ನವದೆಹಲಿ:ಕೇರಳದಲ್ಲಿ ಕರೋನಾ ರೂಪಾಂತರಿ ಜೆಎನ್​.1 ಪತ್ತೆಯಾಗಿದ್ದು, ದೇಶದಾದ್ಯಂತ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕರ್ನಾಟಕದಲ್ಲಿ ಕಳವಳಕ್ಕೆ ಕಾರಣವಾಗಿದೆ. ಆದರೆ ಕ್ರಮ ತೆಗೆದುಕೊಳ್ಳಬೇಕಾದ ಸರ್ಕಾರ ನಿದ್ದೆ ಮಾಡುತ್ತಿದೆ.
ಇದನ್ನೂ ಓದಿ:ಗಂಭೀರ ಕಳವಳಕಾರಿ ವಿಷಯ’: ಸಂಸತ್ತಿನ ಭದ್ರತಾ ಲೋಪದ ಕುರಿತು ಸಂಸದರಿಗೆ ಪತ್ರ ಬರೆದ ಸ್ಪೀಕರ್​ಡಿ.8 ರಂದು ಕೇರಳದ 79 ವರ್ಷದ ಮಹಿಳೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ವೈರಸ್​ ಪತ್ತೆಯಾಗಿತ್ತು. ಮಹಿಳೆಯ ರಕ್ತದ ಮಾದರಿಯು ನ.18 ರಂದು ಪಡೆದಿದ್ದು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಮಹಿಳೆ ನೆಗಡಿ, ಜ್ವರ, ತಲೆನೋವಿನಂತಹ (ಐಎಲ್‌ಐ) ರೋಗಲಕ್ಷಣಗಳನ್ನು ಹೊಂದಿದ್ದರು. ಇದೀಗ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ರೂಪಾಂತರ ವೈರಸ್​ ಕಳೆದ ಸೆಪ್ಟೆಂಬರ್ ನಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲು ಪತ್ತೆಯಾಗಿತ್ತು. ಇದಾದ ಬಳಿಕ ಸಿಂಗಾಪುರದಲ್ಲಿ ಜೆಎನ್.1 ರೂಪಾಂತರಿ ವೈರಸ್ ಭಾರತೀಯ ಪ್ರಯಾಣಿಕನಲ್ಲಿ ಕಂಡುಬಂದಿತ್ತು. ಆ ವ್ಯಕ್ತಿ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯವನಾಗಿದ್ದು, ಅ.25 ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು.
ಭಾರತದಲ್ಲಿ ಯಾವುದೇ ರೀತಿಯ ಜೆಎನ್.1 ರೂಪಾಂತರದ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇಂದ್ರ ಮತ್ತು ರಾಜ್ಯದ ಆರೋಗ್ಯ ಇಲಾಖೆ ಹೇಳುತ್ತಿದ್ದರೂ ಅತಿಯಾದ ಶೀತ, ಕೆಮ್ಮು, ಜ್ವರದಿಂದ ಬೆಂಗಳೂರು ಮತ್ತು ಇತರೆ ಜಿಲ್ಲೆಗಳ ಜನರು ಬಳಲುತ್ತಿರುವುದು ರೂಪಾಂತರಿ ಜೆಎನ್​.1 ವೈರಸ್ ಕರ್ನಾಟಕದಲ್ಲಿ ವ್ಯಾಪಿಸಿದೆಯೇ ಎಂಬ ಅನುಮಾನ ಸಾರ್ವಜನಿಕರಿಂದ ಜೋರಾಗಿ ಕೇಳಿಬರುತ್ತಿದೆ.
ದೇಶಾದ್ಯಂತ ಹೆಚ್ಚಿದ ಪ್ರಕರಣಗಳು: ದೇಶದಾದ್ಯಂತ ಶುಕ್ರವಾರ ಮತ್ತು ಶನಿವಾರ 339 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,492 ಕ್ಕೆ ಏರಿದೆ. ಅಂತೆಯೇ ಕರೋನಾ ಸಾವಿನ ಸಂಖ್ಯೆ 5,33,311 (5.33 ಲಕ್ಷ) ಕ್ಕೆ ದಾಖಲಾಗಿದೆ. ದೇಶದಲ್ಲಿನ ಒಟ್ಟಾರೆ ಕರೋನಾ ಪ್ರಕರಣಗಳ ಸಂಖ್ಯೆ 4,50,04,481 (4.50 ಕೋಟಿ) ಆಗಿದೆ.
ಇನ್ನು ಕರೋನಾದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,69,678 (4.44 ಕೋಟಿ) ಆಗಿದ್ದು, ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 98.81 ಪ್ರತಿಶತದಷ್ಟಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ದೇಶದಲ್ಲಿ ಇದುವರೆಗೆ 220.67 ಕೋಟಿ ಕರೋನಾ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಪ್ರಸ್ತುತ ಭಾರತದಲ್ಲಿನ ಕರೋನಾ -19 ಪ್ರಕರಣಗಳಲ್ಲಿ ಶೇ.90 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೂಪಾಂತರಿ ತಳಿ ಪ್ರಾಣಾಂತಿಕವೇ?:ಹಿಂದಿನ ಉಪ-ತಳಿಗಳಿಗೆ ಹೋಲಿಸಿದರೆ ಜೆಎನ್​.1 ಹೋಲಿಕೆ ಹೊಂದಿದೆ. ಇದು ಸ್ಪೈಕ್ ಪ್ರೊಟೀನ್‌ನಲ್ಲಿ ಕಂಡುಬರುತ್ತವೆ, ಸೋಂಕು ಈ ಹಿಂದೆ ಇದ್ದಂತೆಯೇ ಅತಿಯಾದ ಶೀತ, ಕೆಮ್ಮು, ಜ್ವರ, ತಲೆನೋವು, ವಾಂತಿ ಬರುವುದು ಸೇರಿದಂತೆ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಪ್ರಸ್ತುತ ಲಭ್ಯವಿರುವ ಕರೋನಾ -19 ಲಸಿಕೆಗಳು ಜೆಎನ್​.1 ರೂಪಾಂತರ ತಳಿ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ತಿಳಿಸಿದೆ.
ವಿಶ್ವದ ಬೃಹತ್ ಕಟ್ಟಡ ಉದ್ಘಾಟಿಸಲಿರೋ ಪ್ರಧಾನಿ ಮೋದಿ: ವಜ್ರಗಳ ವ್ಯಾಪಾರಕ್ಕೆ ಮೀಸಲು..ಇದು ಇರುವುದಾದರೂ ಎಲ್ಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
