ನವದೆಹಲಿ:ಗುಜರಾತ್​ನಲ್ಲಿ ಕೊವಿಡ್​-19 ತೀವ್ರತೆ ಹೆಚ್ಚಾಗಿದೆ. ಕರೊನಾ ಪ್ರಸರಣದಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್​ ನಾಲ್ಕನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ತಮಿಳುನಾಡು, ಮೂರನೇ ಸ್ಥಾನದಲ್ಲಿ ದೆಹಲಿ ಇವೆ.
ಗುಜರಾತ್​ನಲ್ಲಿ 15000ಕ್ಕೂ ಅಧಿಕ ಸೋಂಕಿತರು ಇದ್ದು, ಇದುವರೆಗೆ 960 ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಲಾಕ್​ಡೌನ್​ ಸಡಿಲಿಕೆ ಮಾಡಿದ್ದೇ ಗುಜರಾತ್​ನಲ್ಲಿ ಕರೊನಾ ಪ್ರಮಾಣ ಹೆಚ್ಚಲು ಮುಖ್ಯ ಕಾರಣ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಆದರೆ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗುಜರಾತ್​ನಲ್ಲಿ ಲಾಕ್​ಡೌನ್ ಸಡಿಲಿಕೆಯಿಂದ ಕೊವಿಡ್​ ಹರಡುತ್ತಿಲ್ಲ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಆಯೋಜಿಸಲಾಗಿದ್ದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡವರು ಯಾವಾಗ ಗುಜರಾತ್​ನ್ನು ಪ್ರವೇಶಿಸಿದರೋ ಅಂದಿನಿಂದಲೂ ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಸರಣದ ಪ್ರಮಾಣ ಅಧಿಕವಾಗಿದೆ. ಕಾಡ್ಗಿಚ್ಚಿನಂತೆ ಪಸರಿಸುತ್ತಲೇ ಇದೆ ಎಂದು ಹೇಳಿದ್ದಾರೆ.
ಕೊವಿಡ್​-19 ಗುಜರಾತ್​​​ಗೆ ಕಾಲಿಟ್ಟದಿನಂದಿದಲೂ ಜನರ ಹಿತವನ್ನು ಕಾಪಾಡುವುದೇ ನಮ್ಮ ಪ್ರಧಾನ ಆದ್ಯತೆಯಾಗಿದೆ. ಯಾವುದೇ ಜಾತಿ, ಸಮುದಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಎಲ್ಲರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದೇವೆ. ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡವರು ಗುಜರಾತ್​ಗೆ ಕಾಲಿಡುವವರೆಗೂ ನಮ್ಮ ರಾಜ್ಯದಲ್ಲಿ ಕೊವಡ್​-19 ಅಷ್ಟೊಂದು ತೀವ್ರವಾಗಿ ಇರಲಿಲ್ಲ ಎಂಬುದನ್ನು ನಾನು ಮತ್ತೊಮ್ಮೆ ಒತ್ತಿ ಹೇಳುತ್ತೇನೆ ಎಂದು ರೂಪಾನಿ ಹೇಳಿದ್ದಾರೆ.
ಇದನ್ನೂ ಓದಿ:‘ಕರೊನಾ ಬಗ್ಗೆ ತಿಳಿವಳಿಕೆ ಹೇಳಿದ್ದಕ್ಕೆ ಹೊಡೆದರು, ನಿಂದಿಸಿದರು’: ಆಶಾ ಕಾರ್ಯಕರ್ತೆಯ ಅಳಲು
ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡವರಿಂದಲೇ ಕೊವಿಡ್​-19 ಪ್ರಮಾಣವೂ ಹೆಚ್ಚಾಗಿದೆ. ಅಂಕಿಅಂಶಗಳು ಸಹ ಇದನ್ನೇ ಹೇಳುತ್ತಿವೆ. ಸೋಂಕಿತರ ಟ್ರಾವೆಲ್​ ಹಿಸ್ಟರಿ ನೋಡಿದರೆ, ಅವರಲ್ಲಿ ಬಹುತೇಕರು ದೆಹಲಿ ಸಮಾವೇಶದಲ್ಲಿ ಪಾಲ್ಗೊಂಡವರು, ಇಲ್ಲವೇ ಅವರ ಸಂಪರ್ಕಕ್ಕೆ ಹೋದವರು ಎಂದು ತಿಳಿಸಿದ್ದಾರೆ.
ಅದರಲ್ಲೂ ಜಮಾತ್​ ಸಮಾವೇಶದಲ್ಲಿ ಪಾಲ್ಗೊಂಡ ಅನೇಕರು ತಮ್ಮ ಟ್ರಾವೆಲ್​ ಹಿಸ್ಟರಿಯನ್ನು ಹೇಳದೆ ಅಸಹಕಾರ ತೋರಿದರು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ರೂಪಾನಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!
ಅಹ್ಮದಾಬಾದ್​ ಒಂದರಲ್ಲೇ 11,000ಕ್ಕೂ ಅಧಿಕ ಸೋಂಕಿತರು ಇದ್ದಾರೆ. 760 ಮಂದಿ ಮೃತಪಟ್ಟಿದ್ದಾರೆ. ಇದಕ್ಕೇನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಸಿಎಂ: ಅಹ್ಮದಾಬಾದ್​ನಲ್ಲಿ ತಬ್ಲಿಘಿ ಜಮಾತ್​ನಿಂದ ಬಂದವರೇ ಅನೇಕರು ಇದ್ದಾರೆ. ಹಾಗಾಗಿ ಅಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಎಂದು ಹೇಳಿದ್ದಾರೆ.ಅಲ್ಲದೆ, ಅಲ್ಪಸಂಖ್ಯಾತ ಸಮುದಾಯವನ್ನು ದೂಷಿಸಲು ನಾನಿದನ್ನು ಹೇಳುತ್ತಿಲ್ಲ. ಗುಜರಾತ್​ನಲ್ಲಿ ನೆಲೆಸಿರುವ ಎಲ್ಲರೂ ನಮ್ಮ ಸೋದರ, ಸೋದರಿಯರೇ. ಆದರೂ ತಬ್ಲಿಘಿಗಳ ಬೇಜವಾಬ್ದಾರಿಯಿಂದ ಸೋಂಕು ಹೆಚ್ಚಿದ್ದಂತೂ ಸುಳ್ಳಲ್ಲ ಎಂದು ವಿಜಯ್​ ರೂಪಾನಿ ತಿಳಿಸಿದ್ದಾರೆ. (ಏಜೆನ್ಸೀಸ್​)
ನರೇಂದ್ರ ಮೋದಿ ಒಬ್ಬ ಗ್ರೇಟ್ ಜೆಂಟಲ್‌ಮನ್ ಎಂದ ಟ್ರಂಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
