ನವದೆಹಲಿ:130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕರೊನಾ ಔಷಧ ವಿತರಣೆ ಮಾಡಲು ಕನಿಷ್ಠ ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. 2021ರ ಆರಂಭಕ್ಕೆ ಔಷಧ ಲಭ್ಯವಾದರೂ ಎಲ್ಲರಿಗೂ ಸಿಗಲು ಒಂದು ವರ್ಷ ಬೇಕಾಗಬಹುದು ಎಂದು ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ.
ಔಷಧ ವಿತರಣೆ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರ ವಿಶೇಷ ಸಮಿತಿ ರಚಿಸಿದ್ದು, ಆಯಾ ರಾಜ್ಯಗಳಲ್ಲೂ ಸಮಿತಿ ರಚಿಸಲು ಸೂಚನೆ ನೀಡಲಾಗಿದೆ. ಜಿಲ್ಲಾವಾರು ಔಷಧ ವಿತರಣೆ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಸಮಿತಿ ನೋಡಿಕೊಳ್ಳಬೇಕಿದೆ. ಜಿಲ್ಲೆಗಳೊಂದಿಗೆ ಮತ್ತು ಕೇಂದ್ರದ ಸಮಿತಿಯೊಂದಿಗೆ ಸಮನ್ವಯ ಕಾಪಾಡಿಕೊಳ್ಳಬೇಕಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮುಖ್ಯಭೂಮಿಕೆ ಕೆಲಸಗಾರರಿಗೆ ಮೊದಲ ಹಂತದಲ್ಲಿ ಔಷಧ ವಿತರಿಸಲಾಗುವುದು. ನಂತರ ಹಂತ ಹಂತವಾಗಿ ಬೇರೆ ವರ್ಗದ ಜನರಿಗೆ ವಿತರಿಸಲಾಗುವುದು. ಎಲ್ಲ ವರ್ಗದ ಜನರಿಗೆ ಔಷಧ ವಿತರಣೆ ಮಾಡುವುದಕ್ಕೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಭಾರತದಲ್ಲಿ ಶುಕ್ರವಾರ 59,500 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5.82 ಲಕ್ಷಕ್ಕೆ ಇಳಿದಿದೆ. ಚೇತರಿಕೆ ಪ್ರಮಾಣ ಶೇ. 91.34ಕ್ಕೆ ಏರಿಕೆಯಾಗಿದೆ. ಒಂದೇ ದಿನ 48,650 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 81.37 ಲಕ್ಷಕ್ಕಿಂತ ಅಧಿಕವಾಗಿದೆ. ಮೃತರ ಸಂಖ್ಯೆ 1.216 ಲಕ್ಷ ದಾಟಿದೆ. ಮರಣ ಪ್ರಮಾಣ ಶೇ. 1.49ಕ್ಕೆ ಇಳಿದಿದೆ.
ಔಷಧದ ದರ 400ನಿಂದ 5,500 ರೂಪಾಯಿ?:ಮುಂದಿನ ವರ್ಷದ ಆರಂಭಕ್ಕೆ ಒಂದು ಅಥವಾ ಹೆಚ್ಚು ಮೂಲಗಳಿಂದ ಔಷಧ ಲಭ್ಯವಾಗುವ ಸಾಧ್ಯತೆಯಿದೆ. ಔಷಧದ ದರ 400 ರೂ.ನಿಂದ, 5,500 ರೂ.ವರೆಗೆ ಇರುವ ಸಾಧ್ಯತೆಯಿದೆ. ಔಷಧದ ಸಂಶೋಧನೆ, ಅಧ್ಯಯನ, ಪ್ರಯೋಗ, ಉತ್ಪಾದನೆಯ ಆಧಾರದ ಮೇಲೆ ಬೆಲೆ ನಿಗದಿ ಮಾಡಲಾಗುವುದು.
ಅಮೆರಿಕದಲ್ಲಿ ಲಕ್ಷ ಪ್ರಕರಣ:ಕರೊನಾ ಸೋಂಕಿನಲ್ಲಿ ದಾಖಲೆ ಬರೆಯುತ್ತಿರುವ ಅಮೆರಿಕದಲ್ಲಿ ಶುಕ್ರವಾರ ಒಂದೇ ದಿನ 1.01 ಲಕ್ಷ ಹೊಸ ಪ್ರಕರಣ ದೃಢವಾಗಿದೆ. ವಿಶ್ವದ ಯಾವುದೇ ರಾಷ್ಟ್ರದಲ್ಲಿಯೂ ಈವರೆಗೆ ಈ ಪ್ರಮಾಣದ ಏರಿಕೆ ಕಂಡುಬಂದಿರಲಿಲ್ಲ. ಈ ಹಿಂದೆ ಭಾರತದಲ್ಲಿ 98 ಸಾವಿರದವರೆಗೆ ಏಕದಿನ ಏರಿಕೆ ದಾಖಲಾಗಿತ್ತು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಸಭೆಗಳು ನಡೆಯುತ್ತಿವೆ. ದೇಶದಲ್ಲಿನ ತಾಪಮಾನವೂ ಅತ್ಯಂತ ಕಡಿಮೆಯಿರುವ ಹಿನ್ನೆಲೆಯಲ್ಲಿ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.
