ಆಂಧ್ರಪ್ರದೇಶ:ಕೋವಿಡ್ ವಾರ್ಡ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್​ ಮೇಲೆ ಸೋಂಕಿತೆಯ ಮಗನೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪ್ರಕಾಶಂ ಜಿಲ್ಲೆಯ ಓಂಗಲೆ ಆರ್​ಐಎಂಎಸ್​​ ಆಸ್ಪತ್ರೆಯಲ್ಲಿ ನಡೆದಿದೆ.ಘಟನೆ ನಡೆದ ಮರುದಿನವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆಗಸ್ಟ್ 01 ರಂದು ಕೋವಿಡ್ ವಾರ್ಡ್​ನಲ್ಲಿ ತನ್ನ ದಿನ ನಿತ್ಯದ ಪಾಳಿ ಮುಗಿಸಿ ರಾತ್ರಿ 08 ಗಂಟೆ ವೇಳೆ ನರ್ಸ್​ ಮನೆಗೆ ತೆರಳಲು ಸಿದ್ದರಾಗಿದ್ದರು. ಈ ವೇಳೆ ಆರೋಪಿ ನರ್ಸ್ ಬಳಿ ತೆರಳಿ, ನೀನು ನನ್ನ ತಾಯಿಗೆ ಸರಿಯಾಗಿ ಮಾಸ್ಕ್ ಹಾಕಿಲ್ಲ ಎಂದು ವಾಗ್ವಾದ ನಡೆಸಿದ್ದಾನೆ.
ಇದನ್ನೂ ಓದಿ:ಒಲಿಂಪಿಕ್ಸ್​ನಲ್ಲಿ ಭಾರತದ ಐತಿಹಾಸಿಕ ಸಾಧನೆ: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರ
ನಂತರ ವಾಗ್ವಾದ ಜೋರಾಗಿದ್ದು, ಆರೋಪಿ ನರ್ಸ್​ ದೇಹದ ಖಾಸಗಿ ಭಾಗಕ್ಕೆ ಹೊಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕುಪಿತಗೊಂಡ ನರ್ಸ್​ ಆರೋಪಿ ಕೆನ್ನೆಗೆ ಬಾರಿಸಿದ್ದಾರೆ. ನಂತರ ಜಗಳ ಜೋರಾಗಿದ್ದು, ಅಕ್ಕ-ಪಕ್ಕದ ವಾರ್ಡ್​ನವರು ಬಂದು ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನರ್ಸ್​ ನೀಡಿರುವ ದೂರಿನ ಪ್ರಕಾರ, ಆರೋಪಿ ಮೇಲೆ ಐಪಿಸಿ ಸೆಕ್ಷನ್ 354ರ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)
ದುಬೈನಿಂದ ಬಂದವನ ಬ್ಯಾಗ್ ಕಳ್ಳತನ… ಆರೋಪಿಗಳ ಬಂಧನದಿಂದ ಹೊರಬಿತ್ತು ಮತ್ತಷ್ಟು ಪ್ರಕರಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
