ನವದೆಹಲಿ:ಕೋವಿಡ್​ ಸಂಕಷ್ಟದ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ವಿಶೇಷ ರೈಲುಗಳ ಪ್ರಯಾಣಿಕರಿಗೆ ಮಾತ್ರವಲ್ಲ, ಇತರ ಉದ್ದೇಶಕ್ಕೂ ಬಳಕೆಯಾಗುತ್ತಿದೆ.
ದೆಹಲಿಯ ಅಬಕಾರಿ ಸುಂಕದ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಈ ಸತ್ಯ ಬಯಲಾಗಿದೆ. ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಿದೇಶಿ ಬ್ರಾಂಡ್​ಗಳ ಸಿಗರೇಟ್​ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ;ಹತ್ಯೆಗೀಡಾದ ಉಗ್ರರ ಬಳಿ ಪಾಕ್​ ನಿರ್ಮಿತ ಗ್ರನೇಡ್​ಗಳು; ಗಡಿ ನಿಯಂತ್ರಣ ರೇಖೆಯ ನೂರು ಮೀಟರ್​ ದೂರದಲ್ಲಿ ಕಾರ್ಯಾಚರಣೆ
ದೇಶದ ವಿವಿಧ ಕಡೆಗಳಿಗೆ ಸಾಗಿಸಲಾಗುತ್ತಿದ್ದ 23.5 ಲಕ್ಷ ಸಿಗರೇಟ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮಾರುಕಟ್ಟೆ ಮೌಲ್ಯ 1.60 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ದೇಶದಲ್ಲಿ ಬಳಕೆಯಾಗುವ ಶೇ.25 ಸಿಗರೇಟ್​ಗಳು ಅಕ್ರಮ ವಿದೇಶಿ ಸಿಗರೇಟ್​ಗಳಾಗಿವೆ ಎಂದು ಭಾರತೀಯ ತಂಬಾಕು ಮಂಡಳಿ ವರದಿ ಹೇಳುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 13,000 ಕೋಟಿ ರೂ. ತೆರಿಗೆ ವಂಚನೆಯಾಗುತ್ತಿದೆ.
ಇದನ್ನೂ ಓದಿ;ಕಾಂಗ್ರೆಸ್​ ಶಾಸಕರಿಗೆ 15 ಕೋಟಿ ರೂ. ಆಫರ್​; ರಾಜಸ್ಥಾನದಲ್ಲೂ ಆಪರೇಷನ್​ ಕಮಲ?
ಜುಲೈ 8ರಂದು ನಡೆದ ದಾಳಿಯಲ್ಲಿ ಪ್ಯಾರಿಸ್​ನ 4.5 ಲಕ್ಷ ಸಿಗರೇಟ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಮೌಲ್ಯ 40 ಲಕ್ಷ ಎಂದು ಅಂದಾಜಿಸಲಾಗಿತ್ತು. ಬಾಂಗ್ಲಾದೇಶ, ಮಯನ್ಮಾರ್​ನಿಂದ ಈ ಕಳ್ಳಸಾಗಣೆ ನಡೆಯುತ್ತಿದೆ. ವಾರಾಣಸಿಯ ಕೋವಿಡ್​ ವಿಶೇಷ ರೈಲಿನ ಮೂಲಕ ದೆಹಲಿಗೆ ತರಲಾಗಿತ್ತು. ಇನ್ನೊಂದು ವಿಶೇಷವೆಂದರೆ, ಭಾರತಕ್ಕೆ ಬರುವ ಕಳ್ಳನೋಟುಗಳಿಗೂ ಈ ದೇಶಗಳ ಗಡಿ ರಾಜಮಾರ್ಗವಾಗಿದೆ.
ಇದಾದ ಎರಡು ದಿನಗಳ ಬಳಿಕ ಕೊರಿಯಾದ ಗೋಲ್ಡ್​ ಎಸ್ಸೆ ಬ್ರ್ಯಾಂಡ್​ನ 10 ಲಕ್ಷ ಸಿಗರೇಟ್​ಗಳನ್ನು ಜಪ್ತಿ ಮಾಡಲಾಗಿತ್ತು. ಇದರ ಮೌಲ್ಯ 1.2 ಕೋಟಿ ರೂ. ಇದನ್ನು ಕೂಡ ಕೋವಿಡ್​ ವಿಶೇಷ ರೈಲಿನಲ್ಲಿ ತರಲಾಗಿತ್ತು. ಇದಲ್ಲದೇ, ಗೋಣಿಚೀಲಗಳಲ್ಲಿ 9 ಲಕ್ಷ ಸಿಗರೇಟ್​ಗಳಿದ್ದುದನ್ನು ವಶಪಡಿಸಿಕೊಳ್ಳಲಾಗಿತ್ತು.
ಕರೊನಾ ಕವಚ; ಕೋವಿಡ್​ನಿಂದ ಬಚಾವಾಗಲು ಇಲ್ಲಿವೆ ವಿಶೇಷ ವಿಮಾ ಯೋಜನೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
