ಭೋಪಾಲ (ಮಧ್ಯಪ್ರದೇಶ):ಕರೊನಾ ವೈರಸ್​ ತನ್ನ ರೌದ್ರಾವತಾರನ್ನು ತೋರುತ್ತಲೇ ಸಾಗಿದೆ. ಬಹುತೇಕ ಮಂದಿಯ ದೇಹದೊಳಕ್ಕೆ ಈ ಸೋಂಕು ಹೊಕ್ಕು ಗಂಟೆಗಳಲ್ಲಿಯೇ ತನ್ನ ಇರುವಿಕೆಯನ್ನು ತೋರಿಸಿದರೆ, ಇನ್ನು ಕೆಲವರಿಗೆ ಯಾವುದೇ ಲಕ್ಷಣಗಳೇ ಗೋಚರಿಸದೇ ದೇಹದೊಳಕ್ಕೆ ಅಡಗಿ ಕುಳಿತುಕೊಳ್ಳುತ್ತಿದೆ ಈ ಮಹಾಮಾರಿ.
ಆರೋಗ್ಯದಿಂದ ಇರುವ ವ್ಯಕ್ತಿ ಯಾವುದಾದರೂ ಕಾರಣಕ್ಕೆ ಪರೀಕ್ಷೆ ಮಾಡಿಸಿಕೊಂಡ ಸಂದರ್ಭದಲ್ಲಿ ಆತನಲ್ಲಿಯೂ ಸೋಂಕು ಇರುವುದು ಪತ್ತೆಯಾಗಿರುವ ಸಾಕಷ್ಟು ಉದಾಹರಣೆಗಳು ಇದಾಗಲೇ ವರದಿಯಾಗಿವೆ.
ಮಧ್ಯಪ್ರದೇಶದ ಬಾಲ್​ಘಾಟ್​ ಜಿಲ್ಲೆಯ ಹರಿಭಾಟಾ ಎಂಬ ಗ್ರಾಮದ ಜನರಲ್ಲಿ ಈಗ ಇಂಥದ್ದೊಂದು ಆತಂಕ ಎದುರಾಗಿದೆ. ಇಲ್ಲಿ ಇಡೀ ಊರಿಗೆ ಊರೇ ಕರೊನಾ ಪಾಸಿಟಿವ್​ ವ್ಯಕ್ತಿಗಳೇ ತುಂಬಿದ್ದಾರೆ. ಒಬ್ಬರೆ ಒಬ್ಬರೂ ಸೋಂಕು ಇಲ್ಲದ ವ್ಯಕ್ತಿಗಳು ಇಲ್ಲಿ ಕಾಣಸಿಗುತ್ತಿಲ್ಲ. ಇವರ ಪೈಕಿ ಅನೇಕ ಮಂದಿಗೆ ಸೋಂಕಿನ ಲಕ್ಷಣಗಳೇ ಇಲ್ಲ ಎನ್ನುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:‘ಈ ಸ್ಯಾನಿಟೈಸರ್​ ಹಚ್ಚಿ, ಕರೊನಾ ತೊಲಗಿಸಿ’ ಎಂದ ಕಂಪನಿಗೆ ಹೈಕೋರ್ಟ್​ನಿಂದ ಒಂದು ಲಕ್ಷ ರೂ. ದಂಡ
ಹರಿಭಾಟಾ ಗ್ರಾಮದಲ್ಲಿ 200ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಇವರ ಜತೆ 70ಕ್ಕೂ ಅಧಿಕ ವಲಸೆ ಕಾರ್ಮಿಕರು ಇಲ್ಲಿ ನೆಲೆಸಿದ್ದಾರೆ. ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿದ್ದ ಜನರು ಲಾಕ್​ಡೌನ್​ ಹಿನ್ನೆಲೆಯಲ್ಲಿ ತಮ್ಮೂರಿಗೆ ವಾಪಸಾಗಿದ್ದಾರೆ. ಇವರೆಲ್ಲರೂ ಬುಡಕಟ್ಟು ಜನಾಂಗಕ್ಕೆ ಸೇರಿರುವ ವ್ಯಕ್ತಿಗಳು.
ಮೊದಲು ಕೆಲವು ವ್ಯಕ್ತಿಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷೆ ಮಾಡಿದಾಗ ಎಲ್ಲರಲ್ಲಿಯೂ ಕರೊನಾ ವೈರಸ್​ ಪತ್ತೆಯಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಹಲವರಲ್ಲಿ ಜ್ವರ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮದ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ ವೈದ್ಯರೇ ಬೆಚ್ಚಿಬಿದ್ದರು, ಏಕೆಂದರೆ ಚಿಕ್ಕ ಮಗುವಿನಿಂದ ಹಿಡಿದು ವೃದ್ಧರವರೆಗೂ ಎಲ್ಲರಲ್ಲಿಯೂ ಸೋಂಕು ಪತ್ತೆಯಾಗಿದೆ. ಆದರೆ ಬಹುತೇಕ ಮಂದಿಯಲ್ಲಿ ಯಾವುದೇ ಲಕ್ಷಣಗಳೇ ಇರದೇ ಆರೋಗ್ಯದಿಂದ ಇರುವಂತೆ ತೋರುತ್ತಿದೆ.
ಇದನ್ನೂ ಓದಿ:ಕರೊನಾ ಹಿನ್ನೆಲೆ: ಚಟ್ಟ ಕಟ್ಟಲೂ ಬಂತು ಆನ್​ಲೈನ್​ ಸೇವೆ, ಕುಳಿತಲ್ಲೇ ಎಲ್ಲ ಲಭ್ಯ
ಇವರೆಲ್ಲರೂ ಸಾಮುದಾಯಿಕ ಬದುಕಿಗೆ ಹೊಂದಿಕೊಂಡಿರುವ ಕಾರಣ ಸಾಮಾಜಿಕ ಅಂತರದ ತಿಳಿವಳಿಕೆ ಹೇಳಿಕೊಡುವುದು ಕಷ್ಟ. ಇದೇ ಕಾರಣಕ್ಕೆ ಇಡೀ ಗ್ರಾಮವೇ ಸೋಂಕಿಗೆ ಒಳಗಾಗಿದೆ ಎನ್ನುತ್ತಿದೆ ಜಿಲ್ಲಾಡಳಿತ. ಸದ್ಯ ಇಡೀ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಇದಾಗಲೇ 8,283 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 358 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಒಬ್ಬ ರೋಗಿ ಕೂಡ ಗುಣಮುಖರಾಗಿ ಬಂದಿಲ್ಲ.(ಏಜೆನ್ಸೀಸ್​)
ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 18 =
Remember me
