ಜಲಗಾಂವ್:ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಎಂಟು ದಿನಗಳ ಹಿಂದೆ ನಾಪತ್ತೆಯಾದ, ಭೂಸಾವಲ್ ಮೂಲದ ವೃದ್ಧೆ (82) ಅದೇ ಆಸ್ಪತ್ರೆಯ ಶೌಚಾಲಯದೊಳಗೆ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಇದನ್ನೂ ಓದಿ:‘ಆ ದಿನಗಳು’ : ಶತಕದ ಸಂಭ್ರಮದಲ್ಲಿರುವ ವಾಯುಪಡೆಯ ಹಿರಿಯ ಸೇನಾನಿಯ ಅವಿಸ್ಮರಣೀಯ ನೆನಪುಗಳೇನು?
ಜಿಲ್ಲಾಪೇಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅಕ್ಬರ್ ಪಟೇಲ್ ಹೇಳುವಂತೆ, ಜಲಗಾಂವ್ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ಆಕೆಯ ಕುಟುಂಬಸ್ಥರು ಜೂನ್ 2 ರಂದು ಆಕೆ ಕಾಣಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.ನಂತರ ಭೂಸಾವಲ್​​​ನಲ್ಲಿ ಸಂಪೂರ್ಣ ವಿಚಾರಣೆ ನಡೆಸಲಾಗಿತ್ತು. ಆಕೆಯ ಸಂಬಂಧಿಕರ ಸಮ್ಮುಖದಲ್ಲೇ ಎಲ್ಲ ರೋಗಿಗಳ ರೆಜಿಸ್ಟರ್​​​ಗಳನ್ನು ಪರಿಶೀಲಿಸಿದ್ದೂ ಆಗಿತ್ತು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ನಂತರ ಜೂನ್ 6 ರಂದು ದೂರು ದಾಖಲಿಸಿರುವುದಾಗಿ ಪಟೇಲ್ ತಿಳಿಸಿದರು.
ಇದನ್ನೂ ಓದಿ:ಪತಿಗೆ ತಿಳಿಯದೇ ಮಾಡಿದಳು ಕಿತಾಪತಿ: ಪತ್ನಿಯನ್ನೇ ಯಾಮಾರಿಸಿ ಓಡಿಹೋದ ಪ್ರೇಮಿ!
ಮೇ 27 ರಂದು ಆ ವೃದ್ಧೆಗೆ ಪರೀಕ್ಷೆ ನಡೆಸಲಾಗಿದ್ದು, ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮೊದಲು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಣೆಯಾದ ಮಾಹಿತಿ ಬಂದ ನಂತರ ತನಿಖೆಗಾಗಿ ಪೊಲೀಸ್ ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ:ಪೂರ್ವಜ ಇಲ್ಯಾಕೆ ಬಂದಿದ್ದ ಗೊತ್ತಾ? ಕೇಳಿದರೆ ಅಯ್ಯೋ ಪಾಪ ಅನ್ಸುತ್ತೆ
ಜೂನ್ 2 ರವರೆಗೆ ಆಕೆ ವಾರ್ಡ್​​​ನಲ್ಲಿ ಕಾಣಿಸಿಕೊಂಡಿದ್ದರೆಂದು ಜಲಗಾಂವ್ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದು, ನಂತರ ಆಕೆ ಎಲ್ಲಿದ್ದಾರೆ ಎಂದು ತಿಳಿದಿರಲಿಲ್ಲ. ಇಂದು ಆಸ್ಪತ್ರೆಯ ಶೌಚಾಲಯವೊಂದರಲ್ಲಿ ದುರ್ವಾಸನೆ ಬಂದಿದ್ದು. ಹೋಗಿ ನೋಡಿದಾಗ ಅಲ್ಲಿ ಮಹಿಳೆಯ ಶವ ಕಂಡುಬಂತು. ಈ ಕುರಿತು ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪಟೇಲ್ ಹೇಳಿದರು.
ಇದನ್ನೂ ಓದಿ:20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?
ಅಜ್ಜಿಯ ಸಾವಿನಿಂದ ಆಕ್ರೋಶಗೊಂಡ ಆಕೆಯ ಮೊಮ್ಮಗ ಈ ಸಾವಿನ ಪ್ರಕರಣದ ತನಿಖೆ ನಡೆಸಿ, ನಿರ್ಲಕ್ಷ್ಯವಹಿಸಿದ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ವೀಡಿಯೋ ಸಂದೇಶ ಕಳುಹಿಸಿ ಮನವಿ ಮಾಡಿದ್ದಾರೆ.ಕಳೆದ ಮೂರು ದಿನಗಳಲ್ಲಿ ಕಾಣೆಯಾದ ಕೋವಿಡ್ -19 ರೋಗಿಗಳು ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ.
ಇದನ್ನೂ ಓದಿ:ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೊವಿಡ್​-19 ಟೆಸ್ಟ್ ರಿಪೋರ್ಟ್​ನಲ್ಲಿ ಹೊರಬಿದ್ದ ಸತ್ಯವೇ ಬೇರೆ…
ಮಂಗಳವಾರ, ಕೋವಿಡ್ -19 ರೋಗದಿಂದ ಬಳಲುತ್ತಿದ್ದ 80 ವರ್ಷದ ವೃದ್ಧನ ಶವ ಪತ್ತೆಯಾದ ನಂತರ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ತನಿಖೆಗೆ ಆದೇಶಿಸಿದ್ದರು. ಆ ರೋಗಿ ಭಾನುವಾರ ಕಂಡಿವಲಿಯ ಡಾ.ಬಿ.ಆರ್. ಅಂಬೇಡ್ಕರ್ ಶತಾಬ್ದಿ ಆಸ್ಪತ್ರೆಯಿಂದ ಕಾಣಿಯಾಗಿದ್ದು, ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಶವ ಬೋರಿವಲಿ ನಿಲ್ದಾಣದ ಬಳಿ ಪತ್ತೆಯಾಗಿತ್ತು.
ಮೇ ತಿಂಗಳಲ್ಲಿ ಜಾಗತಿಕವಾಗಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಯಾವುದು? ಭಾರತವೇ ಮೊದಲು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