700 ಕಿ.ಮೀ. ಟ್ರಾಫಿಕ್ ಜಾಮ್:ಕರೊನಾ ಹಿನ್ನೆಲೆಯಲ್ಲಿ ಫ್ರಾನ್ಸ್​ನಲ್ಲಿ ಮತ್ತೊಮ್ಮೆ ಲಾಕ್​ಡೌನ್ ಮಾಡಲಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಜನರು ಪಟ್ಟಣ ತೊರೆಯುತ್ತಿದ್ದಾರೆ. ಶುಕ್ರವಾರ ಪ್ಯಾರಿಸ್​ನಲ್ಲಿ ಸುಮಾರು 700 ಕಿ.ಮೀನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಶುಕ್ರವಾರದಿಂದ ಲಾಕ್​ಡೌನ್ ಆರಂಭವಾಗಿದ್ದು, ನಾಲ್ಕು ವಾರಗಳ ಕಾಲ ಕಠಿಣ ನಿರ್ಬಂಧಗಳು ಜಾರಿಯಲ್ಲಿರಲಿವೆ. ಜನರಿಗೆ ಮನೆಯಲ್ಲಿಯೇ ಉಳಿಯುವಂತೆ ಆದೇಶಿಸಲಾಗಿದ್ದು, ತುರ್ತು ಕೆಲಸದ ಮೇರೆಗೆ ದಿನಕ್ಕೆ ಒಂದು ಗಂಟೆ ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಪ್ಯಾರಿಸ್, ಲಿಯಾನ್, ನೈಸ್, ಮಾರ್ಸೆಲ್ಲೆನಂತಹ ಪ್ರಮುಖ ನಗರಗಳಲ್ಲಿನ ಅಪಾರ್ಟ್​ವೆುಂಟ್​ಗಳಲ್ಲಿ ಲಾಕ್​ಡೌನ್ ಕಳೆಯಲು ಬಯಸದ ಜನರು ನಗರದಿಂದ ಹೊರ ಹೋಗಲಾರಂಭಿಸಿದ್ದಾರೆ. ಈ ಕಾರಣ ನಗರ ಭಾಗಗಳಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
20 ಸಾವಿರ ಸಿಬ್ಬಂದಿ ಬಲಿ:ಕರೊನಾ ಸೋಂಕಿಗೆ ವಿಶ್ವದ 44 ರಾಷ್ಟ್ರಗಳಲ್ಲಿ ಈವರೆಗೆ 20 ಸಾವಿರ ವೈದ್ಯಕೀಯ ಸಿಬ್ಬಂದಿ ಬಲಿಯಾಗಿದ್ದಾರೆ ಎಂದು ಇಂಟರ್​ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ ತಿಳಿಸಿದೆ. ಅದರಲ್ಲಿ 1,500 ಜನರು ನರ್ಸ್​ಗಳಾಗಿದ್ದರು ಎಂದು ತಿಳಿಸಲಾಗಿದೆ. ಜಾಗತಿಕವಾಗಿ ಸೋಂಕಿಗೆ ತುತ್ತಾಗಿರುವವರಲ್ಲಿ ಶೇ. 10 ಪಾಲು ವೈದ್ಯಕೀಯ ಸಿಬ್ಬಂದಿಯದ್ದಾಗಿದೆ.
ಕೇರಳ ಬೀಚ್​ಗಳು ಮುಕ್ತ:ಕರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ನಿರ್ಬಂಧಿಸಿದ್ದ ಕೇರಳ ಇದೀಗ ಪ್ರವಾಸಿಗರ ಆಗಮನಕ್ಕೆ ಅವಕಾಶ ನೀಡಿದೆ. ಭಾನುವಾರದಿಂದ ರಾಜ್ಯದ ಸಮುದ್ರ ತೀರಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಮೊದಲನೇ ಹಂತದ ಅನ್​ಲಾಕ್ (ಅ.12)ನಲ್ಲಿ ಬೆಟ್ಟಗಳು, ಹಿನ್ನೀರು ಪ್ರದೇಶ, ಹೌಸ್ ಬೋಟ್ ಸೇರಿ ಅನೇಕ ಪ್ರವಾಸಿ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
