ನವದೆಹಲಿ:ಜಗತ್ತಿನಾದ್ಯಂತ ಕರೊನಾ ನಾಲ್ಕನೆಯ ಅಲೆಯ ಭೀತಿ ಆವರಿಸಿರುವ ನಡುವೆಯೇ ಅಧ್ಯಯನವೊಂದರ ಆತಂಕಕಾರಿ ಅಂಶವೊಂದು ಹೊರಬಿದ್ದಿದೆ. ಅದರಲ್ಲೂ ಈ ಒಂದು ವರ್ಗದವರು ಕರೊನಾ ಸೋಂಕಿಗೆ ಒಳಗಾದರೆ ಸಾವಿಗೀಡಾಗುವ ಸಾಧ್ಯತೆ ದುಪ್ಪಟ್ಟು ಎಂದು ಈ ಅಧ್ಯಯನ ತಿಳಿಸಿದೆ.
ಮಾಲಿಕ್ಯುಲರ್ ಸೈಕಾಲಜಿ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಈ ಅಂಶವನ್ನು ಹೊರಗೆಡಹಿದೆ. ಮಾನಸಿಕ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾದ 18 ವರ್ಷಕ್ಕೂ ಮೇಲ್ಪಟ್ಟ 1,25,273 ಮಂದಿಯ ವೈದ್ಯಕೀಯ ದಾಖಲೆಗಳ ಅಧ್ಯಯನದಿಂದ ಈ ವಿಷಯ ಬಹಿರಂಗಗೊಂಡಿದೆ.
ಈ ಅಧ್ಯಯನದ ಮುಖ್ಯಸ್ಥ, ಇಸ್ರೇಲ್​ನ ಶೇಬಾ ಮೆಡಿಕಲ್ ಸೆಂಟರ್​​ನ ಸೈಕಿಯಾಟ್ರಿಕ್ ಡಿವಿಷನ್​ನ ನಿರ್ದೇಶಕ ಪ್ರೊ. ಮಾರ್ಕ್​ ವೀಸರ್​ ಹೇಳುವ ಪ್ರಕಾರ, ಮಾನಸಿಕ ಸಮಸ್ಯೆಯ ಇತಿಹಾಸ ಇರುವ ರೋಗಿಗಳು ಕೋವಿಡ್​ ಸೋಂಕಿಗೆ ಒಳಗಾದಾಗ ವೈದ್ಯರು ಅತಿ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ. ಮಾನಸಿಕ ಸಮಸ್ಯೆ ಉಳ್ಳ ಕೋವಿಡ್ ಸೋಂಕಿತರ ಮಾಹಿತಿ ತಮ್ಮ ದೇಶದಲ್ಲಿ ಮಾತ್ರ ಸಂಗ್ರಹಿಸಿದ್ದು, ಅದರ ಅಧ್ಯಯನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಮಾನಸಿಕ ಸಮಸ್ಯೆಗಳಿಗಾಗಿ ದೀರ್ಘ ಕಾಲದಿಂದ ಚಿಕಿತ್ಸೆ ಪಡೆದವರು ಕರೊನಾ ಸೋಂಕಿತರಾದರೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುವ ಸಾಧ್ಯತೆ ಅಧಿಕ. ಇಂಥವರು ಸೋಂಕಿತರಾದರೆ ಆಸ್ಪತ್ರೆಗೆ ದಾಖಲಿಸಬೇಕಾದ ಸಾಧ್ಯತೆ ದುಪ್ಪಟ್ಟು ಹಾಗೂ ಸಾಯುವ ಸಾಧ್ಯತೆಯೂ ದುಪ್ಪಟ್ಟು. ಹೀಗಾಗಿ ಆಡಳಿತ ವ್ಯವಸ್ಥೆ ಇಂಥವರು ಸೋಂಕಿಗೆ ಒಳಗಾಗದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಪ್ರೊ. ಮಾರ್ಕ್ ವೀಸರ್ ತಿಳಿಸಿದ್ದಾರೆ.
ಪೆಟ್ರೋಲ್ ಟ್ಯಾಂಕ್​ ಮೇಲೆ ಪ್ರೇಯಸಿ, ಬೈಕ್ ಚಲಾಯಿಸುತ್ತಲೇ ರೊಮ್ಯಾನ್ಸ್​: ಪ್ರೇಮಿ ಮೇಲೆ 3 ಕೇಸ್​…
ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nine =
Remember me
