ನವದೆಹಲಿ:ಜೆಎನ್​.1 ರೂಪಾಂತರ ಕರೊನಾ ಪ್ರಕರಣಗಳ ಏರಿಕೆಯೊಂದಿಗೆ ಭಾರತದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರ (ಡಿಸೆಂಬರ್ 22) ಹೆಚ್ಚಳ ಕಂಡಿದೆ. ಶುಕ್ರವಾರ ದೇಶದಲ್ಲಿ 640 ತಾಜಾ ಕೋವಿಡ್​ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆಯು ಹಿಂದಿನ ದಿನದಲ್ಲಿದ್ದ 2,669 ರಿಂದ 2,997 ಕ್ಕೆ ಹೆಚ್ಚಳ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಿಂದ ಮತ್ತೊಂದು ಸಾವು ಕೂಡ ವರದಿಯಾಗಿದೆ. ಡಿಸೆಂಬರ್ 21 ರವರೆಗೆ ಭಾರತದಲ್ಲಿ ಒಟ್ಟು ಜೆಎನ್​.1 ರೂಪಾಂತರದ 22 ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳು 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದನ್ನು ತೋರಿಸಿವೆ.
ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಸೇರಿವೆ.
ಒಡಿಶಾ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಬಾರಿ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ.
ಏತನ್ಮಧ್ಯೆ, ಚಂಡೀಗಢ ಆಡಳಿತವು ಕೋವಿಡ್-19 ರ JN.1 ರೂಪಾಂತರ ಹರಡುವಿಕೆಗೆ ಸಂಬಂಧಿಸಿದಂತೆ ಸಲಹಾ ಮಾರ್ಗದರ್ಶಿಗಳನ್ನು ಹೊರಡಿಸಿದೆ. ಇದರ ಅನುಸಾರ, ಆಸ್ಪತ್ರೆಗಳಲ್ಲಿ ಅಟೆಂಡರ್‌ಗಳು, ವೈದ್ಯರು ಮತ್ತು ಇತರ ಆಸ್ಪತ್ರೆಯ ಸಿಬ್ಬಂದಿಯು ಮಾಸ್ಕ್ ಧರಿಸುವುದು ಈಗ ಕಡ್ಡಾಯವಾಗಿದೆ.

ಬಿಎಸ್​ಇ ಸೂಚ್ಯಂಕ ಶೇ. 0.34 ಏರಿಕೆ: ಯಾವ ಷೇರುಗಳಿಗಿದೆ ಬೇಡಿಕೆ? 3 ದಿನ ವಹಿವಾಟು ಇಲ್ಲವೇಕೆ?

2023ರಲ್ಲಿ ಈ ವರ್ಗದ ಮ್ಯೂಚುವಲ್ ಫಂಡ್​ಗಳಲ್ಲಿ ದೊರೆತ ಸರಾಸರಿ ಗಳಿಕೆ ಶೇಕಡಾ 32.23; ಮುಂದಿನ ವರ್ಷವೂ ಇದೇ ರೀತಿ ಲಾಭ ಸಿಗುವುದೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
