ನವದೆಹಲಿ:ಅಮ್ಮ ಕೋವಿಡ್ ಪಾಸಿಟಿವ್ ಆಗಿದ್ದು ಹುಟ್ಟಿದ ಮಗುವಿಗೆ ನೆಗೆಟಿವ್ ಆಗಿದ್ದರೆ ಅಥವಾ ಪಾಸಿಟಿವ್ ಆಗಿದ್ದರೂ ಅಷ್ಟೇನೂ ವಿಶೇಷ ಎನಿಸದೆ ಇರಬಹುದು. ಆದರೆ ಇಲ್ಲೊಬ್ಬರು ತಾಯಿ ಕೋವಿಡ್ -19 ನೆಗೆಟಿವ್ ಆಗಿದ್ದರೂ ಆಕೆಯ ನವಜಾತ ಶಿಶುವಿನಲ್ಲಿ ಸೋಂಕು ಕಂಡುಬರುವ ಮೂಲಕ ಅಚ್ಚರಿ ಉಂಟಾಗಿದೆ.
ತಾಯಿ ನೆಗೆಟಿವ್ ಆಗಿದ್ದರೂ ಆಗಷ್ಟೇ ಹುಟ್ಟಿರುವ ಮಗು ಕರೊನಾ ಪಾಸಿಟಿವ್ ಆಗಿರುವುದು ಆ ಆಸ್ಪತ್ರೆಯ ವೈದ್ಯರನ್ನೇ ಅಚ್ಚರಿಗೀಡು ಮಾಡಿದೆ. ಅಂದಹಾಗೆ ಈ ಹೆರಿಗೆ ಬನಾರಸ್​ನ ಹಿಂದು ವಿಶ್ವವಿದ್ಯಾಲಯದ ಎಸ್​ಎಸ್​ಎಲ್ ಆಸ್ಪತ್ರೆಯಲ್ಲಿ ಮೇ 25ರಂದು ನಡೆದಿದೆ.
26 ವರ್ಷದ ಮಹಿಳೆಯೊಬ್ಬರು ಹೆರಿಗೆಗಾಗಿ ಈ ಆಸ್ಪತ್ರೆಗೆ ಮೇ 24ರಂದು ಈ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಗೂ ಮುನ್ನ ಇವರನ್ನು ಕರೊನಾ ಟೆಸ್ಟ್​ಗೆ ಒಳಪಡಿಸಿದ್ದು, ಅದು ನೆಗೆಟಿವ್ ಎಂದು ವರದಿ ಬಂದಿತ್ತು. ಆದರೆ ಮೇ 25ರಂದು ಹುಟ್ಟಿದ ಮಗುವನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಿದ್ದಾಗ ಕೋವಿಡ್ ಪಾಸಿಟಿವ್ ಎಂಬ ವರದಿ ಬಂದಿದೆ.
ಇದನ್ನೂ ಓದಿ:ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!
ತಾಯಿ ನೆಗೆಟಿವ್, ಮಗು ಪಾಸಿಟಿವ್ ಆಗಿದ್ದರೂ ಸದ್ಯ ಇಬ್ಬರೂ ಆರೋಗ್ಯವಾಗಿದ್ದಾರೆ. ಇದೊಂದು ಅತಿವಿರಳ ಪ್ರಕರಣ. ಈ ಬಗ್ಗೆ ನಾವು ತಕ್ಷಣಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ತಾಯಿ-ಮಗು ಇಬ್ಬರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಆ ಬಳಿಕ ಮತ್ತೆ ವರದಿ ಪರಿಶೀಲಿಸಿ ಮುಂದಿನ ನಿರ್ಧಾರ ತಳೆಯಲಾಗುವುದು ಎಂದು ಎಸ್​ಎಸ್​ಎಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಕೆ.ಕೆ. ಗುಪ್ತ ತಿಳಿಸಿದ್ದಾರೆ.
ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..

ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eleven =
Remember me
