಾದವರಲ್ಲಿ ಹೆಚ್ಚು ಮತ್ತು ಸಾವಿನ ಪ್ರಮಾಣ ಏರುವುದು ಸ್ಪಷ್ಟವಾಗಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ನಾರ್ವೆಯ ಓಸ್ಲೊ ವಿಶ್ವವಿದ್ಯಾಲಯದ ಒಟ್ಟರ್ ಜಾರ್ನ್​ಸ್ಟಡ್ ಹೇಳಿದ್ದಾರೆ. ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಕುಂದಿದಲ್ಲಿ ರೋಗದ ಅಪಾಯ ಹೆಚ್ಚಿನ ಪ್ರಮಾಣದಲ್ಲೇ ಇರುತ್ತದೆ. ಆದಾಗ್ಯೂ, ವಯಸ್ಕರು ಲಸಿಕೆ ಪಡೆಯದಿರುವುದರಿಂದ ಅಥವಾ ವೈರಸ್​ಗೆ ತುತ್ತಾಗುವುದರಿಂದ (ಎಕ್ಸ್​ಪೋಸ್) ಎಳೆಯ ಮಕ್ಕಳಿಗೆ ಸೋಂಕು ವರ್ಗಾವಣೆಗೊಳ್ಳುವ ಸಾಧ್ಯತೆಯಿದೆ. ಇತರ ಕರೊನಾ ವೈರಸ್ ಮತ್ತು ಇನ್​ಫ್ಲುಯೆಂಜಾ ವೈರಸ್​ಗಳಲ್ಲಿ ಕೂಡ ಈ ರೀತಿಯ ವರ್ಗಾವಣೆ ದಾಖಲಾಗಿದೆ. ಮೊದಲಿಗೆ ಸೋಂಕು ಆರಂಭಗೊಂಡು ನಂತರ ಸಾಂಕ್ರಾಮಿಕವಾಗಿದ್ದುದು ಅದರ ಲಕ್ಷಣವಾಗಿದೆ ಎನ್ನುವುದು ಅವರ ವಿವರಣೆ.
ಲಸಿಕೆ ನಿರಾಕರಿಸಿದ ಸಿಬ್ಬಂದಿ ವಜಾ:ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿದ ಓರ್ವ ಸಿಬ್ಬಂದಿಯನ್ನು ವಾಯು ಪಡೆ ಸೇವೆಯಿಂದ ವಜಾ ಮಾಡಿದೆ ಎಂದು ಗುಜರಾತ್ ಹೈಕೋರ್ಟ್​ಗೆ ಕೇಂದ್ರ ಸರ್ಕಾರ ತಿಳಿಸಿದೆ. ಲಸಿಕೆ ಪಡೆಯುವುದನ್ನು ವಾಯು ಪಡೆಯ ಸೇವಾ ನಿಯಮದಲ್ಲಿ ಕಡ್ಡಾಯಗೊಳಿಸಲಾಗಿದೆ. ಆದರೆ, 9 ಸಿಬ್ಬಂದಿ ಲಸಿಕೆ ಪಡೆಯಲು ನಿರಾಕರಿಸಿದ್ದು ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ಕೋರ್ಟ್​ಗೆ ತಿಳಿಸಿದರು.
58% ಜನರಿಗೆ 3ನೇ ಅಲೆ ಎದುರಿಸುವ ಅಮಿತ ವಿಶ್ವಾಸ:ಕರೊನಾ ಮಹಾಮಾರಿಯ 3ನೇ ಅಲೆಯನ್ನು ಎದುರಿಸುವಲ್ಲಿ ಭಾರತದ ಸನ್ನದ್ಧತೆ ವಿಚಾರದಲ್ಲಿ ಶೇಕಡ 58ರಷ್ಟು ನಾಗರಿಕರು ಬಹಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ನಡೆಸಿದ ಲೋಕಲ್​ಸರ್ಕಲ್ಸ್ ಗುರುವಾರ ಹೇಳಿದೆ. 2021ರ ಆಗಸ್ಟ್- ಡಿಸೆಂಬರ್​ನಲ್ಲಿ ಅಪ್ಪಳಿಸುವ ಸಾಧ್ಯತೆಯಿರುವ 3ನೇ ಅಲೆಯನ್ನು ನಿರ್ವಹಿಸಲು ಭಾರತ ಎಷ್ಟರ ಮಟ್ಟಿಗೆ ಸನ್ನದ್ಧವಾಗಿದೆ ಎಂಬ ಪ್ರಶ್ನೆ ಮುಂದಿಟ್ಟು ದೇಶದಾದ್ಯಂತ ಸಮೀಕ್ಷೆ ನಡೆಸಲಾಗಿತ್ತು. 8,800 ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು 58ರಷ್ಟು ಜನರು ಸರ್ಕಾರದ ಸಿದ್ಧತೆಗೆ ತೃಪ್ತಿ ಸೂಚಿಸಿದ್ದಾರೆ.
41 ಸಾವಿರ ಪ್ರಕರಣ:ಗುರುವಾರ ಬೆಳಿಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 41,195 ಹೊಸ ಕೇಸ್​ಗಳು ದೃಢಪಟ್ಟಿವೆ. 490 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿತರ ಒಟ್ಟು ಸಂಖ್ಯೆ 3,20,,77,706ಕ್ಕೆ ಏರಿದೆ. 4,29,669 ಮಂದಿ ಬಲಿಯಾಗಿದ್ದಾರೆ. 3,87,987 ಸಕ್ರಿಯ ಪ್ರಕರಣಗಳಿವೆ.
ಕೋವಿಡ್ ಲಸಿಕೆಯು ಸಾರ್ಸ್​ಸಿಒವಿ2 ವೈರಸ್​ಗೆ ಎಕ್ಸ್​ಪೋಸ್ ಆಗುವುದಕ್ಕಿಂತ ಅಧಿಕ ರಕ್ಷಣೆ ಒದಗಿಸುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು
|ಒಟ್ಟರ್ ಜಾರ್ನ್​ಸ್ಟಡ್ನಾರ್ವೆಯ ಓಸ್ಲೊ ವಿಶ್ವವಿದ್ಯಾಲಯದ ಸಂಶೋಧಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 17 =
Remember me
